ಕನ್ನಡಪ್ರಭ ವಾರ್ತೆ ಹನೂರು
ರೈತರು, ಜಾನುವಾರುಗಳ ಸಮಸ್ಯೆಗಳನ್ನು ರೈತ ಸಂಘ ಅರಿತು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬಗೆಹರಿಸಿಕೊಳ್ಳಲು ಸಂಘಟನೆಯಿಂದ ಮಾತ್ರ ಸಾಧ್ಯ. 1990ರಲ್ಲಿ ಗುಂಡೂರಾವ್ ಸರ್ಕಾರದ ಸಮಯದಲ್ಲಿ ಪ್ರೊ.ನಂಜುಂಡಸ್ವಾಮಿಯವರು ಹುಟ್ಟು ಹಾಕಿದ ಕರ್ನಾಟಕ ರಾಜ್ಯ ರೈತ ಸಂಘ ಇಂದಿಗೂ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದೆ.
ಹನೂರು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಗ್ರಾಮದ ಜನರು ಹೊಸದಾಗಿ ಸ್ಥಾಪನೆಯಾದ ರೈತ ಸಂಘದ ಸದಸ್ಯತ್ವ ಪಡೆದು ಒಗ್ಗಟ್ಟಿನಿಂದ ಇರಬೇಕು. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡಲು ಸಂಘದ ಸರ್ವ ಸದಸ್ಯರು ನಿಷ್ಠೆ, ಒಮ್ಮತದಿಂದ ಹೋರಾಡುವ ಮೂಲಕ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ತಾಲೂಕು ಗೌರವ ಅಧ್ಯಕ್ಷ ರಾಜಣ್ಣ, ತಾಲೂಕು ಉಪಾಧ್ಯಕ್ಷ ಪರಣಿ ಸ್ವಾಮಿ, ಮಾರತಳ್ಳಿ ಘಟಕದ ಅಧ್ಯಕ್ಷ ಸೂಸೈ ಮಾಣಿಕ್ಯ ಅರ್ಪಿತರಾಜ್, ಅಂತೋನಿ ಸ್ವಾಮಿ, ವೆಟುಕಾಡು ಮಹಿಳಾ ಘಟಕದ ಅಧ್ಯಕ್ಷ ಸೂಸೈಯಮ್ಮ ಹಾಗೂ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.------