ಹಾವೇರಿ: ಕಳೆದ ಬಾರಿ ಬೆಳಗಾವಿ ಸುವರ್ಣವಿಧಾನಸೌಧದ ಬಳಿ ಪ್ರತಿಭಟನಾ ನಿರತ ಪಂಚಮಸಾಲಿ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ನಡೆಸಿದ ಹಲ್ಲೆಯನ್ನು ಖಂಡಿಸಿ ಡಿ.10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನವನ್ನಾಗಿ ಆಚರಣೆ ಮಾಡುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಯಾರು ಹೋರಾಟದ ಪರವಾಗಿ ಇರುತ್ತಾರೋ ಅವರಿಗೆ ನಮ್ಮ ಬೆಂಬಲ ಕೊಡುತ್ತೇವೆ. ಮಾಜಿಗಳು ಇದ್ದಾಗ ಎಲ್ಲರೂ ಹೋರಾಟಕ್ಕೆ ಬರುತ್ತಾರೆ, ಅಧಿಕಾರ ಬಂದ ಮೇಲೆ ಕೆಲವರು ಹೋರಾಟದಿಂದ ಹಿಂದೆ ಸರಿಯುತ್ತಾರೆ. ಅದು ಅವರ ಪಕ್ಷ, ಸಿದ್ಧಾಂತದ ಮೇಲೆ ನಿರ್ಧಾರವಾಗುತ್ತದೆ. ವ್ಯಕ್ತಿಯ ನಡವಳಿಕೆ, ಅವರ ಬೆಂಬಲದ ಮೇಲೆ ನಮ್ಮ ಜನರು ಅವರಿಗೆ ಬೆಂಬಲ ಸೂಚಿಸುತ್ತಾರೆ. ಎಲ್ಲಾ ಹೋರಾಟಗಳನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಾರೆ. ನಾವು ಸಮಾಜದ ಪರವಾಗಿ ಕೆಲಸ ಮಾಡುತ್ತೇವೆ. ಅಧಿವೇಶನದಲ್ಲಿ ಸಮಾಜದ ಬಗ್ಗೆ ಮಾತನಾಡಿ, ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಎಲ್ಲರೂ ಬಿಡುವು ಮಾಡಿಕೊಂಡು ಬಂದು ಹೋರಾಟದಲ್ಲಿ ಭಾಗವಹಿಸುವಂತೆ ಹೇಳಿದ್ದೇವೆ. ನಾವು ಸಮಾಜಕ್ಕೆ ಒಳಿತಾಗಬೇಕು ಎಂದು ಎಲ್ಲರನ್ನೂ ಕರೆಯುತ್ತಿದ್ದೇವೆ. ವಕೀಲರ ಪರಿಷತ್ ರಚನೆ ಆದ ಮೇಲೆ ಯಾವ ರಾಜಕಾರಣಿಗಳನ್ನು ನಮ್ಮ ಹೋರಾಟದ ವೇದಿಕೆ ಮೇಲೆ ಕೂರಿಸಬಾರದು ಎಂದು ನಿರ್ಧಾರ ಮಾಡಿದ್ದೇವೆ ಎಂದರು.
ಕಳೆದ ಐದು ವರ್ಷಗಳಿಂದ ಮೀಸಲಾತಿಗಾಗಿ ನ್ಯಾಯಯುತ ಹೋರಾಟ ಮಾಡುತ್ತಿದ್ದೇವೆ. 2ಎ ಮೀಸಲಾತಿ ಪ್ರಮಾಣಪತ್ರ ಸಿಗುವವರೆಗೆ ಹೋರಾಟ ಕೈ ಬಿಡಬಾರದೆಂದು ನಿರ್ಧಾರ ಮಾಡಿದ್ದು, ಲಾಠಿ ಏಟು, ಗುಂಡೇಟು ಕೊಟ್ಟರೂ ನಮ್ಮ ಹೋರಾಟ ಮಾತ್ರ ನಿರಂತರವಾಗಿ ನಡೆಯಲಿದೆ ಎಂದುಸುದ್ದಿಗೋಷ್ಠಿಯಲ್ಲಿ ಬಸವರಾಜ ಹಾಲಪ್ಪನವರ, ಸಿದ್ದಣ್ಣ ಚಿಕ್ಕಬಿದರಿ, ಎಚ್.ಸಿ. ಸಿದ್ದನಗೌಡ, ಶಿವಾನಂದ ಬಾಗೂರು, ಮಂಜುನಾಥ ಸವಣೂರು, ರಾಜಣ್ಣ ಮೋಟಗಿ, ಪರಮೇಶ ಹಲಗೇರಿ, ಲಿಂಗಣ್ಣ ಚಳಗೇರಿ, ದಾನೇಶಪ್ಪ ಕೆಂಗೊಂಡ, ಎಂ.ಸಿ. ಭರಮಣ್ಣವರ, ಐ.ವಿ. ಪಾಟೀಲ, ಕುರವತ್ತಿಗೌಡ್ರ, ಎಸ್.ಸಿ. ಪಾಟೀಲ ಇದ್ದರು. ಕಪ್ಪು ಪಟ್ಟಿ ಧರಿಸಿ ಮೌನ ಪಥಸಂಚಲನ..2ಎ ಮೀಸಲಾತಿ ಸಿಗುವವರೆಗೆ ದೌರ್ಜನ್ಯ ದಿನವನ್ನು ನರಗುಂದ ಬಂಡಾಯದ ಹೋರಾಟದ ರೀತಿಯಲ್ಲಿ ಪ್ರತಿವರ್ಷ ಮಾಡುತ್ತೇವೆ. ಕೈಗೆ, ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಬೆಳಗಾವಿಯಲ್ಲಿ ಮೌನ ಪಥಸಂಚಲನ ಮಾಡುತ್ತೇವೆ. ನಮ್ಮ ಸಮಾಜದ ಸಾವಿರಾರು ಜನರು ಅಲ್ಲಿಗೆ ಬರಬೇಕು. ಗಾಂಧಿಭವನದಿಂದ ನಡೆದುಕೊಂಡು ಹೋಗುತ್ತೇವೆ. ಜಿಲ್ಲಾಧಿಕಾರಿಗಳು ತೋರಿಸಿದ ಸ್ಥಳದಲ್ಲಿ ಒಂದು ದಿನ ಹೋರಾಟ ಮಾಡುತ್ತೇವೆ ಎಂದು ಶ್ರೀಗಳು ಹೇಳಿದರು.