-ಕೊಡೆನ್, ಕೋಡೇಜನ್, ಇಸ್ಕಾಫ್, ರೆಸ್ಕಾಫ್ ವಿವಿಧ ಕೆಮ್ಮಿನ ಸಿರಪ್ ಮಾರಾಟ
----ರಾಹುಲ್ ದೊಡ್ಮನಿ
ಕನ್ನಡಪ್ರಭ ವಾರ್ತೆ ಚವಡಾಪುರಭೀಮಾ ನದಿ ತೀರದ ದತ್ತನ ಪುಣ್ಯತಾಣದಲ್ಲಿ ಅಗ್ಗದ ದರದಲ್ಲಿ ಸಿಗುವ ಮತ್ತೇರಿಸುವ ಕೆಮ್ಮಿನ ಸಿರಪ್, ಬಟನ್ ಗುಳಿಗೆಗಳ ಭರ್ಜರಿ ಮಾರಾಟ ಸಾಗಿದೆ. ಹೀಗಾಗಿ ಮತ್ತೇರಿಸುವ ಈ ಸರಳ ಉಪಾಯದಿಂದಾಗಿ ಈ ಭಾಗದಲ್ಲಿ ಜಗಳ, ಕಿರಿಕಿರಿ ಸೇರಿದಂತೆ ಅಪರಾಧ ಪ್ರಕರಣಗಲು ಹೆಚ್ಚುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಗ್ಗದ ಬೆಲೆಯ ಮದ್ಯ ಕೂಡ ದುಬಾರಿಯಾಗುತ್ತಿರುವುದನ್ನು ಅರಿತ ಮಧ್ಯ ವ್ಯಸನಿಗಳು ಸಸ್ತಾ ನಶೆಯ ಹಿಂದೆ ಬಿದ್ದಿದ್ದಾರೆ. ಸಸ್ತಾ ನಶೆಯ ಸರಳ ಸೂತ್ರ ಕಂಡುಕೊಂಡ ವ್ಯಸನಿಗಳು ಕೊಡೆನ್, ಕೋಡೇಜನ್, ಇಸ್ಕಾಫ್, ರೆಸ್ಕಾಫ್ ಎನ್ನುವ ವಿವಿಧ ಕೆಮ್ಮಿನ ಸಿರಫ್‌ಗಳು, ಮತ್ತು ಮಾರಕ ಖಾಯಿಲೆಗಳಲ್ಲಿ ಬಳಕೆಯಾಗುವ ಗುಳಿಗೆಗಳು ಬಟನ್ ಎನ್ನುವ ನಿಕ್‌ನೇಮ್ ನೊಂದಿಗೆ ನಶೆಯಲ್ಲಿ ಮುಳುಗೇಳುತ್ತಿದ್ದಾರೆ.ದತ್ತಕ್ಷೇತ್ರದಲ್ಲಿ ಏದೇನು ಮತ್ತು?
ಅಫಜಲ್ಪುರ ತಾಲೂಕಿನ ದೇವಲ ಗಾಣಗಾಪೂರಕ್ಕೆ ದೇಶದಲ್ಲೇ ಖ್ಯಾತಿ ಇದ್ದು, ಇದೀಗ ಅಗ್ಗದ ಮಾದಕ ವಸ್ತುಗಳಿಂದಾಗಿ ಉಡ್ತಾ ಗಾಣಗಾಪೂರ ಎಂಬ ಕುಖ್ಯಾತಿಗೊಳಗಾಗುತ್ತಿದೆ.ಆಟೋ ಚಾಲಕರು, ಕಾಲೇಜು ಯುವಕರು, ಹೋಟೆಲ್ ಕಾರ್ಮಿಕರು ಈ ಕೆಮ್ಮಿನ ಸಿರಪ್ ಬಳಸುತ್ತ ಹೆಚ್ಚು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಬಂದು ಹೋಗುವ ಪೈಕಿ ಅನೇಕರು ಈ ಮಾದಕ ವ್ಯಸನಿಗಳಾಗಿದ್ದು, ಅವರಿಂದ ಗಾಣಗಾಪೂರದಲ್ಲಿ ಮಾದಕ ಔಷಧಿ ಮಾರಾಟ ಮತ್ತು ಸರಬರಾಜು ಆಗುತ್ತಿದೆ ಎನ್ನುವ ಅನುಮಾನವಿದೆ.
ಬಟನ್ ಮಾತ್ರೆ : ವಾಸನೆ ಬಾರದೆ ಸದಾ ನಶೆಯ ಗುಂಗಿನಲ್ಲಿರುವಂತೆ ಮಾಡುವ ಕೆಮ್ಮಿನ ಸಿರಫ್ ಮತ್ತು ಬಟನ್ ಗುಳಿಗೆಗಳನ್ನು ಮೆಡಿಕಲ್ ಸ್ಟೋರ್‌ಗಳಲ್ಲಿ ನೀಡುವುದಿಲ್ಲ, ಅವುಗಳನ್ನು ನಿತ್ಯ ಸೇವಿಸುವ ಖಾಯಂ ಗಿರಾಕಿಗಳಿಗೆ ಮಾತ್ರ ನೀಡುತ್ತಾರಂತೆ. ಹೊಸಬರಿಗೆ ನಿರಾಕರಿಸುತ್ತಾರೆ. ಈ ಹೊಸ ನಶೆಯ ಗುಳಿಗೆಯ ಬೆಲೆ ಕೇವಲ 50 ರುಪಾಯಿಗೆ ಒಂದು ಸ್ಟ್ರಿಪ್ ಮಾರಲಾಗುತ್ತದೆ.ಹೆಚ್ಚು ಹಣ ಕೊಟ್ಟು ವೈನ್‌ಶಾಪ್, ಬಾರ್ ರೆಸ್ಟೋರೆಂಟ್‌ಲ್ಲಿ ಕುಡಿದು ನಶೆ ಏರಿಸಿಕೊಳ್ಳುವವರಿಗಿಂತ ಕಡಿಮೆ ಹಣದಲ್ಲೇ ನಶೆ ಹೆಚ್ಚಿಸುವ ಕೆಮ್ಮಿನ ಸಿರಫ್, ಬಟನ್ ಎನ್ನುವ ಗುಳಿಗೆ ಸೇವಿಸಿ ಸದಾ ಗುಂಗಿನಲ್ಲಿರುವ ಯುವ ಸಮುದಾಯ ತಮ್ಮ ಆರೋಗ್ಯದ ಮೇಲೆ ಏನು ದುಷ್ಪರಿಣಾಮ ಆಗಲಿದೆ ಎನ್ನುವುದನ್ನು ಮರೆತಿದೆ,
ದೇವಲ ಗಾಣಗಾಪೂರದ ಬಸ್ ನಿಲ್ದಾಣ, ಭೀಮಾ ನದಿ ದಂಡೆ, ಸಾರ್ವಜನಿಕ ಶೌಚಾಲಯ, ನಿರ್ಜನ ಪ್ರದೇಶಗಳಲ್ಲಿ ಈ ಕೆಮ್ಮಿನ ಔಷಧಿ ಬಾಟಲಿ, ಕೆಲವು ಗುಳಿಗೆಗಳ ಕವರ್‌ಗಳು ಬಿದ್ದಿರುತ್ತವೆ. ಅನೇಕ ಯುವಕರು ಈ ಹೊಸ ಬಗೆಯ ಸಸ್ತಾ ನಶೆಯ ವ್ಯಸನಕ್ಕೆ ದಾಸರಾಗಿದ್ದು ಆತಂಕದ ಬೆಳವಣಿಗೆ, ಇದನ್ನು ನಿಯಂತ್ರಿಸದಿದ್ದರೆ ಮುಂದೆ ಈ ಕ್ಷೇತ್ರದಲ್ಲಿ ದೊಡ್ಡ ಬಹುದೊಡ್ಡ ಅವಾಂತರ ಆಗಲಿದೆ ಎಂದು ಹೆಸರು ನಿವಾಸಿಗಳು ಆತಂಕ ಹೊರಹಾಕಿದ್ದಾರೆ....ಕೋಟ್....
ಸಾಕಷ್ಟು ಸ್ಥಳೀಯ ಯುವಕರು ಕೆಮ್ಮಿನ ಬಾಟಲಿಗಳನ್ನು ಕುಡಿದು ಮೇಲೊಂದು ಕಪ್ ಚಾಯ್ ಕುಡಿದು ಹೋಗುತ್ತಾರೆ. ಅನೇಕರಿಗೆ ವಿಚಾರಿಸಿದಾಗ ಈ ಕೆಮ್ಮಿನ ಔಷಧಿಯಿಂದ ಬಾಯಿಂದ ಮಧ್ಯದ ವಾಸನೆ ಬರುವುದಿಲ್ಲ, ಅರ್ಧ ದಿನ ನಶೆಯ ಗುಂಗು ಇರುತ್ತದೆ ಎನ್ನುತ್ತಾರೆ.- ಹೊಟೇಲ್ ವ್ಯಾಪಾರಿ----
ಪೊಟೋ: ಚಿತ್ರ 1- ಕಫ್ ಸಿರಪ್ 1ದೇವಲ ಗಾಣಗಾಪೂರದಲ್ಲಿ ಸಿಕ್ಕಿರುವ ವಿವಿಧ ಕಂಪನಿಗಳ ಹೆಸರಿನ ಕೆಮ್ಮಿನ ಔಷಧಿ ಬಾಟಲಿಗಳು.
ಫೋಟೊ: ಕಫ್ ಸಿರಪ್ 2ದೇವಲ ಗಾಣಗಾಪೂರದ ಸರ್ಕಾರಿ ಯಾತ್ರಿ ನಿವಾಸದ ಬಳಿ ಕುಳಿತು ಮದ್ಯ ಸೇವನೆ ಮಾಡುತ್ತಿರುವ ಯುವಕ.