ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದಾದ್ಯಂತ ಜನರಿಗಿಂತ ಬೀದಿನಾಯಿಗಳ ಸಂಖ್ಯೆಯೇ ಹೆಚ್ಚುತ್ತಿದೆ ಎಂದರೆ ಅಚ್ಚರಿಯಿಲ್ಲ. ಬೀದಿನಾಯಿಗಳ ಹತ್ಯೆಗೆ ಪ್ರಾಣಿ ಪ್ರಿಯರು ಅಪಸ್ವರ ಎತ್ತಿದ ನಾಲ್ಕುವರ್ಷದಲ್ಲಿ ಬೀದಿ ನಾಯಿಗಳ ಸಂಖ್ಯೆ ಅಗಣಿತವಾಗಿ ಬೆಳೆದಿದ್ದು ಕಡಿವಾಣ ಹಾಕಲು ಪುರಸಭೆಗೆ ದಾರಿ ಕಾಣದಾಗಿದೆ.
ಪಟ್ಟಣದ ಎಪಿಎಂಸಿ ಆವರಣ, ಪಟ್ಟಣದ ಅಜಾದ್ ರಸ್ತೆ, ತೇಜಸ್ವಿ ವೃತ್ತ, ಚಂಪಕನಗರ ಟೋಲ್‌ಗೇಟ್ ಸಮೀಪ ಇರುವ ಪ್ರತಿಯೊಂದು ಬೀದಿನಾಯಿಗಳ ಗುಂಪಿನಲ್ಲಿ ನೂರಕ್ಕೂ ಅಧಿಕ ನಾಯಿಗಳಿದ್ದು, ಕ್ರೂರವಾಗಿ ವರ್ತಿಸುವ ನಾಯಿಗಳಿಂದ ಜನರು ಒಂಟಿಯಾಗಿ ಸಂಚರಿಸುವುದು ಅಸಾಧ್ಯವಾಗಿದೆ. ಬೀದಿನಾಯಿಗಳ ನಿಗ್ರಹಕ್ಕೆ ಆಗ್ರಹ:ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ಬೀದಿನಾಯಿಗಳ ಉಪಟಳ ತಪ್ಪಿಸುವಂತೆ ಆಗ್ರಹ ಕೇಳಿ ಬರುತ್ತಿದ್ದು, ಕಳೆದ ಒಂದು ತಿಂಗಳ ಹಿಂದೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿಪರಿಶೀಲನ ಸಭೆಯಲ್ಲಿ ಬೀದಿನಾಯಿ ಹಾವಳಿ ಹತೋಟಿಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಈ ವೇಳೆ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ನಟರಾಜ್, ಬೀದಿನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹಾವಳಿ ತಡೆಯಲು ಉದ್ದೇಶಿಸಿದ್ದು, ಇದಕ್ಕಾಗಿ ಟೆಂಡರ್ ಕರೆಯಲಾಗುವುದು ಎಂದಿದ್ದರು. ಆದರೆ, ಸಭೆ ನಡೆದು ತಿಂಗಳುಗಳೇ ಕಳೆದರೂ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ.
ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ, ಟೆಂಡರ್‌ನಲ್ಲಿ ಯಾವುದೇ ಟೆಂಡರ್‌ದಾರರು ಭಾಗವಹಿಸುತ್ತಿಲ್ಲ ಎನ್ನಲಾಗುತ್ತಿದೆ. ನಾಯಿಗಳ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಮಾನವನ ಶಸ್ತ್ರಚಿಕಿತ್ಸೆ ವೇಳೆ ಅನುಸರಿಸಬೇಕಾದ ಎಲ್ಲ ನಿಯಮಗಳನ್ನು ಅನುಸರಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಕಠಿಣ ನಿಯಮಗಳನ್ನು ಪೂರೈಸಲು ಸಾಧ್ಯವಿಲ್ಲದಿರುವುದು ಟೆಂಡರ್‌ದಾರರು ದೂರು ಉಳಿಯಲು ಕಾರಣ ಎನ್ನಲಾಗಿದ್ದರೆ, ಹಾಸನದಲ್ಲಿ ಬೀದಿನಾಯಿಗಳ ಶಸ್ತ್ರಚಿಕಿತ್ಸೆ ಟೆಂಡರ್ ಪಡೆದಿರುವ ವ್ಯಕ್ತಿಗೆ ಇಲ್ಲಿನ ಟೆಂಡರ್ ನೀಡಲು ಉದ್ದೇಶಿಸಿದ್ದರು. ಈ ವ್ಯಕ್ತಿ ಸಹ ಟೆಂಡರ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಪರಿಣಾಮ ಬೀದಿನಾಯಿಗಳ ಹಾವಳಿ ತಡೆಯಲು ಪುರಸಭೆಗೆ ಮಾರ್ಗವಿಲ್ಲದಂತಾಗಿದೆ.
ಕಳೆದ ೧೧ ತಿಂಗಳ ಅವಧಿಯಲ್ಲಿ ಪಟ್ಟಣದ ಅಜಾದ್ ರಸ್ತೆಯ ಕೋಳಿ ಮಾಂಸ ಮಾರುಕಟ್ಟೆಯ ಹಿಂಬದಿಯ ನಿರ್ಜನ ಪ್ರದೇಶಕ್ಕೆ ಮೇವು ಅರಿಸಿ ಹೋಗಿದ್ದ ೪ ಜಾನುವಾರುಗಳು ಬೀದಿನಾಯಿಗಳಿಗೆ ಆಹಾರವಾಗಿದ್ದರೆ, ಮೂರು ಜಾನುವಾರುಗಳು ಮಾರಣಾಂತಿಕವಾಗಿ ಗಾಯಗೊಂಡಿವೆ. ಇನ್ನು ಎಪಿಎಂಸಿ ಆವರಣದಲ್ಲಿರುವ ಬೀದಿನಾಯಿಗಳು ದಿನದಿಂದ ದಿನಕ್ಕೆ ಉಗ್ರರೂಪ ಪ್ರದರ್ಶಿಸುತಿದ್ದು, ಸಂಜೆ ವೇಳೆ ಈ ಪ್ರದೇಶದಲ್ಲಿ ಸಂಚರಿಸುವುದು ಅಪಾಯ ಎಂಬುದು ಇಲ್ಲಿನ ಸಿಬ್ಬಂದಿಯ ಮಾತು.
ರೋಗಪೀಡಿತ ಬೀದಿನಾಯಿಗಳು:
ಸರ್ಕಾರಿ ಕಚೇರಿಗಳಲ್ಲೂ ಹಾವಳಿ:
ಇನ್ನೂ ಕಂದಾಯ ಇಲಾಖೆಯ ಕೆಲಸಕ್ಕಾಗಿ ಬರುವ ಜನರು ಸಹ ಮಿನಿವಿಧಾನಸೌಧದ ಎದುರು ಬೀದಿನಾಯಿಗಳ ಹಾವಳಿಯನ್ನು ಎದುರಿಸಲೇ ಬೇಕಿದ್ದು, ಸಾಕಷ್ಟು ಬೀದಿನಾಯಿಗಳು ಮಿನಿವಿಧಾನ ಸೌಧದ ಸುತ್ತಲಿನ ಪ್ರದೇಶದಲ್ಲಿ ಬೀಡುಬಿಡುತ್ತಿದ್ದು, ಸಂಜೆವೇಳೆ ನಿರ್ಜನವಾಗುವ ಈ ಪ್ರದೇಶದಲ್ಲಿ ಒಂಟಿಯಾಗಿ ಸಂಚರಿಸುವುದು ಅಪಾಯಕಾರಿಯಾಗಿದೆ. ಫೋಟೋ: ಎಪಿಎಂಸಿ ಆವರಣದಲ್ಲಿ ಮೇಕೆಯನ್ನು ಗಾಯಗೊಳಿಸಿರುವುದು.*ಹೇಳಿಕೆ-1
ನಟರಾಜ್, ಮುಖ್ಯಾಧಿಕಾರಿ, ಪುರಸಭೆ. *ಹೇಳಿಕೆ-2
ಎಪಿಎಂಸಿ ಆವರಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಇಲ್ಲಿ ಒಬ್ಬಂಟಿಯಾಗಿ ಸಂಚರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಕಳೆದೊಂದು ವಾರದಲ್ಲಿ ಮೂರು ಕುರಿಗಳನ್ನು ಬೀದಿನಾಯಿಗಳು ತಿಂದು ಹಾಕಿವೆ.- ಎಚ್.ಎಸ್ ಕುಶಾಲಪ್ಪ, ಸ್ಥಳೀಯ