ಬಳ್ಳಾರಿಯಲ್ಲಿ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ನಾಳೆ

KannadaprabhaNewsNetwork |  
Published : May 08, 2026, 02:00 AM IST
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಗಂ ಪ್ರತಿಷ್ಠಾನದ ಪದಾಧಿಕಾರಿಗಳು ಮೇ 9ರಿಂದ ಬಳ್ಳಾರಿಯಲ್ಲಿ ಜರುಗುವ ಸಂಗಂ ಸಾಹಿತ್ಯ ಪುರಸ್ಕಾರ ಸಮಾರಂಭ ಕುರಿತು ಮಾಹಿತಿ ನೀಡಿದರು.  | Kannada Prabha

ಸಾರಾಂಶ

ಕಳೆದ ನಾಲ್ಕು ವರ್ಷಗಳ ಹಿಂದೆ ಸಂಗಂ ಟ್ರಸ್ಟ್‌ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಬಳ್ಳಾರಿ: ಸಂಗಂ ಟ್ರಸ್ಟ್ ವತಿಯಿಂದ ನಗರ ಹೊರವಲಯದ ಜ್ಞಾನಾಮೃತ ಕಾಲೇಜಿನಲ್ಲಿ ಮೇ 9, 10ರಂದು ಎರಡು ದಿನಗಳ ಸಂಗಂ ಸಾಹಿತ್ಯ ಪುರಸ್ಕಾರ-2025 ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ, ಹಿರಿಯ ವೈದ್ಯ ಡಾ.ವೈ.ಸಿ. ಯೋಗಾನಂದರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು ಅವರು, ಕಳೆದ ನಾಲ್ಕು ವರ್ಷಗಳ ಹಿಂದೆ ಸಂಗಂ ಟ್ರಸ್ಟ್‌ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಥೆ, ಕಾದಂಬರಿ, ಕಾವ್ಯ ಮತ್ತಿತರ ಪ್ರಕಾರಗಳ ಪೈಕಿ ಒಂದು ಪ್ರಕಾರಕ್ಕೆ ಪುರಸ್ಕಾರ ನೀಡಲಾಗುವುದು. ಈ ಬಾರಿ ಕವನ ಸಂಕಲನ ಪ್ರಕಾರಕ್ಕೆ ಪುರಸ್ಕಾರ ನೀಡಲು 2022ರಿಂದ 2025ರ ವರೆಗೆ ಪ್ರಕಟಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಲಾಗಿತ್ತು. 160ಕ್ಕೂ ಹೆಚ್ಚು ಕವನ ಸಂಕಲನಗಳು ಬಂದಿದ್ದವು. ಈ ಪೈಕಿ ಪರಿಶೀಲನಾ ಸಮಿತಿ ಅಂತಿಮವಾಗಿ ಐದು ಕೃತಿಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಒಂದನ್ನು ಆಯ್ಕೆ ಮಾಡಿ ಸಂಗಂ ಸಾಹಿತ್ಯ ಪುರಸ್ಕಾರ ನೀಡಲಾಗುವುದು. ಪುರಸ್ಕಾರವು ₹25 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ತಿಳಿಸಿದರು.

ಎರಡು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನ "ಕನ್ನಡ ತೆಲುಗು ನುಡಿ ಸಾಂಗತ್ಯ " ಕುರಿತು ವಿಚಾರ ಸಂಕಿರಣ ಜರುಗಲಿದೆ. ಕಾವ್ಯ ಸಂವಾದದಲ್ಲಿ ಲೇಖಕ ಚಿದಾನಂದ ಸಾಲಿ, ರವಿಕುಮಾರ್ ಟೆಲೆಕ್ಸ್‌, ಭುವನಾ ಹಿರೇಮಠ, ನಾಗಣ್ಣ ಕಿಲಾರಿ, ತೆಲುಗು ಲೇಖಕರಾದ ತಗುಳ್ಲ ಗೋಪಾಲ, ಕಲ್ಯಾಣಿ ಕುಂಜು, ಬಾಲಸುಧಾಕರ ಮೌಳಿ ಭಾಗವಹಿಸುವರು. ಬಳಿಕ ನಡೆಯುವ ಕವಿಗೋಷ್ಠಿಯನ್ನು ಹೈದ್ರಾಬಾದ್‌ನ ಮೋಹನಕೃಷ್ಣ ಚಾಲನೆ ನೀಡಲಿದ್ದಾರೆ. ಮೇದೂರು ತೇಜ ಸಮನ್ವಯಗೊಳಿಸುವರು. ಕವಿಗೋಷ್ಠಿಯಲ್ಲಿ ಕನ್ನಡ, ತೆಲುಗಿನ ಕವಿಗಳು ಭಾಗವಹಿಸುವರು. ಸಂಜೆ ಸಂಗಂ ಸಾಹಿತ್ಯ ಪುರಸ್ಕಾರದ ಅಂತಿಮ 5 ಮಂದಿ ಕವಿಗಳೊಂದಿಗೆ ಸಂವಾದ ನಡೆಯಲಿದೆ. ಬಳಿಕ "ಸಂಗಂ ಸಾಹಿತ್ಯ ಪುರಸ್ಕಾರ " ಪ್ರದಾನ ಸಮಾರಂಭ ನಡೆಯಲಿದೆ. ಹಿರಿಯ ಲೇಖಕ ಡಾ.ಅಮರೇಶ ನುಗಡೋಣಿ ಪ್ರಶಸ್ತಿ ಪ್ರದಾನಿಸುವರು. ಡಾ.ವೈ.ಸಿ. ಯೋಗಾನಂದ ರೆಡ್ಡಿ ಅಧ್ಯಕ್ಷತೆ ವಹಿಸುವರು. ಜೆ.ಪಿ. ಬಸವರಾಜ, ಸಚಿತಾ ಬನ್ನಾಡಿ, ರಾಜೇಂದ್ರ ಪ್ರಸಾದ್ ತೀರ್ಪುಗಾರರಾಗಿ ಭಾಗವಹಿಸುವರು ಎಂದು ತಿಳಿಸಿದರು.

ಎರಡನೇ ದಿನ ಕಥಾ ಸಮಯ, ಯುವ ಪ್ರಕಾಶಕರ ತವಕ ತಲ್ಲಣ ಕುರಿತು ಚರ್ಚೆಗಳು ನಡೆಯಲಿವೆ. ಕನ್ನಡ, ತೆಲುಗಿನ ಪ್ರಕಾಶಕರು ಭಾಗವಹಿಸುವರು. ನಂತರ ನಡೆಯುವ ಕವಿ ಸಮಯ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಅಮರೇಶ ನುಗಡೋಣಿ ಅವರೊಂದಿಗೆ ಸಂವಾದ, ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೊನೆಯಲ್ಲಿ ಕವಿಗೋಷ್ಠಿ ಜರುಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ಕವಿಗಳು ಪಾಲ್ಗೊಳ್ಳುವರು. ಸಮಾರಂಭದಲ್ಲಿ ನಾಗಣ್ಣ ಕಿಲಾರಿ ಅವರ ಕಾಯಗುಡ್ಡ ಕಾದಂಬರಿ, ಪಿ.ಆರ್. ವೆಂಕಟೇಶ್ ಅವರ ಕಾಯುವ ಕಣ್ಣು ಕವನ ಸಂಕಲನ ಹಾಗೂ ಡಾ.ದಸ್ತಗೀರಸಾಬ್ ದಿನ್ನಿ ಅವರ ಕರುಳ ಬೆಂಕಿಯ ಪತಂಗ ಮಿರ್ಜಾ ಗಾಲಿಬ್ ಕೃತಿಗಳು ಜನಾರ್ಪಣೆಗೊಳ್ಳಲಿವೆ.

ಕಾರ್ಯಕ್ರಮ ಜರುಗುವ ಬಳ್ಳಾರಿ ಹೊರವಲಯದ ಜ್ಞಾನಾಮೃತ ಕಾಲೇಜಿಗೆ ಬರುವ ಸಾಹಿತ್ಯಾಸಕ್ತರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಲೇಖಕರಾದ ಡಾ.ದಸ್ತಗೀರಸಾಬ್ ದಿನ್ನಿ, ವೀರೇಂದ್ರ ರಾವಿಹಾಳು, ಡಾ.ನಾಗರಾಜ ಬಸರಕೋಡು ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲೆಯ ವಿವಿಧೆಡೆ ಸುರಿದ ಮಳೆ
ಡೊನೇಶನ್ ಹಾವಳಿ ವಿರೋಧಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ ಪ್ರತಿಭಟನೆ