ಇಂದು ಕಾಸರಗೋಡಿನಲ್ಲಿ ಆರ್‌ವಿಆರ್‌ ಹೆಲ್ತ್‌ಕೇರ್‌ ಉಪಶಾಖೆ ಆರಂಭ

KannadaprabhaNewsNetwork |  
Published : Jul 26, 2026, 03:00 AM IST
ಸಂಸ್ಥೆಯ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಅತ್ಯಾಧುನಿಕ ಹಾಗೂ ಕೈಗೆಟಕುವ ಆರೋಗ್ಯ ಸೇವೆಯನ್ನು ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಆರ್‌ವಿಆರ್‌ ಹೆಲ್ತ್ ಕೇರ್ ಸಂಸ್ಥೆಯ ಉಪ ಶಾಖೆ ಆರ್‌ವಿಆರ್ ಹೆಲ್ತ್ ಕೇರ್ ನ್ಯೂರೋ ಆಂಕಾಲಜಿ ಸೆಂಟರ್’ ಕಾಸರಗೋಡಿನಲ್ಲಿ ಜು. 26ರಂದು ಆರಂಭಗೊಳ್ಳಲಿದೆ ಎಂದು ಆರ್‌ವಿಆರ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್. ತಿಳಿಸಿದರು.

ಮಂಗಳೂರು: ಅತ್ಯಾಧುನಿಕ ಹಾಗೂ ಕೈಗೆಟಕುವ ಆರೋಗ್ಯ ಸೇವೆಯನ್ನು ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಆರ್‌ವಿಆರ್‌ ಹೆಲ್ತ್ ಕೇರ್ ಸಂಸ್ಥೆಯ ಉಪ ಶಾಖೆ ಆರ್‌ವಿಆರ್ ಹೆಲ್ತ್ ಕೇರ್ ನ್ಯೂರೋ ಆಂಕಾಲಜಿ ಸೆಂಟರ್’ ಕಾಸರಗೋಡಿನಲ್ಲಿ ಜು. 26ರಂದು ಆರಂಭಗೊಳ್ಳಲಿದೆ ಎಂದು ಆರ್‌ವಿಆರ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್. ತಿಳಿಸಿದರು.

ಅವರು ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆ ಈಗಾಗಲೇ ಮಂಗಳೂರಿನ ಫಳ್ನೀರ್‌ನಲ್ಲಿ ಕಾರ್ಯಾರಂಭಗೊಂಡಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಡೇ ಕೇರ್ ಸೆಂಟರ್ ಮೂಲಕ ರೋಗಿಗಳಿಗೆ ಸೇವೆ ನೀಡುತ್ತಾ ಬಂದಿದೆ. ಆರ್‌ವಿಆರ್ ಹೆಲ್ತ್ ಕೇರ್‌ನಲ್ಲಿ ರೋಗಿಗಳಿಗೆ ಎಲ್ಲ ರೀತಿಯ ವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತಿದೆ ಎಂದರು.

ವಿಶೇಷವಾಗಿ ನ್ಯೂರೋ, ಅರ್ಬುದ ರೋಗ ಸಂಬಂಧಿತ ಚಿಕಿತ್ಸೆ ಸೇರಿದಂತೆ ಪ್ರಮುಖ ಕಾಯಿಲೆಗಳಿಗೆ ಒಂದೇ ಸೂರಿನಡಿಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತದೆ. ಕಾಸರಗೋಡಿನ ಬಳಿಕ ಚಿಕ್ಕಮಗಳೂರಿನಲ್ಲೂ ಆರ್‌ವಿಆರ್ ಹೆಲ್ತ್ ಕೇರ್ ಉಪಶಾಖೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಇದರ ಜತೆಗೆ ಶಿವಮೊಗ್ಗ, ಬೆಂಗಳೂರಿನಲ್ಲೂ ಆರಂಭವಾಗಲಿದೆ. ಮಂಡ್ಯ ಭಾಗದಲ್ಲಿ ಆರ್‌ವಿಆರ್‌ನಿಂದ ಚಾರಿಟೇಬಲ್‌ ಆಸ್ಪತ್ರೆ ಆರಂಭಿಸುವ ಚಿಂತನೆ, ಯೋಜನೆ ಹಾಕಿಕೊಂಡಿದ್ದೇವೆ ಎಂದರು.

‘ಆರೋಗ್ಯ ಬೈ ಆರ್‌ವಿಆರ್’ ಮೂಲಕ ಹಿಂದುಳಿದ ವರ್ಗಗಳಿಗೆ ತಲುಪುವ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಕಾರ್ಯಕ್ರಮಗಳನ್ನು ಆರಂಭಿಸಲಾಗಿದ್ದು, ಇದರಲ್ಲಿ ತಜ್ಞ ವೈದ್ಯರ ಸಲಹೆಗಳು, ಸಮಗ್ರ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಜಾಗೃತಿಗಳನ್ನು ಸ್ಥಳೀಯ ಸಮುದಾಯಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಉತ್ತಮ ಸ್ಪಂದನೆ ದೊರಕಿದೆ ಎಂದರು.ತಲೆ ಸುತ್ತುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಿಂಕೊಪ್ ಕ್ಲಿನಿಕ್, ವರ್ಟಿಗೊ, ವಿಭಾಗ, ಬ್ಲ್ಯಾಡರ್ ಕ್ಲಿನಿಕ್ ಆರ್‌ವಿಆರ್‌ನ ವೈಶಿಷ್ಟ್ಯ. ಇದರೊಂದಿಗೆ ನ್ಯೂರಾಲಜಿ, ಸೆಫ್ರೋಲಜಿ, ಯೂರೋಲಜಿಯಲ್ಲಿ ನುರಿತ ವೈದ್ಯರ ತಂಡವನ್ನು ಒಳಗೊಂಡಿದೆ. ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಡಾ.ರಾಘವೇಂದ್ರ ಬಿ.ಎಸ್. ತಿಳಿಸಿದರು.

ಆರ್‌ವಿಆರ್‌ ಅಧ್ಯಕ್ಷ ವಿಜಯ್ ಎಂ.ಎನ್. ಶೆಟ್ಟಿ, ಆರ್‌ವಿಆರ್‌ನ ಪ್ರಮುಖ ತಜ್ಞರಾದ ಡಾ.ಅಂಜನ್ ಕುಮಾರ್, ಡಾ.ವಿಘ್ನೇಶ್, ಡಾ.ಅಬು, ಸಿಒಒ ಅನಂತ್, ಡಾ.ವಿಜೇತ ಇದ್ದರು.

----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಜ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಲಿ: ಪ್ರಭಾಕರ ಪ್ರಭು
ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರತಿಭಟನೆಗೆ ಸಿಪಿಐಎಂ ಬೆಂಬಲ