ಕನ್ನಡಪ್ರಭ ವಾರ್ತೆ ಪಾವಗಡ
ಮತದಾರರ ಪಟ್ಟಿ ಪರಿಷ್ಕರಣೆ, ಹಿನ್ನಲೆಯಲ್ಲಿ ಚುನಾವಣಾ ಪ್ರಕ್ರಿಯೆ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಶಾಸಕ ಹಾಗೂ ತುಮುಲ್ ಅಧ್ಯಕ್ಷರಾದ ಎಚ್.ವಿ.ವೆಂಕಟೇಶ್ ಅವರು ಕರೆ ನೀಡಿದರು. ಅವರು ಬುಧವಾರ ಪಟ್ಟಣದ ಎಸ್‌ಎಸ್‌ಕೆ ರಂಗಮಂದಿರದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ಬೂತ್ ಲೆವೆಲ್ ಏಜೆಂಟ್‌ಗಳ (ಬಿಎಲ್ಎ) ತರಬೇತಿ ಶಿಬಿರ ಹಾಗೂ ಎಸ್ .ಐ.ಆರ್. ಕುರಿತ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾನದ ಹಕ್ಕನ್ನು ಕಸಿಯುವುದು ಬಿಜೆಪಿ ಹುನ್ನಾರವಾಗಿದ್ದು, ಸಂವಿಧಾನದತ್ತವಾಗಿ ಪಡೆದಿರುವ ಮತದಾನದ ಹಕ್ಕಾಗಿದೆ, ಇದನ್ನು ಬಿಜೆಪಿ ಕಸಿಯುವ ಕುತಂತ್ರದಲ್ಲಿ ನಿರತವಾಗಿದೆ.ಹೀಗಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಇತರೆ ವರ್ಗದ ಎಲ್ಲರೂ ಒಗ್ಗೂಡಿ ಇದನ್ನು ಹಿಮ್ಮೆಟ್ಟಿಸುವ ಕೆಲಸಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು. ದೇಶದ ಆಡಳಿತ ತಮ್ಮ ಕಪಿಮುಷ್ಟಿಗೆ ಒಳಪಡಿಸಿಕೊಳ್ಳುವ ದುರಾಸೆಯಿಂದ ಇನ್ನೂ 50ವರ್ಷಗಳ ಕಾಲ ನಾವೇ ಇರಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಎಸ್.ಐ.ಆರ್. ಮೂಲಕ ಅಧಿಕಾರದಲ್ಲಿ ಮುಂದುವರೆಯಲು ಪ್ರಯತ್ನಿಸುತ್ತಿದೆ.ಈ ಪ್ರಕ್ರಿಯೆಯ ಮೂಲಕ ಬಿಹಾರ ಹಾಗೂ ಪಶ್ಟಿಮ ಬಂಗಾರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ 6.50 ಕೋಟಿ ಮತದಾರರಿಗೆ ವಂಚನೆ ಅಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕವನ್ನು ಟಾರ್ಗೆಟ್ ಮಾಡಿದ್ದಾರೆ.ಹೀಗಾಗಿ ಕನ್ನಡಿಗರು ಎಚ್ಚೆತ್ತುಕೊಂಡು, ಈ ಷಡ್ಯಂತ್ರದ ವಿರುದ್ದ ಜಾಗೃತಿರಾಗುವಂತೆ ಸಲಹೆ ನೀಡಿದರು.
ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಜಿ.ಸುದೇಶ್‌ಬಾಬು ಮಾತನಾಡಿ, ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೂಲಕವೇ ದಲಿತ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಇತರೆ ವರ್ಗದ ಮತಗಳನ್ನು ಮತದಾರರ ಪಟ್ಟಿಯಿಂದಲೇ ಕೈಬಿಡುವ ಕೆಲಸಕ್ಕೆ ಬಿಜೆಪಿ ಹೊರಟಿದೆ. ಇದುವರೆಗೆ ಸುಮಾರು 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐ ಆರ್ ಮೂಲಕ ತಮ್ಮ ಪಕ್ಷದ ಪರ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದೆ. ಬಿಜೆಪಿಯ ಹುನ್ನಾರ ಕೈಗೂಡಿದರೆ ಮುಂದಿನ ಆನೇಕ ವರ್ಷಗಳ ಕಾಲ ಬೇರೆ ಪಕ್ಷಗಳಿಗೆ ಯಾವ ಅಧಿಕಾರವೂ ಇರುವುದಿಲ್ಲ. ಈ ಸಂಬಂಧ ಎಚ್ಚೆತ್ತುಕೊಂಡು ಮತದಾರರ ಪಟ್ಟಿಯ ಪರಿಷ್ಕರಣೆ ಕೆಲಸ ಜವಾಬ್ದಾರಿಯಿಂದ ನಿರ್ವಹಿಸುವಂತೆ ಕರೆ ನೀಡಿದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮತಿ, ಅವರು ಎಸ್‌ಐಆರ್ ಪ್ರಕ್ರಿಯೆ ಲೋಪದೋಷಗಳ ಕುರಿತು ಸಮಗ್ರವಾಗಿ ವಿವರಿಸಿ ಜಾಗೃತರಾಗುವಂತೆ ಸಲಹೆ ನೀಡಿದರು.ಈ ತರಬೇತಿ ಶಿಬಿರದಲ್ಲಿ ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ವಿರಪಸಮುದ್ರ ರಾಮಾಂಜಿನಪ್ಪ, ಕೆಪಿಸಿಸಿ ಸದಸ್ಯ ಕೆ.ಎಸ್.ಪಾಪಣ್ಣ, ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಸುಮಾ ಅನಿಲ್, ಉಷಾರಾಣಿ ಮತ್ತು ಹಿರಿಯ ಮುಖಂಡರಾದ ಡಿ.ಮಂಜುನಾಥ್, ಶಂಕರ್ ರೆಡ್ಡಿ, ಬತ್ತಿನೇನಿ ನಾಗೇಂದ್ರ ರಾವ್, ತೆಂಗಿನಕಾಯಿ ರವಿ, ಐ.ಜಿ.ನಾಗರಾಜ್, ಮೈಲಾರಪ್ಪ, ನರಸಿಂಹರೆಡ್ಡಿ, ಆರ್ ಕೆ ನಿಸ್ಸಾರ್ ಅಹ್ಮದ್, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಸುಜಿತ್ ರಾಜ್, ನವೀನ್ ಕುಮಾರ್, ನಾರಾಯಣಪ್ಪ ಹಾಗೂ ಬಿ.ಎಲ್.ಎಗಳು ಹಾಗೂ ಕಾರ್ಯಕರ್ತರು ಇದ್ದರು.