ಗ್ರಾಮೀಣ ಭಾಗದಲ್ಲಿ ರಾಜ್ಯದ ವಿವಿಧೆಡೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಮಲೆನಾಡಿನ ಗ್ರಾಮೀಣ ಭಾಗದಲ್ಲಿ ರಾಜ್ಯದ ವಿವಿಧೆಡೆಯ ಬಾಲಕ, ಬಾಲಕಿಯರಿಗೆ ಮೌಲ್ಯಾಧಾರಿತ, ಸೇವೆ, ಸಂಸ್ಕಾರ ಮತ್ತು ಸಮಗ್ರ ಶಿಕ್ಷಣ ನೀಡುತ್ತ ಸಮಾಜದಲ್ಲಿ ಮಹತ್ತರ ಬದಲಾವಣೆಯನ್ನು ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ಸಮೂಹ ಸಂಸ್ಥೆ ಸದ್ದಿಲ್ಲದೆ ನಡೆಸುತ್ತಿದೆ.
ಕೊಪ್ಪ ತಾಲೂಕಿನ ಜಯಪುರದಲ್ಲಿ ಶ್ರೀ ಸತ್ಯಸಾಯಿ ಶ್ರೀ ನಿಕೇತನಂ ಹಾಗೂ ಶ್ರೀ ಸತ್ಯಸಾಯಿ ದಿವ್ಯ ನಿಕೇತನಂ ಎಂಬ ಎರಡು ಪ್ರತ್ಯೇಕ ಶಿಕ್ಷಣ ಸಂಸ್ಥೆಗಳ ಮೂಲಕ ರಾಜ್ಯ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ಸತ್ಯಸಾಯಿ ಲೋಕಸೇವಾ ಗುರುಕುಲಂ ನೀಡುತ್ತಿದೆ.2007ರಲ್ಲಿ ಸ್ಥಳೀಯ ಸಾಯಿ ಭಕ್ತರ ಯತ್ನದಿಂದ ಬಾಲಕರಿಗೆ ಶ್ರೀ ಸತ್ಯಸಾಯಿ ಜ್ಯೋತಿ ಶಿಕ್ಷಣ ಸಂಸ್ಥೆ ಆರಂಭ ಗೊಂಡಿದ್ದು, 2008 ಹಾಗು 2014 ರಲ್ಲಿ ಮರು ನಾಮಕರಣಗೊಂಡು 6ನೇ ತರಗತಿಯಿಂದ ವಸತಿ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ, ಆಹಾರ ಹಾಗೂ ಆರೋಗ್ಯ ಸೇವೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. 2018ರಲ್ಲಿ ಬಾಲಕಿಯರಿಗೂ ಇದೇ ಮಾದರಿ ಶಿಕ್ಷಣಕ್ಕಾಗಿ ಶ್ರೀ ಸತ್ಯ ಸಾಯಿ ಶ್ರೀ ನಿಕೇತನಂ ಆರಂಭಗೊಳಿಸಿದೆ. 6- 12ನೇ ತರಗತಿ ವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದೆ.
ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಯಾವುದೇ ಪ್ರಚಾರದ ಅಬ್ಬರ, ಸ್ವಾರ್ಥವಿಲ್ಲದೆ ಶ್ರೀ ಸತ್ಯಸಾಯಿ ಲೋಕಸೇವಾ ಗುರು ಕುಲಂ ಸಮೂಹ ಸಂಸ್ಥೆ ಎರಡು ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದ ಪ್ರತಿಭೆ ಗುರುತಿಸಿ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದಿದೆ.(ಬಾಕ್ಸ್)
ಸತ್ಯಸಾಯಿ ಲೋಕಸೇವಾ ಗುರುಕುಲಂ ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದು, ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಸಾಯಿ ಶ್ಯೂರ್ ಎಂಬ ಪೌಷ್ಟಿಕ ರಾಗಿ ಮಾಲ್ಟ್ ಅನ್ನು ಉಚಿತವಾಗಿ ವಿತರಿಸುತ್ತಿದೆ. ರಾಜ್ಯಾದ್ಯಂತ ಸುಮಾರು 1.2 ಕೋಟಿ ವಿದ್ಯಾರ್ಥಿಗಳಿಗೆ ಈ ಸಾಯಿ ಶ್ಯೂರ್ ಪೌಷ್ಟಿಕ ಆಹಾರ ದೊರೆಯುತ್ತಿದೆ. 2 ಕೋಟಿ ವಿದ್ಯಾರ್ಥಿಗಳಿಗೆ ಈ ಯೋಜನೆ ವಿಸ್ತರಿಸಬೇಕು ಎಂಬ ಆಶಯ ಸಂಸ್ಥೆ ಹೊಂದಿದೆ.
ಪ್ರತೀ ಹೋಬಳಿಯಲ್ಲಿ ಸಾಯಿ ಸ್ವಾಸ್ಥ್ಯ ಟೆಲಿ ಮೆಡಿಸಿನ್ ಕೇಂದ್ರ
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಈಗಾಗಲೇ 600 ಬೆಡ್‌ನ ನೂತನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿದೆ. ಇಲ್ಲಿ ಸಂಪೂರ್ಣ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ. ಜಿಲ್ಲಾ ಕೇಂದ್ರಗಳಲ್ಲಿಯೂ 60 ಬೆಡ್‌ನ ಆಸ್ಪತ್ರೆ ಆರಂಭಿಸುವ ಯೋಜನೆ ಸಾಯಿ ಸಂಸ್ಥೆಯಲ್ಲಿದೆ. ಮುಂದಿನ 5 ವರ್ಷಗಳಲ್ಲಿ ಸತ್ಯಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಲಿತು ಹೊರ ಬರುವ ವೈದ್ಯರನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗೆ ನಿಯೋಜಿಸುವ ಉದ್ದೇಶ ಹೊಂದಿದೆ.
-- ಕೋಟ್ --
- ಗುರುಪ್ರಸನ್ನ, ಸಾಯಿ ಸ್ವಾಸ್ಥ್ಯ ಟೆಲಿ ಮೆಡಿಸಿನ್ ಕೇಂದ್ರದ ಉಸ್ತುವಾರಿ.
--ಸತ್ಯಸಾಯಿ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ವಿದ್ಯಾರ್ಥಿಗಳಿಂದಲೂ ಒಂದು ರೂಪಾಯಿ ಹಣನ್ನೂ ಕಟ್ಟಿಸಿಕೊಳ್ಳದೆ ಸಂಪೂರ್ಣ ಉಚಿತ ಶಿಕ್ಷಣ, ಉದ್ಯೋಗ ನೀಡುತ್ತಿದೆ. ಒಬ್ಬ ವಿದ್ಯಾರ್ಥಿಗೆ ವಾರ್ಷಿಕ ತಲಾ ₹2 ಲಕ್ಷಕ್ಕೂ ಅಧಿಕ ಹಣ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುತ್ತಿದೆ. ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತಿಯೊಬ್ಬ ಮಗುವಿಗೆ ಪೌಷ್ಟಿಕತೆ, ಶಿಕ್ಷಣ ಮತ್ತು ಆರೋಗ್ಯ ಸೇವೆ ಪೂರೈಸುವುದು ಕೇವಲ ಹೆತ್ತವರ ಜವಾಬ್ದಾರಿಯಲ್ಲ. ಅದು ಇಡೀ ಸಮಾಜದ ಸಾಮೂಹಿಕ ಜವಾಬ್ದಾರಿಯೂ ಹೌದು ಎಂಬ ಉದ್ದೇಶದಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
- ಋಷಾಂಕ್ ಮತ್ತು ಅಪೂರ್ವ, ಸತ್ಯಸಾಯಿ ಸಂಸ್ಥೆ ಉಸ್ತುವಾರಿ.--ಫೋಟೋ ವಿವರ೨೨ಬಿಹೆಚ್ಆರ್ ೩:
ಬಾಳೆಹೊನ್ನೂರು ಸಮೀಪದ ಜಯಪುರದಲ್ಲಿರುವ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ಸಮೂಹ ಸಂಸ್ಥೆಯ ಕಟ್ಟಡ.೨೨ಬಿಹೆಚ್‌ಆರ್ ೪:ಸತ್ಯಸಾಯಿ ಗುರುಕುಲಂನಲ್ಲಿ ವಿದ್ಯಾರ್ಥಿಗಳಿಗೆ ಪರ ಮತ್ತು ಅಪರ ವಿದ್ಯೆಗಳನ್ನು ಬೋಧಿಸುತ್ತಿರುವುದು.೨೨ಬಿಹೆಚ್‌ಆರ್ ೫:
ಸತ್ಯಸಾಯಿ ಗುರುಕುಲಂನ ಬಾಲಕಿಯರಿಗೆ ವಿವಿಧ ಕಲೆಗಳ ಕುರಿತು ತರಬೇತಿ ನೀಡುತ್ತಿರುವುದು.