ಗೌರವ ಅಧ್ಯಕ್ಷರಾಗಿ ಸರ್ದಾರ್ ಅಹಮದ್ ನೇಮಕ

KannadaprabhaNewsNetwork |  
Published : Jun 26, 2024, 01:38 AM IST
ಚನ್ನಗಿರಿ ತಾಲೂಕು ಕನ್ನಡ ನಾಡು ಹಿತರಕ್ಷಣ ಸಮಿತಿಗೆ ಗೌರವ ಅಧ್ಯಕ್ಷರಾಗಿ ಆಯ್ಕೆ ಯಾದ ಸರ್ಧಾರ್ ಅಹಮದ್ ಇವರಿಗೆ ಆದೇಶ ಪತ್ರವನ್ನು ನೀಡುತ್ತೀರುವ ಸಮಿತಿಯ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ | Kannada Prabha

ಸಾರಾಂಶ

ಚನ್ನಗಿರಿ ತಾಲೂಕು ಕನ್ನಡನಾಡು ಹಿತರಕ್ಷಣಾ ಸಮಿತಿ ಗೌರವ ಅಧ್ಯಕ್ಷರಾಗಿ ಸರ್ದಾರ್ ಅಹಮದ್ ಅವರನ್ನು ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ನೇಮಿಸಿ, ನೇಮಕಾತಿ ಪತ್ರ ವಿತರಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಚನ್ನಗಿರಿ

ಚನ್ನಗಿರಿ ತಾಲೂಕು ಕನ್ನಡನಾಡು ಹಿತರಕ್ಷಣಾ ಸಮಿತಿ ಗೌರವ ಅಧ್ಯಕ್ಷರಾಗಿ ಸರ್ದಾರ್ ಅಹಮದ್ ಅವರನ್ನು ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ನೇಮಿಸಿ, ನೇಮಕಾತಿ ಪತ್ರ ವಿತರಿಸಿದರು.

ಕೆ.ವಿ.ಕೃಷ್ಣಮೂರ್ತಿ ಮಾತನಾಡಿ, ಕನ್ನಡನಾಡು ಹಿತರಕ್ಷಣಾ ಸಮಿತಿ ಉದ್ದೇಶಗಳು, ಉತ್ತಮವಾದ ಸಾಮಾಜಿಕ ಸೇವೆಗಳನ್ನು ಗಮನಿಸಿ, ಪ್ರಗತಿಪರ ಚಿಂತಕ ಯುವಪಡೆಗಳು ಸಮಿತಿಗೆ ಸೇರ್ಪಡೆಯಾಗುತ್ತಿವೆ. ಇದು ಉತ್ತಮವಾದ ಬೆಳವಣಿಗೆಯಾಗಿದೆ ಎಂದರು.

ನೂತನ ಗೌರವ ಅಧ್ಯಕ್ಷ ಸರ್ದಾರ್‌ ಅಹಮದ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕನ್ನಡ ನಾಡಿನಲ್ಲಿ ಕನ್ನಡ ಶೋಷಣೆ ಆಗುತ್ತಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಮಾಡಲು ಕನ್ನಡಪರ ಸಂಘಟನೆಗಳು ಬಲಗೊಳ್ಳಬೇಕಾಗಿದೆ. ಸಮಿತಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರು ರಾಜ್ಯದ ಮೂಲೆ ಮೂಲೆಗೆ ತೆರಳಿ ಕನ್ನಡ ಸಂಘಟನೆಗಳ ಬಲವರ್ಧೆನೆಗೊಳಿಸುತ್ತಿದ್ದಾರೆ. ಚನ್ನಗಿರಿ ತಾಲೂಕಿನಲ್ಲಿಯೂ ಸಂಘಟನೆ ಮತ್ತಷ್ಟು ಬಲಪಡಿಸಿ, ಕನ್ನಡ ನಾಡಿನ ರಕ್ಷಣೆ ಮಾಡಲು ಎಲ್ಲರೂ ಶ್ರಮಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ನಟರಾಜ ರಾಯ್ಕರ್, ಉಪಾಧ್ಯಕ್ಷ ಸೋಮಶೇಖರ್, ಸುರೇಶ್, ಸಚಿನ್, ರುದ್ರೇಶ್, ಶಿವರಾಜ್ ಮೊದಲಾದವರು ಹಾಜರಿದ್ದರು.

- - - (** ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-25ಕೆಸಿಎನ್‌ಜಿ2:

ಚನ್ನಗಿರಿ ತಾಲೂಕು ಕನ್ನಡನಾಡು ಹಿತರಕ್ಷಣ ಸಮಿತಿ ಗೌರವ ಅಧ್ಯಕ್ಷರಾಗಿ ಆಯ್ಕೆಯಾದ ಸರ್ದಾರ್ ಅಹಮದ್ ಅವರಿಗೆ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಆದೇಶ ಪತ್ರ ನೀಡಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!