ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲಿನಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಸಾಂವಿಧಾನಿಕ ಹಕ್ಕನ್ನು ನೀಡಿ ಆದೇಶಿಸಿದೆ. ಕೇಂದ್ರೀಯ ಶಾಲೆಗಳಲ್ಲಿ ಈಗಾಗಲೇ ಇಂತಹ ಕ್ರಮ ಜಾರಿಯಲ್ಲಿದೆ. ರಾಜ್ಯ ಸರ್ಕಾರವು ಪರಂಪರಾನುಗತವಾಗಿ ಹಿಂದಿನಿಂದಲೇ ಆಚರಿಸಿಕೊಂಡು ಬಂದಂತಹ ಆಚರಣೆಯನ್ನು ಮುಂದುವರಿಸಲು ಅವಕಾಶ ಕಲ್ಪಿಸಿದೆ ಎಂದರು. ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಪರಂಪರೆಗಳನ್ನ ಪ್ರಾರಂಭಿಸಲು ಅವಕಾಶ ಇರಬಾರದು ಎಂಬುದಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಯ ಭದ್ರತೆಯನ್ನು ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರ ತೀರ್ಮಾನ ಮಾಡಿದೆ ಎಂದು ಸಮರ್ಥಿಸಿದರು.ಮೊನ್ನೆ ಪರೀಕ್ಷೆ ಬರೆಯಲು ಹೋದ ಸಂದರ್ಭದಲ್ಲಿ ಜನಿವಾರದ ವಿಚಾರದಲ್ಲಿ ಗಲಾಟೆ ಆಯ್ತು ಜನಿವಾರ ಹಾಕಿಕೊಂಡು ಹೋಗುವವರನ್ನ ಬಿಡಬೇಕಾ ಬೇಡ್ವಾ? ಜನಿವಾರಕ್ಕೂ ಶಿಕ್ಷಣ ಭದ್ರತೆಗೂ ಯಾವುದೇ ಸಂಬಂಧ ಇಲ್ಲ. ಜನಿವಾರಕ್ಕೂ ಅವಕಾಶ ನೀಡಬೇಕು ಎಂದು ಆದೇಶ ಮಾಡಿದ್ದೇವೆ. ರುದ್ರಾಕ್ಷಿ ಮಾಲೆ ಹಾಕಿಕೊಂಡು ಬಂದವರನ್ನು ತಡೆಯಬಾರದು ಎಂದು ಆದೇಶ ಮಾಡಿದ್ದೇವೆ. ಹೀಗಿರುವಾಗ ಹಿಜಾಬ್ ಮಾತ್ರ ಬಿಡಬೇಕಾ? ಎಂದು ಪ್ರಶ್ನಿಸಿದರು.ಯಾವುದು ಅವರಿಗೆ ಸೂಕ್ತ ಅದನ್ನು ಮಾತ್ರ ತೆಗೆದುಕೊಂಡು ಧರ್ಮಗಳ ಮಧ್ಯೆ ಒಡಕು ತರುವ ಪ್ರಯತ್ನ ನಡೆಸುತ್ತಿದ್ದಾರೆ. ದೇಶದಲ್ಲಿ ಬೆಲೆ ಏರಿಕೆ ಆಗಿದೆ. ಎಷ್ಟು ಆಗಿದೆ? ಇಂದು ತೈಲ ಬೆಲೆ, ಡಾಲರ್ ಬೆಲೆ, ಚಿನ್ನದ ಬೆಲೆ, ಎಲ್‌ಪಿಜಿ ಬೆಲೆ ಮತ್ತು ಡಾಂಬರ್ ಬೆಲೆ ಮೂರರಷ್ಟಾಗಿದೆ. ಅದಕ್ಕೆ ಮಾತಾನಾಡಿ, ಅಂದ್ರೆ ಇದಕ್ಕೆ ಮಾತ್ರ ಮಾತನಾಡುತ್ತಾರೆ. ಕೇಸರಿ ಶಾಲು ಯಾವುದೇ ಧಾರ್ಮಿಕ ಮೌಲ್ಯಗಳ ಸಂಕೇತವಾಗಿ ಹಿಂದೂಗಳು ಯಾವತ್ತು ಬಳಸಿಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ ಕೇಸರಿ ಶಾಲುಗಳನ್ನು ಬಳಸುತ್ತಾರೆ. ಕಾರ್ಯಕ್ರಮಗಳಲ್ಲಿ ದೇವಾಲಯ ಮತ್ತು ಇತರ ಧಾರ್ಮಿಕ ಆಚರಣೆಗಳಲ್ಲಿ ಬಳಸುತ್ತಾರೆ. ಆದ್ದರಿಂದ ಕೇಸರಿ ಶಾಲು ಮತ್ತು ಹಿಜಾಬ್ ಹೋಲಿಕೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಸರ್ಕಾರ ಎಲ್ಲ ಧರ್ಮಗಳ ಭಾವನೆಗಳನ್ನು ಗೌರವಿಸಿ ಕಾನೂನುಬದ್ಧವಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.