ನಂಜನಗೂಡಿನ ಸಮೃದ್ಧಿ ಗೆಳೆಯರ ಬಳಗದಿಂದ ಬಸವ ಜಯಂತಿ ಆಚರಣೆ

KannadaprabhaNewsNetwork |  
Published : May 12, 2024, 01:19 AM IST
56 | Kannada Prabha

ಸಾರಾಂಶ

ಶರಣರ ವಚನಗಳಲ್ಲಿ ನಮ್ಮ ಬದುಕಿಗೆ ಬೇಕಾದ ಎಲ್ಲ ಸಂದೇಶಗಳಿವೆ ಬಸವಣ್ಣ ಸರ್ವಕಾಲಕ್ಕೂ ಸಲ್ಲುವ ಮಹಾ ಮಾನವತಾವಾದಿ ಸಮಾಜದಲ್ಲಿ ಇದ್ದ ಎಲ್ಲ ತಾರತಮ್ಯಗಳನ್ನು ಹೋಗಲಾಡಿಸಿ ಭೋಗಕ್ಕೆ ಸೀಮಿತವಾಗಿದ್ದ ಮಹಿಳೆಯರನ್ನು ಪುರುಷ ಸಮನಾಗಿ ಕಾಣುವುದರ ಮೂಲಕ ಸ್ತ್ರೀ ಸ್ವಾತಂತ್ರವನ್ನು ಎತ್ತಿ ಹಿಡಿದು ಮಹಿಳಾ ಆತ್ಮಗೌರವ ರಕ್ಷಣೆಯ ಪ್ರತೀಕವಾದ ಹಾಗೂ ಪ್ರತಿಯೊಬ್ಬರೂ ದುಡಿದು ಉಣ್ಣ ಬೇಕೆಂಬ ಕಾಯಕ ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಕಾಯಕದಲ್ಲಿ ಹಿರಿದು ಕಿರಿದು ಎನ್ನುವುದಿಲ್ಲ ಎಲ್ಲರ ಸತ್ಯ ಶುದ್ಧ ಕಾಯಕವನ್ನು ಗೌರವಿಸಬೇಕು.

ಕನ್ನಡಪ್ರಭ ವಾರ್ತೆ ನಂಜನಗೂಡು

ಸಮೃದ್ಧಿ ಗೆಳೆಯರ ಬಳಗದ ವತಿಯಿಂದ ನಂಜನಗೂಡಿನ ವಿಶ್ವ ಗುರು ಬಸವೇಶ್ವರ ವೃತ್ತದಲ್ಲಿ ವಿಶ್ವ ಮಾನವ ಮಹಾ ಮಾನವತವಾದಿ ಬಸವಣ್ಣನವರ ಜಯಂತಿಯನ್ನು

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಿತು.

ಬಸವಣ್ಣನವರ ವಿಶ್ವಮಾನವ ಸಂದೇಶ ಇವನಾರವ ಇವನಾರವ ಎನ್ನದಿರಯ್ಯೆ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎನ್ನುವ ಗೀತೆಯನ್ನು ಸಾಮೂಹಿಕವಾಗಿ

ಹಾಡುವುದರ ಮೂಲಕ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಬಸವ ಕಲ್ಯಾಣದ ಪೂಜ್ಯ ಸುಗುಣ ಮಾತಾಜಿ, ಶರಣರ ವಚನಗಳಲ್ಲಿ ನಮ್ಮ ಬದುಕಿಗೆ ಬೇಕಾದ ಎಲ್ಲ ಸಂದೇಶಗಳಿವೆ ಬಸವಣ್ಣ ಸರ್ವಕಾಲಕ್ಕೂ

ಸಲ್ಲುವ ಮಹಾ ಮಾನವತಾವಾದಿ ಸಮಾಜದಲ್ಲಿ ಇದ್ದ ಎಲ್ಲ ತಾರತಮ್ಯಗಳನ್ನು ಹೋಗಲಾಡಿಸಿ ಭೋಗಕ್ಕೆ ಸೀಮಿತವಾಗಿದ್ದ ಮಹಿಳೆಯರನ್ನು ಪುರುಷ ಸಮನಾಗಿ ಕಾಣುವುದರ ಮೂಲಕ ಸ್ತ್ರೀ ಸ್ವಾತಂತ್ರವನ್ನು ಎತ್ತಿ ಹಿಡಿದು ಮಹಿಳಾ ಆತ್ಮಗೌರವ ರಕ್ಷಣೆಯ ಪ್ರತೀಕವಾದ ಹಾಗೂ ಪ್ರತಿಯೊಬ್ಬರೂ ದುಡಿದು ಉಣ್ಣ ಬೇಕೆಂಬ ಕಾಯಕ ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಕಾಯಕದಲ್ಲಿ ಹಿರಿದು ಕಿರಿದು ಎನ್ನುವುದಿಲ್ಲ ಎಲ್ಲರ ಸತ್ಯ ಶುದ್ಧ ಕಾಯಕವನ್ನು ಗೌರವಿಸಬೇಕು.

ಕಾಯಕ ಹುಟ್ಟಿನಿಂದ ಯಾರು ಶ್ರೇಷ್ಠರಲ್ಲ, ನಡೆ ನುಡಿಯಿಂದ ಮಾತ್ರ ಶ್ರೇಷ್ಟನಾಗಲು ಸಾಧ್ಯ ಎನ್ನುವುದಕ್ಕೆ ದೇಶದ ವಿವಿಧ ಮೂಲೆಗಳಿಂದ ಕಲ್ಯಾಣಕ್ಕೆ

ಬಂದು ವಿವಿಧ ಕಾಯಕ ತೊಡಗಿಸಿಕೊಂಡ ನೂರಾರು ಶರಣರೇ ಸಾಕ್ಷಿ ಹಾಗಾಗಿ ಬಸವ ಧರ್ಮದಲ್ಲಿ ಹುಟ್ಟಿದ ನಾವೇ

ಧನ್ಯರು ಮನಶುದ್ಧಿಗಾಗಿ ಶಿವಯೋಗ ತನು ಶುದ್ಧಿಗಾಗಿ ಕಾಯಕ ಪ್ರತಿಯೊಬ್ಬರೂ ಮಾಡಬೇಕು ಎಂದರು. ಪ್ರತಿಯೊಬ್ಬರು

ವಚನಗಳನ್ನು ಅಧ್ಯಯನ ಮಾಡಿದಾಗ ಪರಿಶುದ್ಧ ಹಾಗೂ ಸಾರ್ಥಕ ಜೀವನ ನಡೆಸಬಹುದು ಎಂದರು. ಸಮೃದ್ಧಿ ಗೆಳೆಯರ ಬಳಗದ ಕಲ್ಮಳ್ಳಿ ನಟರಾಜು, ಕಾರ್ಯದರ್ಶಿ ಸುರೇಶ್, ಕುರುಬರ ಹುಂಡಿ ಸಂಚಾಲಕ ಹುಸ್ಕೂರು ರಾಜಶೇಖರ್, ಬಸವ ಬಳಗದ ಅಧ್ಯಕ್ಷ ಸೋಮಣ್ಣ, ನಾಗೇಂದ್ರ, ನಂದಿನಿ, ಡಾ. ಮಹೇಶ್, ಬಾಂಧವ್ಯ ಬಳಗದ ಅಧ್ಯಕ್ಷ ಶಾಂತಮಲ್ಲಪ್ಪ, ಗುರುಮಲ್ಲಪ್ಪ, ರಾಚಪ್ಪಾಜಿ, ಬದನವಾಳು ಮಹದೇವಪ್ಪ, ವೀರಶೈವ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಸಿ.

ಬಸವಣ್ಣ, ಪ್ರಭುಸ್ವಾಮಿ, ಮಹದೇವಪ್ಪ, ದೇವನೂರು ತ್ಯಾಗಿ, ಪ್ರತಿಧ್ವನಿ ವೇದಿಕೆಯ ಅಧ್ಯಕ್ಷ ತ್ರೀಣೇಶ್, ಲೋಕೇಶ್, ಪಿಡಿಒ ಸುತ್ತೂರು ಚಿನ್ನಬುದ್ಧಿ, ಮಹದೇಶ್ವರ ಬಳಗದ ಪುಟ್ಟಬುದ್ಧಿ, ಮರಿಸ್ವಾಮಿ, ದೇವನೂರು ಲೋಕೇಶ್, ಸೇರಿದಂತೆ ಎಲ್ಲ ಬಳಗಗಳ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ

ಎಲ್ಲ ಸದ್ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!