ಶರಣರು, ದಾಸರ ಜೀವನ ಮೌಲ್ಯ ಉಳಿಸಿ: ಭರಮಪ್ಪ

KannadaprabhaNewsNetwork |  
Published : Jul 02, 2026, 01:15 AM IST
ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಗೆ ಸೇವಾ ಧೀಕ್ಷೆ ನಡೆಯಿತು | Kannada Prabha

ಸಾರಾಂಶ

ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಗೆ ಸೇವಾದೀಕ್ಷೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

೨೧ನೇ ಶತಮಾನವು ಕಲಿಯುಗವಾಗಿದ್ದು, ವಿಜ್ಞಾನ ಯುಗವಾಗಿದೆ. ಆದರೆ ೧೨ನೇ ಶತಮಾನವು ವಚನಯುಗವಾಗಿತ್ತು. ಆಗ ಎಲ್ಲ ಶರಣರು ಶ್ರದ್ಧಾ- ಕಾಯಕದಿಂದ ಜೀವನ ನಡೆಸುತ್ತಿದ್ದರು ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮೈಸೂರು ಭರಮಪ್ಪ ತಿಳಿಸಿದರು.

ಇಲ್ಲಿಗೆ ಸಮೀಪದ ಗ್ರಾಮದ ಬಣಕಾರ್ ಪುಟ್ಟಮ್ಮ ಕುರುವತ್ತೆಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಮೈಸೂರು ಹಾಗೂ ಹರಿಹರ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಶರಣ ಸಾಹಿತ್ಯ ಹಾಗೂ ವ್ಯಕ್ತಿತ್ವ ವಿಕಸನ ಕುರಿತು ದತ್ತಿ ಉಪನ್ಯಾಸ ನೀಡಿದರು. ೩೦೦ ವಚನಕಾರರಿಂದ ೨ ಕೋಟಿಗೂ ಹೆಚ್ಚು ವಚನಗಳನ್ನು ರಚನೆಯಾಗಿದ್ದವು. ಪ್ರಸ್ತುತ ೨೫೦೦ಕ್ಕೂ ಹೆಚ್ಚು ವಚನಗಳು ಮಾತ್ರ ಲಭ್ಯವಾಗಿವೆ ಎಂದರು.

ಹಿಂದಿನ ಶತಮಾನದಲ್ಲಿ ಜಾತಿಯಿರದೇ ಧರ್ಮ ಮಾತ್ರ ಇದ್ದು, ಮಾತಿಗೆ ಮಹತ್ವ ನೀಡುತ್ತಿದ್ದರು. ಅನುಭವ ಮಂಟಪವೇ ಆಗ ಸಂಸತ್ತು ಎಂದು ಹೆಸರಾಗಿತ್ತು. ವ್ಯಕ್ತಿತ್ವ ವಿಕಸನವಾಗಲು ೧೨ನೇ ಶತಮಾನದ ಅಕ್ಕ ಮಹಾದೇವಿ, ಫ.ಗು. ಹಳಕಟ್ಟಿ, ಅಲ್ಲಮಪ್ರಭು, ಪುರಂದರದಾಸರು, ಕನಕದಾಸರು, ದಾಸಿಮಯ್ಯ, ಬಸವೇಶ್ವರ ಹಾಗೂ ಬುದ್ದ, ಗಾಂಧೀಜಿಯವರ ಮೌಲ್ಯಗಳನ್ನು ಇಂದು ಎಲ್ಲರೂ ಉಳಿಸಬೇಕಿದೆ ಎಂದು ತಿಳಿಸಿದರು.

ದತ್ತಿ ದಾನಿ ಕೆ.ಪ್ರಕಾಶ್ ಮಾತನಾಡಿ, ಪ್ರತಿ ಮನೆಯಲ್ಲೂ ತಂದೆ-ತಾಯಿ ಇಬ್ಬರು ದೇವರಿದ್ದರೂ, ದೂರದ ದೇವರಿಗೆ ಗಂಟೆಗಟ್ಟಲೆ ಕಾದು ಕಲ್ಲುದೇವರ ದರ್ಶನ ಮಾಡೋದು ಬೇಸರದ ಸಂಗತಿ. ಪ್ರತಿ ವರ್ಷವೂ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಲು ಸಿದ್ಧನಿದ್ದೇನೆ. ವಿದ್ಯಾರ್ಥಿಗಳು ನಿತ್ಯವೂ ೧೦ ವಚನ ಕಲಿಯುವ ಆಸಕ್ತಿ ಮೆರೆಯಬೇಕು ಎಂದು ಹೇಳಿದರು.

ಜಿಲ್ಲಾ ಶಸಾಪ ಅಧ್ಯಕ್ಷ ಪರಮೇಶ್ವರಪ್ಪ ನೂತನ ಪದಾಧಿಕಾರಿಗಳಿಗೆ ವಚನ ಪುಸ್ತಕ, ವಿಭೂತಿ ವಿತರಿಸಿ ಸೇವಾದೀಕ್ಷೆ ನೀಡಿದರು. ತಾಲೂಕು ಶ.ಸಾ.ಪ. ಅಧ್ಯಕ್ಷ ಶಿವಾಜಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಶಸಾಪ ಉಪಾಧ್ಯಕ್ಷ ಬಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಜಿ.ಎನ್. ಪ್ರಕಾಶ್, ಕಾರ್ಯದರ್ಶಿ ಆರ್‌.ಸಿ. ಮಹೇಂದ್ರಪ್ಪ, ಪದಾಧಿಕಾರಿಗಳಾದ ಕೆ.ಶರಣಪ್ಪಯ್ಯ, ಕುಮಾರ್, ಸಿದ್ದೇಶ್, ಎನ್‌ಎಲ್ ಪ್ರಕಾಶ್, ಎಚ್.ಎಂ. ಸದಾನಂದ, ಚಂದ್ರಶೇಖರ್, ಸಂತೋಷ್, ಹನುಮಗೌಡ, ಸುರೇಶ್ ಕೊಂಡಜ್ಜಿ ಮತ್ತಿತರರು ಹಾಜರಿದ್ದು ಸೇವಾದೀಕ್ಷೆ ಪಡೆದರು. ಮುಖ್ಯಶಿಕ್ಷಕ ಕುಬೇಂದ್ರಪ್ಪ ಮೆಕ್ಕಪ್ಪನವರ್, ಸುರೇಶ್ ಹಂಚಿನಗೌಡ್ರ, ಅನ್ನಪೂರ್ಣ ಅನಿಸಿಕೆ ಹಂಚಿಕೊಂಡರು.

ವಿದ್ಯಾರ್ಥಿಗಳಾದ ಕೀರ್ತನಾ, ನಂದಿನಿ, ಚೇತನ್, ಮಲ್ಲಿಕಾರ್ಜುನ್, ಪ್ರತೀಕ್ಷಾ, ಮಣಿಕಂಠ ಮತ್ತಿತರರು ವಚನಗೀತೆ ಹಾಡಿದರು. ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯ ಕುರಿತ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಿಂದ ಮತದಾನದ ಹಕ್ಕು ಕಸಿಯುವ ಕುತಂತ್ರ
ನಕಲಿ ಜಾತಿ ಪ್ರಮಾಣಪತ್ರ ರದ್ಧತಿಗೆ ಒತ್ತಾಯ