ಅಂಗಾಂಗಗಳ ದಾನದಿಂದ ಹಲವರ ಜೀವ ಉಳಿಸಿ: ಡಾ. ಸಾಜೀದ್

KannadaprabhaNewsNetwork |  
Published : Sep 03, 2024, 01:44 AM IST
ವಡಗೇರಾ ತಾಲೂಕಿನ ಕುರಕುಂದ ಗ್ರಾಮದಲ್ಲಿ  ಆರೋಗ್ಯ ಮೇಳ ನೇತ್ರದಾನ ಪಾಕ್ಷಿಕ ಮತ್ತು ಅಂಗಾಂಗ ದಾನ ಕುರಿತು ಆರೋಗ್ಯದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

Save many lives by donating organs: Dr. Sajeed

ಕನ್ನಡಪ್ರಭ ವಾರ್ತೆ ವಡಗೇರಾ

ಸ್ವಯಂ ಪ್ರೇರಣೆಯಿಂದ ಅಂಗಾಂಗಗಳ ದಾನ ಹಲವು ಜನರಿಗೆ ಜೀವ ಉಳಿಸಬಹುದು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಾಜೀದ್ ಕರೆ ನೀಡಿದರು. ಕುರಕುಂದಾ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಮೇಳ, ನೇತ್ರದಾನ ಪಾಕ್ಷಿಕ ಮತ್ತು ಅಂಗಾಂಗ ದಾನ ಕುರಿತು ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮಲ್ಲಪ್ಪ ಕಣಜಿಕರ್ ಮಾತನಾಡಿ, ನೇತ್ರದಾನವು ಇಬ್ಬರು ಕಾರ್ನಿಯಾ ಅಂಧರಿಗೆ ವರವಾಗುವುದು. ನೇತ್ರದಾನ ಮರಣದ 6 ಗಂಟೆಯೊಳಗೆ ನೇತ್ರ ಸಂಗ್ರಹಿಸಲಾಗುವುದು ಎಂದು ತಿಳಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ, ಕುರಕುಂದಾ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಮರಲಿಂಗಪ್ಪ ಮಾತನಾಡಿದರು. ಈ ವೇಳೆ ರಾಷ್ಟ್ರೀಯ 39ನೇ ನೇತ್ರದಾನ ಪಾಕ್ಷಿಕ ಅಂಗವಾಗಿ ಕರಪತ್ರಗಳ ಬಿಡುಗಡೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ಚವ್ಹಾಣ ನಿರೂಪಿಸಿದರು. ಪ್ರಾರ್ಥನೆ ಗೀತೆಯನ್ನು ವಿದ್ಯಾರ್ಥಿನಿ ಅಯ್ಯಮ್ಮ ಮತ್ತು ಚಾಂದಬೀ ಹಾಡಿದರು. ಸಿ.ಎಚ್.ಒ ಮಹಾದೇವಪ್ಪ ಸ್ವಾಗತಿಸಿದರು. ಎಚ್.ಎಸ್. ಶಾಂತಿಲಾಲ್ ವಂದಿಸಿದರು. ಕುರಕುಂದಾ ಗ್ರಾ.ಪಂ. ಅಧ್ಯಕ್ಷೆ ಮುದ್ದಮ್ಮ ಶೇಕ್‌ಸಿಂದಿ, ಜಿಲ್ಲಾ ಆರ್.ಸಿ.ಎಚ್ ಆಯುಷ್ ವೈದ್ಯೆ ಡಾ. ಶೃತಿ ಶಂಕರಾನಂದ, ಡಾ. ಸುದರ್ಶನ, ಡಾ. ಅಮೀತ್, ಮಾಳಪ್ಪ ಪುರ್ಲೆ, ಶೀಬಾರಾಣಿ, ಮಹಿಬೂಬ್, ಬಸವರಾಜ ಸೇರಿದಂತೆ ಇದ್ದರು.

----

2ವೈಡಿಆರ್‌4 : ವಡಗೇರಾ ತಾಲೂಕಿನ ಕುರಕುಂದ ಗ್ರಾಮದಲ್ಲಿ ಆರೋಗ್ಯ ಮೇಳ ನೇತ್ರದಾನ ಪಾಕ್ಷಿಕ ಮತ್ತು ಅಂಗಾಂಗ ದಾನ ಕುರಿತು ಆರೋಗ್ಯದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ