ರಾಮನಗರ: ವೀರ ಸೇನಾನಿ ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯದ ಗುರುವಾಗಿದ್ದರು. ಎಲ್ಲರಿಗೂ ಏನೇ ಇದ್ದರು ಶಿಕ್ಷಣದ ಮುಂದೆ ಎಲ್ಲವೂ ಶೂನ್ಯ ಎಂಬ ಮಹತ್ವವನ್ನು ಸಾರಿದ ಮಹಾನ್ ದಾರ್ಶನಿಕರು ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ಅಭಿಪ್ರಾಯಪಟ್ಟರು.
ಜಿಲ್ಲಾ ಕೇಂದ್ರದಲ್ಲಿ ಬಂಜಾರ ಭವನಕ್ಕೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂತ ಸೇವಾ ಲಾಲ್ ಜಯಂತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಲಾಗುವುದು. ಇದಕ್ಕೆ ನಮ್ಮ ಸಮುದಾಯ ಜಾಗೃತರಾಗುವ ಮೂಲಕ ಸಂಘಟನೆಯನ್ನು ಸದೃಢವಾಗಿ ಜಿಲ್ಲಾದ್ಯಂತ ಕಟ್ಟುವ ಕೆಲಸ ಮಾಡೋಣ ಎಂದು ಗೋವಿಂದಸ್ವಾಮಿ ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಸತೀಶ್ ಮಾತನಾಡಿ, ಬಂಜಾರ ಸಮುದಾಯದವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಈಗಾಗಲೇ ಸರ್ಕಾರದ ಉದ್ಯೋಗದಲ್ಲಿರುವವರು ಸಮುದಾಯದ ಮಕ್ಕಳಲ್ಲಿ ಸ್ಪೂರ್ತಿ ತುಂಬುವ ಜೊತೆಗೆ ಸರ್ಕಾರಿ ಸೌಲಭ್ಯಗಳು, ಹಕ್ಕುಗಳನ್ನು ಪಡೆದು ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಬಂಜಾರ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಧನಂಜಯ್ಯ, ಸಮುದಾಯದ ಮುಖಂಡ ಸಿದ್ದಾನಾಯ್ಕ ಮಾತನಾಡಿದರು. ಸಮುದಾಯದ ಡಾ.ಎ.ಆರ್.ಗೋವಿಂದಸ್ವಾಮಿ, ಜಿ.ಕೃಷ್ಣಾನಾಯ್ಕ, ಸಿಂದ್ಯಾನಾಯ್ಕ, ಭಾನುಪ್ರಿಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಕೆಡಿಪಿ ಸದಸ್ಯ ಗುರುಮೂರ್ತಿ, ಶಿಕ್ಷಕ ಗೋವಿಂದಸ್ವಾಮಿ, ಬಂಜಾರ ಸೇವಾ ಸಂಘದ ಅಧ್ಯಕ್ಷೆ ವರಲಕ್ಷ್ಮಿ, ಸಮುದಾಯದ ಮುಖಂಡರಾದ ರಾಮ ದಾಸನಾಯ್, ಧನಂಜಯನಾಯ್ಕ, ಮೂರ್ತಿನಾಯ್ಕ, ಗಂಗಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಕೋಟ್ ...
-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ
ರಾಮನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ಬಂಜಾರ ನೃತ್ಯ ಕಲಾವಿದರೊಂದಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹಾಗೂ ಗಣ್ಯರು ಇರುವುದು.