ದಾಬಸ್‍ಪೇಟೆ: ಮಂತ್ರಾಲಯಕ್ಕೆ ಹೋಗಿ ರಾಘವೇಂದ್ರ ಸ್ವಾಮಿಯ ದರ್ಶನ ಮುಗಿಸಿಕೊಂಡು ವಾಪಸ್ಸು ಬರುವಾಗ ಹೃದಯಾಘಾತವಾಗಿ ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ತೇಜು (36) ಎಂಬುವವರು ಮೃತಪಟ್ಟಿದ್ದಾರೆ. ತ್ಯಾಮಗೊಂಡ್ಲು ಜಿಪಂ ಮಾಜಿ ಸದಸ್ಯ ಹಾಗೂ ಕುರುಬ ಸಮಾಜದ ಅಧ್ಯಕ್ಷ ಹೊನ್ನಸಿದ್ದಪ್ಪನವರ ಸುಪುತ್ರ ತೇಜು ಸ್ನೇಹಿತರ ಜೊತೆ ಮಂಗಳವಾರ ಮಂತ್ರಾಲಯಕ್ಕೆ ಹೋಗಿ ದರ್ಶನ ಪಡೆದು ಮಂಗಳವಾರ ಮಧ್ಯಾಹ್ನ ವಾಪಾಸ್ಸು ಊರಿಗೆ ಬರುವಾಗ ರಾಯಚೂರಿನ ಬಳಿ ಎದೆನೋವು ಕಾಣಿಸಿಕೊಂಡಿದ್ದು ಸ್ನೇಹಿತರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಮಗು ಸೇರಿ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಅಗಲಿದ್ದು, ಮೃತನ ಆತ್ಮಕ್ಕೆ ಶಾಸಕ ಎನ್.ಶ್ರೀನಿವಾಸ್, ತ್ಯಾಮಗೊಂಡ್ಲು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹನುಮಂತೇಗೌಡ, ಮಾಜಿ ಅಧ್ಯಕ್ಷ ಜಗದೀಶ್, ಎನ್‍ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣಗೌಡ, ಅಗಳಕುಪ್ಪೆ ಗೋವಿಂದರಾಜು, ನಿಡವಂದ ವಿಎಸ್‍ಎಸ್‍ಎನ್ ಅಧ್ಯಕ್ಷ ಕೇಶವಮೂರ್ತಿ ಮತ್ತಿತರರು ಶಾಂತಿ ಕೋರಿದ್ದು, ಮೃತದೇಹವನ್ನು ರಾಯಚೂರಿನಿಂದ ಸ್ವಗ್ರಾಮ ತ್ಯಾಮಗೊಂಡ್ಲು ತಂದು ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಿದ್ದು, ಗುರುವಾರ ಮಧ್ಯಾಹ್ನಕ್ಕೆ ಕುರುಬ ಸಮುದಾಯದ ಸಂಪ್ರದಾಯದಂತೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮಂತ್ರಾಲಯದಿಂದ ವಾಪಾಸ್ಸು ಬರುವಾಗ ಹೃದಯಾಘಾತದಿಂದ ವ್ಯಕ್ತಿ ನಿಧನ
ತ್ಯಾಮಗೊಂಡ್ಲು ಜಿಪಂ ಮಾಜಿ ಸದಸ್ಯ ಹಾಗೂ ಕುರುಬ ಸಮಾಜದ ಅಧ್ಯಕ್ಷ ಹೊನ್ನಸಿದ್ದಪ್ಪನವರ ಸುಪುತ್ರ ತೇಜು ಸ್ನೇಹಿತರ ಜೊತೆ ಮಂಗಳವಾರ ಮಂತ್ರಾಲಯಕ್ಕೆ ಹೋಗಿ ದರ್ಶನ ಪಡೆದು ಮಂಗಳವಾರ ಮಧ್ಯಾಹ್ನ ವಾಪಾಸ್ಸು ಊರಿಗೆ ಬರುವಾಗ ರಾಯಚೂರಿನ ಬಳಿ ಎದೆನೋವು ಕಾಣಿಸಿಕೊಂಡಿದ್ದು ಸ್ನೇಹಿತರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.