ಮಹದೇಶ್ವರಸ್ವಾಮಿಗೆ ರುದ್ರಾಕ್ಷಿ ಅಲಂಕಾರ, ಭಕ್ತರಿಂದ ವೈಭವದ ಪೂಜೆ

KannadaprabhaNewsNetwork |  
Published : Nov 10, 2026, 12:45 AM IST
9ಕೆಎಂಎನ್ ಡಿ13 | Kannada Prabha

ಸಾರಾಂಶ

ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಸಂಜೆ ಜೆ.ಬ್ಯಾಡರಹಳ್ಳಿ ಮಲ್ಲಾರಾಧ್ಯ ಅವರಿಂದ ದೇವಸ್ಥಾನದ ಆವರಣದಲ್ಲಿ ಹೋಮ ಹವನ ಮತ್ತು ದೇವರ ಮೂರ್ತಿಗೆ ಅಭಿಷೇಕ ನಡೆಸಲಾಯಿತು. ಸೋಮವಾರ ಬೆಳಗ್ಗೆ ಭೀಮ ನದಿ ತೀರದಲ್ಲಿ ದೇವರ ಕರಗಕ್ಕೆ ಹೂವು ಹೊಂಬಾಳೆ ಮಾಡಿಕೊಂಡು ವಿವಿಧ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಗೊಲ್ಲರಹಳ್ಳಿಯ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರಮೂರ್ತಿಗೆ ರುದ್ರಾಕ್ಷಿ ಅಲಂಕಾರದ ನಂತರ ಪೂಜಾ ಪುನಸ್ಕಾರಗಳು ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು.

ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಸಂಜೆ ಜೆ.ಬ್ಯಾಡರಹಳ್ಳಿ ಮಲ್ಲಾರಾಧ್ಯ ಅವರಿಂದ ದೇವಸ್ಥಾನದ ಆವರಣದಲ್ಲಿ ಹೋಮ ಹವನ ಮತ್ತು ದೇವರ ಮೂರ್ತಿಗೆ ಅಭಿಷೇಕ ನಡೆಸಲಾಯಿತು. ಸೋಮವಾರ ಬೆಳಗ್ಗೆ ಭೀಮ ನದಿ ತೀರದಲ್ಲಿ ದೇವರ ಕರಗಕ್ಕೆ ಹೂವು ಹೊಂಬಾಳೆ ಮಾಡಿಕೊಂಡು ವಿವಿಧ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ತಮಟೆ ನಗಾರಿ ಮಂಗಳವಾದ್ಯ ಸಮೇತವಾಗಿ ಉಲ್ಲೇನಹಳ್ಳಿ ಜಗದೀಶ್ ಮತ್ತು ತಂಡದವರಿಂದ ವೀರಗಾಸೆ ಕುಣಿತ, ಭದ್ರಕಾಳಿ ಕುಣಿತ, ಶ್ರೀ ಮಹದೇಶ್ವರ ಸ್ವಾಮಿ ದೇವರ ಪೂಜಾ ಕುಣಿತದೊಂದಿಗೆ ದೇವರ ಕರಗವನ್ನು ಮೆರವಣಿಗೆ ಮುಖಾಂತರ ಮುತ್ತೈದೆಯರು ಕಳಸವನ್ನು ಹೊತ್ತು ದೇವಸ್ಥಾನದ ಆವರಣಕ್ಕೆ ತಂದಾಗ ಸ್ವಾಮಿ ವಿಗ್ರಹಕ್ಕೆ ಹಾಲರವಿ ಸೇವೆ, ಅಭಿಷೇಕ, ನೈವೇದ್ಯ ನಡೆಸಿ ನಂತರ ದೇವರ ಮೂರ್ತಿಯನ್ನು ಶುಚಿಗೊಳಿಸಿ ರುದ್ರಾಕ್ಷಿ ಮಾಲೆಗಳಿಂದ ವಿಶೇಷವಾಗಿ ಅಲಂಕರಿಸಿ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ಮಾದೇಶ್ವರ ದೇವಸ್ಥಾನದ ಅರ್ಚಕರಾದ ಮಹಾದೇವ ಮಾತನಾಡಿ, ಮಹಾದೇಶ್ವರ ಕರಗವನ್ನು ಹೊತ್ತು ಭೀಮನದಿ ತೀರದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಿ ಮೆರವಣಿಗೆ ಮುಖಾಂತರ ಪುಟಾಣಿ ಹೆಣ್ಣು ಮಕ್ಕಳು ಕಳಸವನ್ನು ಹೊತ್ತು ಮಡಿವಾಳ ಹಾಸಿದ ಮಡಿ ಮೇಲೆ ವೀರಗಾಸೆ ಕುಣಿತದೊಡನೆ ದೇವಸ್ಥಾನಕ್ಕೆ ಕರೆತರಲಾಯಿತು.

ನಂತರ ದೇವರಮೂರ್ತಿಗೆ ಕಳಸಗಳಿಂದ ಅಭಿಷೇಕಗಳನ್ನು ಹಾಲ ರವಿ ಸೇವೆ ನಡೆಸಿ ನಂತರ ವಿಶೇಷವಾಗಿ ದೇವರ ಮೂರ್ತಿಗೆ ರುದ್ರಾಕ್ಷಿ ಮಾಲೆ ಅಲಂಕರಿಸಿ ಗ್ರಾಮದ ನಾಡಗೌಡರು, ಯಜಮಾನರು ಮತ್ತು ನಮ್ಮ ಗ್ರಾಮ ಸೇರಿದಂತೆ ನಂಜಾಪುರ ಮತ್ತು ಸುತ್ತಮುತ್ತಲ ಗ್ರಾಮದ ಅಪಾರ ಭಕ್ತಾದಿಗಳು ಬಂದು ಪೂಜೆ ಸಲ್ಲಿಸಿದರು.

ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಸಲಾಯಿತು. ಸಂಜೆ ಕಾರ್ತಿಕ ಮಾಸದ ಅಂಗವಾಗಿ ದೀಪಗಳನ್ನು ಹಚ್ಚಿ ವಿಶೇಷವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಿ ಪ್ರಸಾದ ವಿನಿಯೋಗಿಸಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ