ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ

KannadaprabhaNewsNetwork |  
Published : Nov 19, 2026, 03:00 AM IST
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ | Kannada Prabha

ಸಾರಾಂಶ

ನಗರದ ಡಾ.ಬಾಬು ಜಗಜೀವನರಾಮ ವೃತ್ತದಿಂದ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಭವ್ಯ ಪಥಸಂಚಲನ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಗಣವೇಷಧಾರಿಗಳು ಎರಡು ಭಾಗಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಪಥಸಂಚಲನೆಯಲ್ಲಿ ಭಾಗಿಯಾದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಡಾ.ಬಾಬು ಜಗಜೀವನರಾಮ ವೃತ್ತದಿಂದ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಭವ್ಯ ಪಥಸಂಚಲನ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಗಣವೇಷಧಾರಿಗಳು ಎರಡು ಭಾಗಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಪಥಸಂಚಲನೆಯಲ್ಲಿ ಭಾಗಿಯಾದರು. ಹಿರಿಯರು, ಯುವಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರೆ, ಮಕ್ಕಳು ಸಹ ಗಣವೇಷದಲ್ಲಿ ಶಿಸ್ತುಬದ್ಧವಾಗಿ ಪಥಸಂಚಲನದಲ್ಲಿ ಸಾಗಿದರು. ಸುಶ್ರಾವ್ಯ ಹಿಮ್ಮೇಳನ, ಕೊಳಲಿನ ವಾದನ ಹೀಗೆ ಸಂಗೀತದ ವೈಭವಯುತ ಹಿಮ್ಮೇಳನದಲ್ಲಿ ಪಥಸಂಚಲನ ಸಾಗಿತು. ಪಥಸಂಚಲನದ ದಾರಿಯುದ್ದಕ್ಕೂ ಮಹಿಳೆಯರು ಆಕರ್ಷಕ ರಂಗೋಲಿ ಕಣ್ಮನ ಸೆಳೆಯುವಂತಿತ್ತು. ಸಾರ್ವಜನಿಕರು ಪಥಸಂಚಲನ ಸಾಗುವ ಎರಡು ಬದಿಯಲ್ಲಿ ನಿಂತು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದು ಗೌರವ ಸಲ್ಲಿಸಿದರು.

ಅಲ್ಲಲ್ಲಿ ರಾಷ್ಟ್ರಭಕ್ತರ ವೇಷದಲ್ಲಿ ಚಿಣ್ಣರು ಕಂಗೊಳಿಸಿ ಗಮನ ಸೆಳೆದರು. ಡಾ.ಬಾಬು ಜಗಜೀವನರಾಂ ವೃತ್ತದಿಂದ ಸಾಗಿದ ಪಥಸಂಚಲನ ವಾಟರ್‌ ಟ್ಯಾಂಕ್ ಸರ್ಕಲ್, ಶಿವಾಜಿ ವೃತ್ತ, ಉಪಲಿ ಬುರುಜ್, ಡಾ.ಕೇಶವ ಹೆಡಗೇವಾರ ವೃತ್ತ, ಗಾಂಧೀಜಿ ವೃತ್ತ ಸೇರಿ ಪ್ರಮುಖ ಮಾರ್ಗಗಳಲ್ಲಿ ಸಾಗಿ ದರಬಾರ ಹೈಸ್ಕೂಲ್ ಮೈದಾನ ತಲುಪಿತು.ದರಬಾರ ಹೈಸ್ಕೂಲ್‌ ಮೈದಾನದಲ್ಲಿ ನಡೆದ ಸಂಘದ ಬೌದ್ಧಿಕ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಕ್ಷೇತ್ರ ಸಂಯೋಜಕ ಜಗದೀಶ ಕಾರಂತ ಮಾತನಾಡಿ, ಬಾಂಗ್ಲಾ, ನೇಪಾಳ, ಶ್ರೀಲಂಕಾ ಮಾದರಿಯಲ್ಲಿ ಧಂಗೆ ಎಬ್ಬಿಸುತ್ತೇವೆ ಎಂದು ರಸ್ತೆಯಲ್ಲಿ ಕುಳಿತು ಕೆಲವು ವಿದ್ರೋಹಿ ಶಕ್ತಿಗಳುತ್ತಿವೆ. ಪಾರ್ಲಿಮೆಂಟ್‌ನಲ್ಲಿ ಚರ್ಚೆ ನಡೆಸುವುದನ್ನು ಬಿಟ್ಟು ಧಂಗೆ ಎಬ್ಬಿಸುವ ಪ್ರಯತ್ನ ಮಾಡುತ್ತಿವೆ. ಪ್ರಧಾನಮಂತ್ರಿ ಮನೆಗೆ ನುಗ್ಗುವುದು, ರಾಷ್ಟ್ರಪತಿಗಳ ನಿವಾಸ ಛಿದ್ರ ಛಿದ್ರ ಮಾಡುವುದು, ಸುಪ್ರೀಂಕೋರ್ಟ್ ಸುಡುವ ಮೊದಲಾದ ದೇಶ ದ್ರೋಹಿ ಧಂಗೆಗಳು ಬಾಂಗ್ಲಾ, ನೇಪಾಳದಲ್ಲಿ ನಡೆದು ಹೋಗಿವೆ. ಅದೇ ರೀತಿ ಧಂಗೆಯನ್ನು ಪ್ರಚೋದಿಸುವ ಕಾರ್ಯ ನಡೆಯುತ್ತಿರುವುದು ದುರಂತ. ಆದರೆ, ಇದು ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಅಲ್ಲ, ಇಲ್ಲಿ ಹಿಂದೂ ಸದಾ ಜಾಗೃತವಾಗಿದ್ದಾನೆ, ಇನ್ನೂ ಮುಂದೆ ಈ ದೇಶ ಪರಕೀಯ ಆಳ್ವಿಕೆಗೆ ಒಳಗಾಗುವುದಿಲ್ಲ ಎಂದರು.ನಿವೃತ್ತ ಅಧಿಕಾರಿ ಶಂಕರ ಪುಕಾಳೆ ಮುಖ್ಯ ಅತಿಥಿಯಾಗಿದ್ದರು. ವಿಭಾಗ ಸಂಚಾಲಕ ಚಿದಂಬರ ಕರಮರಕರ ಉಪಸ್ಥಿತರಿದ್ದರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ನಾಯಕರು ಸಭಿಕರ ಸಾಲಿನಲ್ಲಿ ಕುಳಿತಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಕನ್ನಡ ನಾಡು, ನುಡಿಯ ರಕ್ಷಣೆ ನಮ್ಮೆಲ್ಲರ ಹೊಣೆ