ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಆಲಂಬಾಡಿ ಕಾವಲು ಗ್ರಾಮದ ರೈತ ಕುಟುಂಬಕ್ಕೆ ಸೇರಿದ ಆರ್.ಟಿ.ಒ ಮಲ್ಲಿಕಾರ್ಜುನ್ ಪ್ರಸ್ತುತ ನಾಗಮಂಗಲ ಮತ್ತು ಬೆಂಗಳೂರು ಕಚೇರಿಗಳ ಸಹಾಯಕ ಪ್ರಾದೇಶಿಕ ಸಾರಿಗೆ ಮುಖ್ಯ ಅಧಿಕಾರಿಯಾಗಿ ಹಾಗೂ ಆರ್.ಟಿ.ಒ ಸಂಘದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ವಕ್ಷೇತ್ರ ಕೆ.ಆರ್.ಪೇಟೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ ತಮ್ಮ ಕೈಲಾದ ಮಟ್ಟಿಗೆ ಅರ್ಥಿಕ ಸಹಾಯ ಮಾಡುತ್ತಿರುವ ಮಲ್ಲಿಕಾರ್ಜುನ್ ತಾಲೂಕಿನಾದ್ಯಂತ ಸಾಂಸ್ಕೃತಿ ಚಟುವಟಿಕೆಗಳಿಗೆ, ರಂಗ ಕಲೆಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ, ದೇವಾಲಯ ಜೀರ್ಣೋದ್ಧಾರ ಮತ್ತಿತರ ಧಾರ್ಮಿಕ ಚಟುವಟಿಕೆಗಳಿಗೆ ಹಾಗೂ ಗ್ರಾಮೀಣ ಹಬ್ಬ ಹರಿದಿನಗಳ ಆಚರಣೆಗೂ ಆರ್ಥಿಕ ನೆರವಿನ ಸಹಾಯ ಹಸ್ತ ಚಾಚಿ ಉತ್ತೇಜಿಸುತ್ತಿದ್ದು ಸಮಾಜ ಸೇವೆಗೆ ಮನೆ ಮಾತಾಗಿದ್ದಾರೆ.ಅವಿರೋಧವಾಗಿ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಆರ್.ಟಿ.ಒ ಮಲ್ಲಿಕಾರ್ಜುನ್ ಅವರನ್ನು ತಾಲೂಕಿನ ಹಲವು ಗಣ್ಯರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಭಿನಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯಮಳವಳ್ಳಿ ತಾಲೂಕಿನ ಹಲಗೂರಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಅ.5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಶ್ವಿನ್‌ಕುಮಾರ್ ತಿಳಿಸಿದರು.
ಮಕ್ಕಳಿಗೆ ಅಂತರಿಕ್ಷ ವಿಜ್ಞಾನ, ರಾಕೆಟ್ ವಿಜ್ಞಾನ, ಇಸ್ರೋನ ಯಶಸ್ಸಿನ ಹಾದಿ, ವಸ್ತು ಪ್ರದರ್ಶನ ಹಾಗೂ ರಸಪ್ರಶ್ನೆ, ಆಶುಭಾಷಣ ಸ್ಪರ್ಧೆ, ಮಕ್ಕಳಿಂದ ವಿಜ್ಞಾನಕ್ಕೆ ಸಂಬಂಸಿದಂತೆ ವಸ್ತು ಪ್ರದರ್ಶನ ನಡೆಯಲಿದೆ. ಇದರಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.ಬಾಹ್ಯಾಕಾಶ ಸಪ್ತಾಹದಲ್ಲಿ ಹಲಗೂರು ಹೋಬಳಿ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಭಾಗವಹಿಸಲಿದ್ದಾರೆ ಎಂದರು.