ಹನಿ ನೀರಾವರಿ ಬಳಸಿ ದೊಡ್ಡ ಪ್ರಮಾಣದಲ್ಲಿ ಶ್ರೀ ಗಂಧ ಬೆಳೆದಿರುವುದೇ ವಿಶೇಷ । ನಿರ್ವಹಣೆಯೂ ಪ್ರಮುಖ
ಕನ್ನಡಪ್ರಭ ವಾರ್ತೆ, ಕಡೂರು
ಮಲೆನಾಡಿನ ಸೆರಗಿನಲ್ಲಿದ್ದು ಸದಾ ಬರಗಾಲ ಎದುರಿಸುವ ಬಯಲು ಪ್ರದೇಶ ಕಡೂರು ತಾಲೂಕಿನ ಕೆಮ್ಮಣ್ಣಿನಲ್ಲಿ ಶ್ರೀಗಂಧ ಬೆಳೆಯುವ ಮೂಲಕ ತಾಲೂಕಿನ ರೈತರಿಗೆ ಸುದರ್ಶನ್ ಮಾದರಿಯಾಗಿದ್ದಾರೆ.ಶಿವಮೊಗ್ಗ- ಬೆಂಗಳೂರು 206 ರಾಷ್ಟ್ರೀಯ ಹೆದ್ದಾರಿಯ ಕಡೂರು ತಾಲೂಕಿನ ಗೆದ್ಲೆಹಳ್ಳಿ ಬಳಿ ರಸ್ತೆ ಪಕ್ಕದಲ್ಲಿ ಇರುವ 40 ಎಕರೆ ತೋಟದ ಸುಮಾರು 20 ಎಕರೆಯಲ್ಲಿ ಶ್ರೀಗಂಧ ಬೆಳೆದಿದ್ದಾರೆ. ಚಿಕ್ಕಮಗಳೂರು ಮೂಲದ ಗೌರಮ್ಮಅವರಿಗೆ ಸೇರಿದ ಈ ತೋಟದಲ್ಲಿ ಅವರ ಹಿರಿಯ ಪುತ್ರ ಸುದರ್ಶನ್ 4 ವರ್ಷದ ಹಿಂದೆ ಅರಣ್ಯ ಇಲಾಖೆ ಸಹಯೋಗದಲ್ಲಿ ಹಾಕಿದ್ದ ಶ್ರೀ ಗಂಧದ ಗಿಡಗಳು ಇಂದು ಸುಮಾರು 8 ರಿಂದ 10 ಅಡಿವರೆಗೆ ಬೆಳೆದು ನಿಂತಿವೆ.
ಶ್ರೀ ಗಂಧ ಸುಮಾರು 15-20 ವರ್ಷಕ್ಕೆ ಬರುವ ಬೆಳೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕೈಗೆ ಬರುವ ಹೊತ್ತಲ್ಲಿ ಕಳ್ಳರ ಭಯ ಕೂಡ ಇದೆ. ಹಾಗಾಗಿ ತೋಟದ ಮಾಲೀಕರು ಚಿತ್ರದುರ್ಗದ ಕಡೆ ಈಶ್ವರಪ್ಪ ಎಂಬುವರನ್ನು ಕುಟುಂಬ ಸಮೇತ ಈ ತೋಟದ ಮನೆಯಲ್ಲಿ ಇರಿಸಿದ್ದಾರೆ. 20 ಎಕರೆ ಒಂದೇ ಬೌಂಡರಿಯಲ್ಲಿ ಶ್ರೀಗಂಧ ಬೆಳೆಸುತ್ತಿದ್ದು, ಸುತ್ತಲೂ ತಂತಿ ಬೇಲಿ ಹಾಕಿ ಯಾರೂ ಒಳ ನುಗ್ಗದಂತೆ ರಕ್ಷಣೆ ಮಾಡಲಾಗಿದೆ.
ಸಾಂಪ್ರದಾಯಿಕ ಬೆಳೆ ಹಾಕಿದರೆ ರೈತರಿಗೆ ಬೆಳೆದ ಖರ್ಚು ಕೂಡ ಸಿಗದ ಈ ದಿನಗಳಲ್ಲಿ ಶ್ರೀಗಂಧ ಹಾಕಿ10 ವರ್ಷ ಕಳೆದರೆ ಕೋಟ್ಯಾಂತರ ರೂ ಆದಾಯ ತಂದು ಕೊಡುತ್ತದೆ. ತಾಲೂಕಿನ 3-4 ಕಡೆ ಸಾಮಾನ್ಯ ರೈತರು 1 ಅಥವಾ 2 ಎಕರೆಯಲ್ಲಿ ಮಾತ್ರ ಶ್ರೀಗಂಧ ಬೆಳೆದಿದ್ದಾರೆ. ಕಡೂರು ತಾಲೂಕಿನ 20 ಎಕರೆಯಲ್ಲಿ ಹಾಕಿರುವ ಶ್ರೀ ಗಂಧದ ಬಹು ದೊಡ್ಡ ಬೆಳೆಯಾಗಿದೆ.
-- ಕೋಟ್--
ಸುದರ್ಶನ್ , ತೋಟದ ಮಾಲೀಕ 18ಕೆಕೆಡಿಯು1. ಕಡೂರು ತಾಲೂಕಿನ ಕುಪ್ಪಾಳು ಸಮೀಪದ ತೋಟದಲ್ಲಿ ಬೆಳೆದಿರುವ ಶ್ರೀ ಗಂಧದ ಬೆಳೆ. 18ಕೆಕೆಡಿಯು1ಎ. ಶ್ರೀ ಗಂಧದ ತೋಟವನ್ನು ನೋಡಿಕೊಳ್ಳುತ್ತಿರುವ ಕೆಲಸಗಾರ ಈಶ್ವರಪ್ಪ ಗಂಧದ ಸಸಿಗಳೊಂದಿಗೆ