ಸೈನಿಕಶಾಲಾ ಪರೀಕ್ಷಾ ತರಬೇತಿ ಶಿಬಿರ ಸಮಾರೋಪಕನ್ನಡಪ್ರಭ ವಾರ್ತೆ ಮಡಿಕೇರಿ
ಸರಗೂರಿನಲ್ಲಿ ಕಳೆದ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಿವೇಕಾನಂದ ಯೂತ್ ಮೂವ್ ಮೆಂಟ್ ಆಶ್ರಯದ ಸೈನಿಕಶಾಲೆ ವತಿಯಿಂದ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ 10 ಭಾನುವಾರಗಳಂದು ಮಡಿಕೇರಿಯಲ್ಲಿ ಪರೀಕ್ಷಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತವಾದ ಮಾರ್ಗದರ್ಶನ ದೊರಕಿದೆ ಎಂದರು.
ಶಿಬಿರದ ಸಂಚಾರಕ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನಿರ್ದೇಶಕ ಡಾ.ಸಿ.ಆರ್. ಪ್ರಶಾಂತ್ ಮಾತನಾಡಿ, ಪೋಷಕರು ಕೂಡ ಅತ್ಯಂತ ಉತ್ಸುಕತೆಯಿಂದ ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಸಂತೋಷ ತಂದಿದೆ. ಈ ರೀತಿ ಪೋಷಕರೂ ಸೈನಿಕಶಾಲೆಗೆ ತಮ್ಮ ಮಕ್ಕಳು ಸೇರಬೇಕೆಂಬ ಗುರಿ ಹೊಂದಿದಾಗ ಅಂಥ ವಿದ್ಯಾರ್ಥಿ, ಪೋಷಕರ ಉದ್ದೇಶ ಈಡೇರಲು ಸುಲಭಸಾಧ್ಯ ಎಂದರು.ಪೋಷಕರ ಪರವಾಗಿ ಮಾತನಾಡಿದ ವಿರಾಜಪೇಟೆಯ ಎಂ.ಪಿ. ದೇಚಕ್ಕ, ಅತ್ಯುತ್ತಮ ಮಾಹಿತಿಯನ್ನು ಮಕ್ಕಳಿಗೆ ಶಿಬಿರ ನೀಡಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಪ್ರಾರಂಭಿಕ ವರ್ಷದಲ್ಲಿ 15 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ವಿದ್ಯಾಥಿ೯ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದರು.ಪೋಷಕರಾದ ಚೆಟ್ಟಳ್ಳಿಯ ಕೆಚ್ಚೆಟೀರ ಶಿಲ್ಪ ಮುತ್ತಮ್ಮ , ಸಿದ್ದಾಪುರದ ಭವಾನಿ ಮಾತನಾಡಿದರು.
ಸರಗೂರು ಸೈನಿಕಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಏರ್ ಕಮೋಡೋರ್ ಆರ್ ಎನ್. .ಜಯಸಿಂಹ, ಮೈಸೂರಿನ ಸ್ಟೇಲ್ಲರೀಸ್ ಟೆಕ್ನಾಲಜೀಸ್ ನ ವ್ಯವಸ್ಥಾಪಕ ನಿರ್ದೇಶಕ ಕುನಾಲ್ ಕಡ್ತಾರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಕೊಡಗು ಸಂಚಾಲಕ ಅಂಕಾಚಾರಿ ವೇದಿಕೆಯಲ್ಲಿದ್ದರು. ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದರು. ಇದೇ ಸಂದರ್ಭ ಶಿಬಿರಾರ್ಥಿಗಳಿಗೆ 10 ಬಾನುವಾರ ಪರೀಕ್ಷಾ ತರಬೇತಿ ನೀಡಿದ ಶಿಕ್ಷಕ ವರ್ಗದವರನ್ನು ಸನ್ಮಾನಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಬಿ.ಜಿ. ಅನಂತಶಯನ, ಅಂಬೆಕಲ್ ಜೀವನ್, ಅನಿಲ್ ಹೆಚ್.ಟಿ. ಬಿ.ಕೆ. ರವೀಂದ್ರ ರೈ, ಪ್ರಮೋದ್ ಕಮಾರ್ ರೈ, ರಾಜೇಶ್ ಪಿ.ಆರ್. ಶಂಕರ್ ಪೂಜಾರಿ, ಜಯಂತ್ ಪೂಜಾರಿ, ಪಿ.ವಿ. ಅಶೋಕ್, ಶ್ರೀಹರಿರಾವ್, ಪ್ರಕಾಶ್ ಪೂವಯ್ಯ, ಗಾನಾ ಪ್ರಶಾಂತ್, ನಮಿತಾ ರೈ, ಶಫಾಲಿ ರೈ ಹಾಜರಿದ್ದರು.