ಸವಿತಾ ಸಮಾಜದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ

KannadaprabhaNewsNetwork |  
Published : Feb 05, 2026, 01:30 AM IST
ಸವಿತಾ ಸಮಾಜದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು : ಮುತ್ತು ಮುತ್ತುರಾಜ್ | Kannada Prabha

ಸಾರಾಂಶ

ಸವಿತಾ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಎಂ.ಎಸ್.ಮುತ್ತುರಾಜು ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಸವಿತಾ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಎಂ.ಎಸ್.ಮುತ್ತುರಾಜು ತಿಳಿಸಿದರು.

ತಾಲೂಕು ಸವಿತಾ ಸಮಾಜ ಸಂಘದ ವತಿಯಿಂದ ಏರ್ಪಡಿಸಿದ್ದ ಶ್ರೀ ಸವಿತಾ ಮಹರ್ಷಿ ರವರ ಜಯಂತಿ, ಶ್ರೀ ತ್ಯಾಗರಾಜ ಸ್ವಾಮಿಯವರ ಆರಾಧನೆ ಹಾಗೂ ಭಾರತರತ್ನ ಕರ್ಪೂರಿ ಠಾಕೂರ್ ರವರ ಜನ್ಮ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ, ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ನಮ್ಮ ಸಮಾಜದ ಭಾಂದವರು ಮಕ್ಕಳಿಗೆ ಕುಲವೃತ್ತಿ ಯೊಂದಿಗೆ ಉನ್ನತ ಶಿಕ್ಷಣ ಕೊಡಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆ.ಪಿ.ಸಿ.ಸಿ.ಸದಸ್ಯ ವಿ. ಯೋಗೇಶ್ ಮಾತನಾಡುತ್ತ, ಸಣ್ಣಪುಟ್ಟ ಸಮಾಜದವರು ಸಂಘಟಿತರಾದರೇ ಮಾತ್ರ ಸರ್ಕಾರದ ಸವಲತ್ತು ಪಡೆಯಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಮಂಜೇಶ್ ಗಾಂಧಿ ಮಾತನಾಡಿ ನಮ್ಮ ಸಮಾಜದವರು ವೃತ್ತಿಯಲ್ಲಿ ಆಧುನಿಕತೆಗೆ ತಕ್ಕಂತೆ ಹೆಚ್ಚಿನ ತರಬೇತಿ ಪಡೆದು ಆರ್ಥಿಕವಾಗಿ ಸಧೃಡರಾಗಬೇಕೆಂದು ತಿಳಿಸಿದರು. ಜಿಲ್ಲಾ ಪ್ರತಿನಿಧಿ ಕೆ.ವಿ.ನಾರಾಯಣಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಮಂಗಳವಾದ್ಯ ಕಲಾವಿದರು ಗಳಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು ಮಾಶಸನ ದೊರಕಿಸಿಕೊಡುವಂತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುತ್ತುರಾಜು ರವರನ್ನು ಮನವಿ ಮಾಡಿಕೊಂಡರು.ಜಿಲ್ಲಾ ಸವಿತಾ ಯುವ ಪಡೆಯ ಅಧ್ಯಕ್ಷರ ಕಟ್‌ವೆಲ್ ರಂಗನಾಥ್ ಮಾತನಾಡುತ್ತ, ಯುವ ಜನತೆ ಸಾಮಾಜಿಕ ಚಿಂತನೆಯೊಂದಿಗೆ, ರಾಜಕೀಯವಾಗಿ ಮುಂದುವರೆಯಬೇಕೆಂದರು. ಸಮಾರಂಭದಲ್ಲಿ ಕುಪ್ಪಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಪರಮೇಶ್ವರಯ್ಯ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ತಾಲೂಕು ಅಧ್ಯಕ್ಷ ಎ.ಲೋಕೇಶ್ ವಹಿಸಿದ್ದರು.ಬಿ.ಎಸ್.ಲಲಿತಮ್ಮ ಸವಿತ ಮರ್ಹಷಿಗಳ ಪರಿಚಯ ಮಾಡಿಕೊಟ್ಟರು. ತ್ಯಾಗರಾಜರ ಪರಿಚಯ ಅನ್ನಪೂರ್ಣ ರವರು ಮಾಡಿಕೊಟ್ಟರು. ಭಾರತರತ್ನ ಕರ್ಪೂರಿ ಠಾಕೂರ್ ರವರ ಜೀವನ ಚರಿತ್ರೆಯನ್ನು ಟಿ.ಸಿ.ಗೋವಿಂದರಾಜು ತಿಳಿಸಿದರು.ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಸವಿತಾ ಸಮಾಜಕ್ಕೆ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ನಿಗಮದ ಅಧ್ಯಕ್ಷ ಮುತ್ತುರಾಜು ರವರಿಗೆ ಮನವಿ ಸಲ್ಲಿಸಲಾಯಿತು. ಸಮಾರಂಭದಲ್ಲಿ, ಜಿಲ್ಲಾ ಸವಿತಾ ಸಮಾಜದ ವಿಭಾಗೀಯ ಕಾರ್ಯದರ್ಶಿ ಹರೀಶ್, ಸಂಚಾಲಕರಾದ, ನಾಗೇಂದ್ರ., ಮಂಡ್ಯ ಜಿಲ್ಲಾಧ್ಯಕ್ಷ, ಜಯರಾಮ್, ಗುಬ್ಬಿ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಲಕ್ಷ್ಮೀನಾರಾಯಣ, ತಿಪಟೂರು ಸವಿತಾಸಮಾಜ, ಕಲಾವಿದರ ಸಂಘ, ಮಹಿಳಾ ಸಂಘ, ಯುವ ಪಡೆ ಹಾಗೂ ಶ್ರೀ ಮರ್ಹರ್ಷಿ ಸ್ವಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?