ಶೃಂಗೇರಿ: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಮಾಸಿಕ ಸಂತೆ, ವ್ಯಾಪಾರ ಮೇಳಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ವಿದ್ಯಾರಣ್ಯಪುರ ಸಂಜೀವಿನಿ ಗ್ರಾಮಪಂಚಾಯಿತಿ ಒಕ್ಕೂಟದ ಅಧ್ಯಕ್ಷೆ ಶೈಲಾವತಿ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುವ ಹಣ್ಣು ಹಂಪಲು, ಸೊಪ್ಪು ತರಕಾರಿಗಳನ್ನು ಕೊಂಡು ಬಳಸುವ ಮೂಲಕ ಪ್ರೋತ್ಸಾಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಉತ್ಪಾದನೆ ಉಳಿಸುವ ಜೊತೆಗೆ ಸಾಕಷ್ಟು ಕುಟುಂಬಗಳ ಆದಾಯದ ಮೂಲ ಹೆಚ್ಚಿಸಬಹುದಾಗಿದೆ.
ಈ ಯೋಜನೆ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ. ಇದರಿಂದ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸಿ ಕೌಶಲ್ಯ ಅಭಿವೃದ್ಧಿಗೆ ಪೂರಕವಾಗುತ್ತದೆ. ಉದ್ದಿಮೆ ಚಾತುರ್ಯ,ತಂತ್ರಗಾರಿಕೆ ಹೆಚ್ಚಿಸಿಕೊಂಡು ಉದ್ದಿಮೆಯಲ್ಲಿಯೂ ಯಶಸ್ಸು ಸಾದಿಸಬಹುದಾಗಿದೆ. ಮಹಿಳೆಯರು ಆರ್ಥಿಕವಾಗಿ, ರಾಜಕೀಯವಾಗಿ ಸಾಮಾಜಿಕವಾಗಿ ಪ್ರಗತಿ ಹೊಂದಲು ಸಾದ್ಯ ಎಂದರು.ಕಾರ್ಯಕ್ರಮದಲ್ಲಿ ತಾಪಂ ಇಒ ಸುದೀಪ್,ಗ್ರಾಪಂ ಸದಸ್ಯೆ ಪದ್ಮಾ,ಜಿಪಿಎಲ್ಎಫ್ ನ ಜಯಶೀಲಾ, ಮಹೇಶ್ವರಿ, ಆಶಾ,ಶೈಲಾ,ಎನ್ ಆರ್ ಎಂ ಎಲ್ ಎಮ್ ನ ಆದರ್ಶ,ಚೈತ್ರ,ಸುಪ್ರಿತಾ,ಪವಿತ್ರ,ಮಧುರಾ,ಮತ್ತಿತರರು ಉಪಸ್ಥಿತರಿದ್ದರು.
12 ಶ್ರೀ ಚಿತ್ರ 2-ಶೃಂಗೇರಿ ಪಪಂ ಸಮುದಾಯಭವನದಲ್ಲಿ ನಡೆದ ಸಂಜೀವಿನಿ ವಿದ್ಯಾರಣ್ಯಪುರ ಗ್ರಾಪಂ ಒಕ್ಕೂಟದ ಮಾಸಿಕ ಸಂತೆ,ವ್ಯಾಪಾರ ಮೇಳವನ್ನು ಶೈಲಾವತಿ ಉದ್ಘಾಟಿಸಿದರು.