ಹಿರೇಕೆರೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ಭವ್ಯಪಥಸಂಚಲನ ನಡೆಯಿತು.
ತರಳಬಾಳು ಸಿಬಿಎಸ್ಸಿ ಶಾಲೆ ಆವರಣದಿಂದ ಪ್ರಾರಂಭವಾಗಿ ಚೌಡಿ ಸರ್ಕಲ್, ಬಸ್ ಸ್ಟ್ಯಾಂಡ್, ಸರ್ವಜ್ಞ ಸರ್ಕಲ್, ಚಿಕ್ಕೇರೂರು ರಸ್ತೆ, ತಂಬಾಕು ನಗರ ಮೂಲಕ ಸಾಗಿತು. ತಾಲೂಕಿನ ಸ್ವಯಂಸೇವಕರು ಗಣವೇಶದೊಂದಿಗೆ ಪಾಲ್ಗೊಂಡಿದ್ದರು. ರಸ್ತೆಗಳಲ್ಲಿ ಬಂಟಿಂಗ್ಸ್, ರಂಗೋಲಿ ಹೂಗಳಿಂದ ಮಹನೀಯರ ಭಾವಚಿತ್ರಗಳೊಂದಿಗೆ ಕಂಗೊಳಿಸಿತ್ತು. ನಂತರ ಆಕರ್ಷಕ ಸಂಘದ ಘೋಷ್ ನುಡಿಸಲಾಯಿತು.ಕಾರ್ಯಕ್ರಮದಲ್ಲಿ ವಿಭಾಗ ಬೌದ್ಧಿಕ ಪ್ರಮುಖರಾದ ಗುರುರಾಜ್ ಕುಲಕರ್ಣಿ ಅವರು ಸಂಘ ಶತಾಬ್ದಿಯ ಪ್ರಯುಕ್ತ ನಡೆಯುತ್ತಿರುವ ಗೃಹಸಂಪರ್ಕ ಅಭಿಯಾನದ ಕುರಿತು ಮಾಹಿತಿ ನೀಡಿ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸುವಂತೆ ತಿಳಿಸಿದರು. ಮಾಜಿ ಸಚಿವ ಬಿ.ಸಿ. ಪಾಟೀಲ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಪ್ರಚಾರ ಪ್ರಮುಖರಾದ ಚಂದ್ರು ಕೊರಗಾರ್. ಹಿರೇಕೆರೂರು ತಾಲೂಕು ಕಾರ್ಯವಾಹ ಸುನಿಲ್ ಕನ್ನಮ್ಮನವರ್. ತಾಲೂಕು ಸಂಪರ್ಕ ಪ್ರಮುಖರಾದ ರವಿ ಖಂಡಿಬಾಗುರು, ಜಗದೀಶ ದೊಡ್ಡಗೌಡ್ರ, ಸಂಘದ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.