ಸಸಿಹಿತ್ಲು ಇಂಡಿಯಾ ಪ್ಯಾಡಲ್ ಫೆಸ್ಟಿವಲ್: ವಿಶ್ವದ ಸೂಪರ್ ಸ್ಟಾರ್‌ಗಳ ಭರ್ಜರಿ ಪೈಪೋಟಿಗೆ ಬೀಚ್‌ ಸಜ್ಜು

KannadaprabhaNewsNetwork |  
Published : Mar 07, 2025, 12:51 AM IST
ಸಸಿಹಿತ್ಲು ಬೀಚ್‌ ನಲ್ಲಿ ಇಂಡಿಯಾ ಪ್ಯಾಡಲ್ ಫೆಸ್ಟಿವಲ್  ವಿಶ್ವದ ಸೂಪರ್ ಸ್ಟಾರ್ ಪ್ಯಾಡಲ್‌ ಗಳ ನಡುವೆ ಭರ್ಜರಿ  ಪೈಪೋಟಿ | Kannada Prabha

ಸಾರಾಂಶ

ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ೨೦೨೫ರ ಎರಡನೇ ಆವೃತ್ತಿ ಮಾ.7 ರಿಂದ 9 ರವರೆಗೆ ಸಸಿಹಿತ್ಲು ಬೀಚ್‌ನಲ್ಲಿ ನಡೆಯಲಿದೆ. ಕ್ರಿಶ್ಚಿಯನ್ ಆಂಡರ‍್ಸನ್, ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೊ ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಮತ್ತು ಡಿಫೆಂಡಿಂಗ್ ವುಮೆನ್ಸ್ ಚಾಂಪಿಯನ್ ಆಗಿರುವ ಎಸ್ಪೆರಾಂಜ ಬರ‍್ರೆರಸ್ ಭಾಗಿಯಾಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ೨೦೨೫ರ ಎರಡನೇ ಆವೃತ್ತಿ ಮಾ.7 ರಿಂದ 9 ರವರೆಗೆ ಸಸಿಹಿತ್ಲು ಬೀಚ್‌ನಲ್ಲಿ ನಡೆಯಲಿದೆ. ಕ್ರಿಶ್ಚಿಯನ್ ಆಂಡರ‍್ಸನ್, ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೊ ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಮತ್ತು ಡಿಫೆಂಡಿಂಗ್ ವುಮೆನ್ಸ್ ಚಾಂಪಿಯನ್ ಆಗಿರುವ ಎಸ್ಪೆರಾಂಜ ಬರ‍್ರೆರಸ್ ಭಾಗಿಯಾಗಲಿದ್ದಾರೆ. ಭಾರತವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಚಾಂಪಿಯನ್ ಆಗಿರುವ ಸೇಕರ್ ಪಚ್ಚೈ ವಹಿಸಿಕೊಂಡಿದ್ದಾರೆ.

ಈ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರ ಸರ್ಫ್‌ ಕ್ಲಬ್‌, ಡಬ್ಲ್ಯುಆರ್‌ಕೆ ಸಹಯೋಗದೊಂದಿಗೆ ಆಯೋಜಿಸಿದೆ.

ಇನ್ಕ್ರೆಡಿಬಲ್ ಇಂಡಿಯಾ ಮತ್ತು ಕರ್ನಾಟಕ ಪ್ರವಾಸೋದ್ಯಮವು ಪ್ರಸ್ತುತಪಡಿಸಿರುವ ಈ ಇವೆಂಟ್ ಅಸೋಸಿಯೇಷನ್ ಆಫ್ ಪ್ಯಾಡಲ್‌ ಸರ್ಫ್‌ ಪ್ರೊಫೆಷನಲ್ಸ್ (ಎಪಿಪಿ) ವರ್ಲ್ಡ್‌ ಟೂರ್, ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್‌ ಗಾಗಿ ಅಧಿಕೃತ ವಿಶ್ವ ಚಾಂಪಿಯನ್‌ಶಿಪ್ ಟೂರ್‌ ನಿಂದ ಮಂಜೂರು ಮಾಡಲ್ಪಟ್ಟಿದೆ. ಈ ಇವೆಂಟ್ ನಲ್ಲಿ ಎಸ್‌ಯುಪಿ ರೇಸಿಂಗ್, ಲೈವ್ ಸಂಗೀತ ಪ್ರದರ್ಶನಗಳು ಮತ್ತು ರೋಮಾಂಚಕ ಸಾಂಸ್ಕೃತಿಕ ಉತ್ಸವಗಳು ಕೂಡ ಇರಲಿವೆ.

ಮಹಿಳಾ ವಿಭಾಗದಲ್ಲಿ ನಾಲ್ಕು ಬಾರಿ ಅಂತಾರಾಷ್ಟ್ರೀಯ ಸರ್ಫಿಂಗ್‌ ಅಸೋಸಿಯೇಷನ್ (ಐಎಸ್‌ಪಿ) ಎಸ್‌ಯುಪಿ ವಿಶ್ವ ಚಾಂಪಿಯನ್ ಆಗಿರುವ ಸ್ಪೇನ್‌ ನ ಹಾಲಿ ಚಾಂಪಿಯನ್ ಎಸ್ಪೆರಾನ್ಜಾ ಬ್ಯಾರೆರಸ್ ಈ ಇವೆಂಟ್ ಗೆ ಹಿಂತಿರುಗಲಿದ್ದಾರೆ. ದಕ್ಷಿಣ ಆಫ್ರಿಕಾದ ಉದಯೋನ್ಮುಖ ತಾರೆ ಚಿಯಾರಾ ವೋಸ್ತರ್‌ ಮತ್ತು ದ. ಕೊರಿಯಾದ ಎಸ್‌ ಯುಪಿ ಚಾಂಪಿಯನ್ ಲಿಮ್ ಸುಜಿಯೋಂಗ್ ಕೂಡ ಭಾಗಿಯಾಗಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ