ಪ್ರೀತಿ, ಸಾಮರಸ್ಯ ಬೆಳೆಸುವ ಗ್ರಾಮಾಭಿವೃದ್ಧಿ ಯೋಜನೆ: ಸದಾನಂದ ಬಂಗೇರ

KannadaprabhaNewsNetwork |  
Published : Aug 30, 2026, 01:45 AM IST
ನರಸಿಂಹರಾಜಪುರ ತಾಲೂಕಿನ ಹಿಳುವಳ್ಳಿಯ ಸಾಧನ ಜ್ಞಾನ ವಿಕಾಸ ಕೇಂದ್ರದಲ್ಲಿ ನಡೆದ ವರ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರಧ.ಗ್ರಾ.ಯೋಜನೆ ಕುಟುಂಭಗಳಲ್ಲಿ ಪರಸ್ಪರ ಪ್ರೀತಿ, ಸಾಮರಸ್ಯ, ಗೌರವ ಬೆಳೆಸಿ ಉತ್ತಮ ಕುಟುಂಬ ಹಾಗೂ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಧ. ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.

- ಧ.ಗ್ರಾ.ಯೋಜನೆಯಿಂದ ಹಿಳುವಳ್ಳಿಯಲ್ಲಿ ವರಮಹಾ ಲಕ್ಷ್ಮೀಪೂಜೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಧ.ಗ್ರಾ.ಯೋಜನೆ ಕುಟುಂಭಗಳಲ್ಲಿ ಪರಸ್ಪರ ಪ್ರೀತಿ, ಸಾಮರಸ್ಯ, ಗೌರವ ಬೆಳೆಸಿ ಉತ್ತಮ ಕುಟುಂಬ ಹಾಗೂ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಧ. ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.

ಶುಕ್ರವಾರ ತಾಲೂಕಿನ ಹಳೇ ಮಂಡಗದ್ದೆ ರಸ್ತೆ, ಹಿಳುವಳ್ಳಿಯ ಗಣಪತಿ ಪೆಂಡಾಲ್‌ನ ಸಾಧನ ಜ್ಞಾನವಿಕಾಸ ಕೇಂದ್ರದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಮಾತನಾಡಿ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಸಂಘಟಿಸಿ, ಉಳಿತಾಯ, ಸ್ವಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುತ್ತಿದೆ. ಜ್ಞಾನವಿಕಾಸ ಕೇಂದ್ರಗಳ ಮೂಲಕ ಮಹಿಳೆಯರಿಗೆ ಆರೋಗ್ಯ, ಶಿಕ್ಷಣ, ಕುಟುಂಬ ನಿರ್ವಹಣೆ, ಕಾನೂನು ಅರಿವು ಹಾಗೂ ಸಾಮಾಜಿಕ ಜವಾಬ್ದಾರಿಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಭಾಗ್ಯಾನಂಜುಂಡಸ್ವಾಮಿ ಮಾತನಾಡಿ ಕುಟುಂಬ ನಿರ್ವಹಣೆ ಎಂದರೆ ಕೇವಲ ಆರ್ಥಿಕ ನಿರ್ವಹಣೆಯಲ್ಲ. ಕುಟುಂಬದ ಪ್ರತಿಯೊಬ್ಬ ಸದಸ್ಯರ ಅಗತ್ಯ ಅರ್ಥ ಮಾಡಿಕೊಂಡು, ಪರಸ್ಪರ ಗೌರವ, ಸಹಕಾರ, ಜವಾಬ್ದಾರಿ ಹಂಚಿಕೆ ಹಾಗೂ ಮುಕ್ತ ಸಂವಹನ ಮೂಲಕ ಕುಟುಂಬ ಮುನ್ನಡೆಸುವುದಾಗಿದೆ. ಶ್ರಾವಣ ಮಾಸದಲ್ಲಿ ಆಚರಿಸುವ ವರಮಹಾಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಸಾಮೂಹಿಕ ಪೂಜೆಯಿಂದ ಮಹಿಳೆ ಯರಲ್ಲಿ ಒಗ್ಗಟ್ಟು, ಆತ್ಮೀಯತೆ ಹಾಗೂ ಪರಸ್ಪರ ಸಹಕಾರ ಮನೋಭಾವ ಬೆಳೆಯಲುಸಹಕಾರಿ ಎಂದರು. ಅಧ್ಯಕ್ಷತೆಯನ್ನು ಪುಷ್ಪ ವಹಿಸಿದ್ದರು. ಪ.ಪಂ. ಮಾಜಿ ಅಧ್ಯಕ್ಷೆ ಜುಬೇದ, ಒಕ್ಕೂಟದ ಮಾಜಿ ಅಧ್ಯಕ್ಷೆ ಉಷಾರವಿಶಂಕರ್, ಮೇಲ್ವಿಚಾರಕ ರತನ್‌ ಶೆಟ್ಟಿ, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಬೃಂದ, ಆಂತರಿಕ ಲೆಕ್ಕ ಪರಿಶೋಧಕ ಪ್ರದೀಪ್, ಸೇವಾ ಪ್ರತಿನಿಧಿ ಶಶಿಕಲಾ, ಒಕ್ಕೂಟದ ಪದಾಧಿಕಾರಿ ಪ್ರಮೀಳ, ಅನಿತಾ, ಪಾರ್ವತಿ, ಶೋಭಾ, ಸುಜಾತಾ, ಪವಿತ್ರಾ ಮುಂತಾದವರಿದ್ದರು. ಕಾವೇರಿ , ಆಶಾಕಿರಣ , ಸುಬ್ರಹ್ಮಣ್ಯ, ಸ್ಪೂರ್ತಿ ಮತ್ತು ನಾಗಶ್ರೀ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಅನುಮತಿ