ಮಕ್ಕಳ ಸ್ವಾಗತಕ್ಕೆ ಶಾಲೆಗಳಿಗೆ ಸಿಂಗಾರ

KannadaprabhaNewsNetwork |  
Published : May 29, 2025, 12:38 AM IST
28ಕೆಕೆಆರ್1:ಕುಕನೂರು ತಾಲೂಕಿನ ಅರಕೇರಿಯಲ್ಲಿ ಶಾಲೆ ಆರಂಭದ ಪ್ರಯುಕ್ತ ಶಾಲಾ ಕೊಠಡಿ ಸ್ವಚ್ಛತೆಗೊಳಿಸುತ್ತಿರುವುದು.  | Kannada Prabha

ಸಾರಾಂಶ

ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ 348 ಶಾಲೆಗಳಿದ್ದು ಅವುಗಳ ಸ್ವಚ್ಛತಾ ಕಾರ್ಯ ನಡೆಯಿತು. ಶಿಕ್ಷಕರು ಬುಧವಾರವೇ ಶಾಲೆಗೆ ಆಗಮಿಸಿ ಶಾಲೆ ಶುಚಿಗೊಳಿಸುವುದು ಹಾಗೂ ಮಕ್ಕಳನ್ನು ವಿಭಿನ್ನವಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡರು.

ಕುಕನೂರು:

ಬರೋಬ್ಬರಿ ಒಂದೂವರೆ ತಿಂಗಳು ಬೇಸಿಗೆ ರಜೆ ಕಳೆದ ವಿದ್ಯಾರ್ಥಿಗಳು ಮೇ 29ರಿಂದ ಆರಂಭವಾಗುವ ಶಾಲೆಗೆ ಬರುವ ಖುಷಿಯಲ್ಲಿದ್ದರೆ ಅವರನ್ನು ಸ್ವಾಗತಿಸಲು ಶಿಕ್ಷಕರು, ಎಸ್‌ಡಿಎಂಸಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ 348 ಶಾಲೆಗಳಿದ್ದು ಅವುಗಳ ಸ್ವಚ್ಛತಾ ಕಾರ್ಯ ನಡೆಯಿತು. ಶಿಕ್ಷಕರು ಬುಧವಾರವೇ ಶಾಲೆಗೆ ಆಗಮಿಸಿ ಶಾಲೆ ಶುಚಿಗೊಳಿಸುವುದು ಹಾಗೂ ಮಕ್ಕಳನ್ನು ವಿಭಿನ್ನವಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡರು. ಶಾಲೆಯ ದ್ವಾರ ಬಾಗಿಲು, ಕೊಠಡಿಗಳಿಗೆ ತಳಿರು-ತೋರಣ ಕಟ್ಟಿ, ವಿದ್ಯಾರ್ಥಿಗಳಿಗೆ ಹೂಗೂಚ್ಚ, ಸಿಹಿ ನೀಡಿ ಸ್ವಾಗತಿಸಲು ಕಾತುರರಾಗಿದ್ದಾರೆ. ಜತೆಗೆ ಮೊದಲ ದಿನ ಬಿಸಿಯೂಟದೊಂದಿಗೆ ಸಿಹಿ ತಯಾರಿಸಲು ಸಹ ಬಿಸಿಯೂಟ ಕಾರ್ಯಕರ್ತರು ಉತ್ಸುಕರಾಗಿದ್ದಾರೆ.

ಯಲಬುರ್ಗಾ, ಕುಕನೂರು ಅವಳಿ ತಾಲೂಕಿನಲ್ಲಿ 253 ಸರ್ಕಾರಿ ಶಾಲೆ, 14 ಅನುದಾನಿತ, 65 ಖಾಸಗಿ, 1 ಸಮಾಜ ಕಲ್ಯಾಣ ಇಲಾಖೆ ಶಾಲೆ, 12 ಪರಿಶಿಷ್ಟ ಪಂಗಡ ಶಾಲೆ, 2 ಮೌಲಾನ ಅಜಾದ್ ಶಾಲೆ, 1 ನವೋದಯ ಶಾಲೆಗಳಿದ್ದು ಎಲ್ಲ ಶಾಲೆಗಳಲ್ಲಿ ವಿಶೇಷವಾಗಿ ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.

ವಿಶೇಷ ದಾಖಲಾತಿ ಆಂದೋಲನ:

ಶಾಲಾ ಪ್ರಾರಂಭ, ಶಾಲೆಗೆ ಮಕ್ಕಳನ್ನು ಸೆಳೆಯಲು ಹಾಗೂ 1ನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಶಿಕ್ಷಣ ಇಲಾಖೆಯಿಂದ ವಿಶೇಷ ದಾಖಲಾತಿ ಆಂದೋಲನ ಸಹ ಆರಂಭಿಸಲಾಗಿದೆ ಶಿಕ್ಷಕರು ಗ್ರಾಮ, ವಾರ್ಡ್‌ಗಳಲ್ಲಿ ಸಂಚರಿಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಜಾಗೃತಿ ಮೂಡಿಸುವ ಮೂಲಕ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಹೇಳುತ್ತಿದ್ದಾರೆ.ಯಲಬುರ್ಗಾ, ಕುಕನೂರು ತಾಲೂಕಿನ 348 ಶಾಲೆಗಳಲ್ಲಿ ಶಾಲೆ ಆರಂಭದ ದಿನವನ್ನು ವಿಶೇಷವಾಗಿ ಆಚರಿಸಲು ಸೂಚಿಸಿದ್ದೇನೆ. ಶಾಲೆಗೆ ಬರುವ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಗುವುದು. ವಿಶೇಷ ದಾಖಲಾತಿ ಆಂದೋಲನ ಸಹ ಹಮ್ಮಿಕೊಂಡಿದ್ದು 1ನೇ ತರಗತಿಗೆ ಮಕ್ಕಳನ್ನು ಸೇರಿಸುವಂತೆ ಪಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸೋಮಶೇಖರಗೌಡ, ಬಿಇಒ ಯಲಬುರ್ಗಾ

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’