- ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಅನುದಾನಗಳಲ್ಲೂ ಕಮಿಷನ್ ವಸೂಲಿ: ಆರೋಪ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ತಾಲೂಕಿನ ರೈತರ ಹಿತದೃಷ್ಠಿಯಿಂದ ಈ ಹಿಂದೆ ಚನ್ನಗಿರಿ ವಿಧಾಸನಾಭಾ ಕ್ಷೇತ್ರ ಶಾಸಕರಾಗಿದ್ದ ವಡ್ನಾಳ್ ರಾಜಣ್ಣ ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಗೆ ಬೇಕಾದ ₹406 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದರು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.ಶುಕ್ರವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಗೆ ಬಿಜೆಪಿಯ ಯಾವ ನಾಯಕರ ಶ್ರಮವೂ ಇಲ್ಲ. ಮೊನ್ನೆ ಚನ್ನಗಿರಿ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಬಿಜೆಪಿ ಸರ್ಕಾರದ ಕೊಡುಗೆ ಎಂದು ಸುಳ್ಳು ಹೇಳಿದ್ದಾರೆ ಎಂದರು.
ಪ್ರಧಾನಿ ಮೋದಿ ಸುಳ್ಳು ಭರವಸೆಗಳನ್ನು ನೀಡಿ, ಎರಡು ಬಾರಿ ಪ್ರಧಾನಿಯಾದರು. ಬಿಜೆಪಿಯ ಅಭ್ಯರ್ಥಿಗಳು ಸಹಾ ಅವರ ಸಾಧನೆಗಳನ್ನು ಹೇಳಿಕೊಳ್ಳದೇ ಮೋದಿ ಅವರನ್ನು ನೋಡಿ, ಮತ ನೀಡಿ ಎಂದು ಹೇಳುತ್ತಾರೆ. ಮೋದಿಗೆ ಮತ ಹಾಕುವುದಾದರೆ ನೀವೇಕೆ ಸಂಸದರಾಗಿದ್ದೀರಿ. 4 ಬಾರಿ ಸಂದರಾಗಿ ಏನು ಮಾಡಿದ್ದೀರಿ, ನಾವು ಏನು ಮಾಡಿದ್ದೇವೆ ಎಂದು ಬಹಿರಂಗ ಚರ್ಚೆಗೆ ಬನ್ನಿ. ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಬಂದ ಎಲ್ಲ ಅನುದಾನಗಳಲ್ಲಿಯೂ ಕಮಿಷನ್ ವಸೂಲಿ ಮಾಡುತ್ತಿದ್ದೀರಿ. ನೀವು ಇನ್ನೇನು ಅಭಿವೃದ್ಧಿ ಮಾಡುತ್ತೀರಿ ಎಂದು ಪ್ರಶ್ನಿಸಿದರು.ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಕಳೆದ 3 ಬಾರಿ ಶಾಮನೂರು ಕುಟುಂಬದವರು ಸ್ಪರ್ಧಿಸಿದ್ದಾಗ ಅವರ ಸೋಲಿಗೆ ಚನ್ನಗಿರಿ ಕ್ಷೇತ್ರವೇ ಕಾರಣ ಎಂಬ ಮಾತು ಇತ್ತು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಅಧಿಕ ಮತಗಳನ್ನು ಕೊಡಿಸುವ ಮೂಲಕ ಪಕ್ಷದ ಅಭ್ಯರ್ಥಿ ಸೋಲಿಗೆ ಚನ್ನಗಿರಿ ಕ್ಷೇತ್ರ ಕಾರಣ ಎಂಬ ಕಳಂಕವನ್ನು ತೊಳೆಯೋಣ ಎಂದು ತಿಳಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಮಾನುಲ್ಲಾ, ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಶಶಿಕಲಾ ಮೂರ್ತಿ, ರೇಣುಕಾಪ್ರಸಾದ್, ಜ್ಯೋತಿ ಕೋರಿ ಕೊಟ್ರೇಶ್, ಪಾಂಡೋಮಟ್ಟಿ ಲೋಕಣ್ಣ, ಎಂ.ಯು. ಚನ್ನಬಸಪ್ಪ, ಶಿವಗಂಗಾ ಶ್ರೀನಿವಾಸ್, ಚಿಕ್ಕೂಲಿಕೆರೆ ಶಿವಲಿಂಗಪ್ಪ, ಸೈಯ್ಯಾದ್ ಅಫ್ರೋಜ್, ಬಸ್ ರಾಮಣ್ಣ, ಕೋಗಲೂರು ಶಿವಕುಮಾರ್, ಕಾರ್ಯಕರ್ತರು ಹಾಜರಿದ್ದರು.- - - -3ಕೆಸಿಎನ್‌ಜಿ1:
ಚನ್ನಗಿರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿದರು.