ಸಹಸ್ರಾರ್ಜುನ ಮಹಾರಾಜರ ಜಯಂತಿ: ಬೈಕ್ ರ್ಯಾಲಿ

KannadaprabhaNewsNetwork |  
Published : Nov 09, 2024, 01:25 AM IST
08 ಎಚ್‍ಆರ್‍ಆರ್ 3 ಹಾಗೂ 3ಎಹರಿಹರದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಶುಕ್ರವಾರ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ನಗರದ ದೇವಸ್ಥಾನ ರಸ್ತೆ ಸಹಸ್ರಾರ್ಜುನ ವೃತ್ತದಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು. ಸಮಾಜದ ಗೌರವ ಸಲಹೆಗಾರ ಕೃಷ್ಣ ಸಾ ಭೊತೆ ರ್ಯಾಲಿಗೆ ಚಾಲನೆ ನೀಡಿದರು.

- ಹರಿಹರ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಲು, ಹಣ್ಣು ವಿತರಣೆ - - - ಕನ್ನಡಪ್ರಭ ವಾರ್ತೆ ಹರಿಹರ ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಶುಕ್ರವಾರ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ನಗರದ ದೇವಸ್ಥಾನ ರಸ್ತೆ ಸಹಸ್ರಾರ್ಜುನ ವೃತ್ತದಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು. ಸಮಾಜದ ಗೌರವ ಸಲಹೆಗಾರ ಕೃಷ್ಣ ಸಾ ಭೊತೆ ರ್ಯಾಲಿಗೆ ಚಾಲನೆ ನೀಡಿದರು.

ರ್ಯಾಲಿಯು ದೇವಸ್ಥಾನ ರಸ್ತೆ, ಕಿತ್ತೂರು ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಗಾಂಧಿ ವೃತ್ತ, ಹಳೇ ಪಿ.ಬಿ. ರಸ್ತೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಅನಂತರ ಶಿವಮೊಗ್ಗ ರಸ್ತೆ ಮೂಲಕ ದೇವಸ್ಥಾನ ರಸ್ತೆಯ ವಿರಕ್ತ ಮಠದ ರಸ್ತೆಯ ಶ್ರೀ ವಿಠಲ ರುಖುಮಾಯಿ ದೇವಸ್ಥಾನಕ್ಕೆ ಆಗಮಿಸಿ ರ್ಯಾಲಿ ಕೊನೆಗೊಂಡಿತು.

ಜಯಂತಿ ಅಂಗವಾಗಿ ಸಮಾಜದ ಮುಖಂಡರು ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 8 ಗಂಟೆಗೆ ಶ್ರೀ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ, ಬೆಳಗ್ಗೆ 9 ಗಂಟೆಗೆ ಯಲ್ಲಮ್ಮ ತುಳಜಣಸಾ ಭೂತೆ ಸಮುದಾಯ ಭವನದ ಆವರಣದಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.

ಸಂಜೆ 4ರಿಂದ ಶ್ರೀ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದೊಂದಿಗೆ ನಗರದ ವಿವಿಧ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇವಸ್ಥಾನದ ರಸ್ತೆಯಲ್ಲಿರುವ ಸಹಸ್ರಾರ್ಜುನ ವೃತ್ತದಲ್ಲಿ ಸಮಾಜದ ಅಧ್ಯಕ್ಷರಾಗಿದ್ದ ದಿ।। ನಾಗರಾಜ್ ಮೆಹರ್ವಾಡೆ (ನಲ್ಲಿ) ಹೆಸರಿನ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಸಮಾಜದ ಹಂಗಾಮಿ ಅಧ್ಯಕ್ಷ ಮೋಹನ್. ಎನ್. ಖರೋಜಿ, ಉಪಾಧ್ಯಕ್ಷ ಪರಶುರಾಮ್ ಕಾಟ್ವೆ, ನಿರ್ದೇಶಕರಾದ ವಿನಯ್ ಲದ್ವಾ, ಅಶೋಕ್ ಭೂತೆ, ಗಣೇಶ್ ಮೆಹರ್ವಾಡೆ, ಶ್ರೀಕಾಂತ್ ಮೆಹರ್ವಾಡೆ, ಹಾಗೂ ಮುಖಂಡ ಕೃಷ್ಣ ಸಾ ಪಿ. ರಾಜೋಳಿ, ರಮೇಶ ಎಸ್. ಕಾಟ್ವೆ, ವಾಸುದೇವ ಮೆಹರ್ವಾಡೆ, ಅಂಬುಜಾ ರಾಜೊಳ್ಳಿ ಸೇರಿದಂತೆ ಸಮಾಜದ ಜನತೆ ಭಾಗವಹಿಸಿದ್ದರು.

- - - -08ಎಚ್‍ಆರ್‍ಆರ್3 ಹಾಗೂ 3ಎ:

ಹರಿಹರದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಿಂದ ಬೈಕ್ ರ್ಯಾಲಿ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ