ಹುಲಸೂರು ಗ್ರಾಪಂನಲ್ಲಿ ಕೋಟ್ಯಾಂತರ ರು. ದೋಚುವ ಪ್ರಯತ್ನ

KannadaprabhaNewsNetwork |  
Published : Jul 28, 2024, 02:03 AM ISTUpdated : Jul 28, 2024, 02:04 AM IST
ಚಿತ್ರ 25ಬಿಡಿಆರ್56 | Kannada Prabha

ಸಾರಾಂಶ

scandal find out in hulasoor Gram panchayath

ಹುಲಸೂರ: ಬೀದರ್‌ ಜಿಲ್ಲೆಯ ಹುಲಸೂರ ದೊಡ್ಡ ಗ್ರಾ.ಪಂ ಎಂದು ಪ್ರಖ್ಯಾತಿ ಪಡೆದಂತೆ ಅಷ್ಟೇ ದೊಡ್ಡ ಹಗರಣದ ಬಗ್ಗೆ ಕೂಗು ಕೇಳಿ ಬರುತ್ತಿದೆ. ಕೋಟ್ಯಾಂತರ ರು. ದೋಚುವ ಪ್ರಯತ್ನ ನಡೆದಿದೆ ಎಂದು ಗ್ರಾ.ಪಂ ಸದಸ್ಯರೊಬ್ಬರು ಜಿ.ಪಂ ಸಿಇಒಗೆ ಮನವಿ ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ. ನರೇಗಾ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸದೆ ಬಿಲ್ ಪಾವತಿ, ಅಂದಾಜು ಪತ್ರಿಕೆಯಲ್ಲಿ ಸೂಚಿಸಿದಂತೆ ಯೋಜನೆ ರೂಪಿಸದೆ ಇರುವುದು, ಗ್ರಾ.ಪಂ ಸದಸ್ಯರು, ಮಕ್ಕಳು ಹಾಗೂ ಪತಿ ಹೆಸರಲ್ಲಿ ಬಿಲ್ ಪಾವತಿ ಮಾಡಿಕೊಳ್ಳುವುದು, ಹಳೆ ಕಾಮಗಾರಿಗಳನ್ನೇ ಪುನಃ ಎಂಐಎಸ್ ಮಾಡಿ, 1.25 ಕೋಟಿ ದೋಚುವ ಪ್ರಯತ್ನ ನಡೆದಿದೆ. ಈ ಅವ್ಯವಹಾರದಲ್ಲಿ ಗ್ರಾ.ಪಂ, ತಾ.ಪಂ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪಿಆರ್‌ಇ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ನಾನು ನೀಡಿದ ಈ ದೂರನ್ನು ಕಡೆಗಣಿಸಿ, ಈ ಬೋಗಸ್ ಕಾಮಗಾರಿಗಳಿಗೆ ಬಿಲ್ ಪಾವತಿ ಆದಲ್ಲಿ ನಾನು, ಲೋಕಾಯುಕ್ತ ಇಲಾಖೆಗೆ ಮೊರೆ ಹೋಗಬೇಕಾಗುತ್ತದೆ ಎಂದು ಗ್ರಾ.ಪಂ ಸದಸ್ಯ ವಿವೇಕಾನಂದ ಚಳಕಾಪುರೆ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗಿರೀಶ ಬಡೋಲೆಗೆ ದೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ.

------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ