ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ವಿಜ್ಞಾನ- ತಂತ್ರಜ್ಞಾನ ಮಾನವನ ಪ್ರಗತಿಗೆ ಅಡಿಪಾಯ. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ಬಳಸಬೇಕು ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ಸಂಸ್ಥೆ ಚೇರ್‍ಮನ್ ಮಧು ಜಿ.ಮಾದೇಗೌಡ ಹೇಳಿದರು.ಭಾರತೀ ಕಾಲೇಜಿನ ಬಿಸಿಎ ವಿಭಾಗದ ಕಂಪ್ಯೂಟರ್ ಲ್ಯಾಬ್ ನಲ್ಲಿ ಪದವಿಪೂರ್ವ, ಕಂಪ್ಯೂಟರ್ ವಿಜ್ಞಾನ , ಸ್ನಾತಕೊತ್ತರ ಮತ್ತು ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ ವಿಜ್ಞಾನ ಪ್ರದರ್ಶನ ಎಕ್ಸ್‌ಪೋ-2025 ವೀಕ್ಷಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಂಪ್ಯೂಟರ್‌ನ ಉತ್ತಮ ಮಾಡಲ್‌ಗಳನ್ನು ಪ್ರದರ್ಶಿಸಿದ್ದಾರೆ, ವೈಜ್ಞಾನಿಕ ಮನೋಭಾವ ಅನಾವರಣಕ್ಕೆ ಹೆಚ್ಚಿನ ಮಹತ್ವ ನೀಡುವುದು ಅತ್ಯವಶ್ಯಕ ಎಂದು ಸಲಹೆ ನೀಡಿದರು.ವಸ್ತು ಪ್ರದರ್ಶನದಲ್ಲಿ ರೈನ್ ಡಿಟೇಕ್ಟರ್, ರೀಯಲ್ ಟೈಮ್ ಚಾಟ್, ಫ್ಲೋ ಚಾರ್ಟ್ ಮಾಡೆಲ್, ಸೈಬರ್ ಕ್ರೈಂ, ಹ್ಯಾಕರ್ (ಕಂಪ್ಯೂಟರ್ ಸುರಕ್ಷತೆ), ಮೀಡಿಯಾ ಕಮ್ಯುನಿಕೇಷನ್, ಇ- ಮೇಲ್ ವರ್ಕಿಂಗ್, ಕಂಪ್ಯೂಟರ್‌ನ ಘಟಕಗಳು, ಫಾರಿನ್ ಆ್ಯಪ್, ಇಂಡಿಯನ್ ಆ್ಯಪ್, ಓಪನಿಂಗ್ ಸಿಸ್ಟಮ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಬ್ಯಾಂಕ್ ನ ಡಿಜಿಟಲ್ ಟ್ರಾನ್ಸ್ಲೇಷನ್, ಲ್ಯಾನ್, ವ್ಯಾನ್, ಮ್ಯಾನ್ ವರ್ಕಿಂಗ್, ಇಂಟರ್ ಬಿ ಕಾಮರ್ಸ್, ಬ್ಲಾಕ್ ಚೈನ್, ಟೈಪ್ಸ್ ಆಫ್ ಪ್ರಿಂಟರ್ಸ್, ಆನ್‌ಲೈನ್ ಶಾಪಿಂಗ್, ದಿ ಪಿಡಿಎಫ್ ಮೊದಲಾದ ಮಾದರಿಗಳನ್ನು ವೀಕ್ಷಿಸಿದರು.
ಭಾರತೀ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ವಿಜ್ಞಾನ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣದಿಂದ ಮಾತ್ರದ ದೇಶದ ಅಭಿವೃದ್ಧಿ. ಸಮಾಜ ಬದಲಾವಣೆ ಎಂಬುದನ್ನು ಅರಿಯಬೇಕು. ವಿಜ್ಞಾನ, ತಂತ್ರಜ್ಞಾನ ಕೇಳುವ ಅಥವಾ ಓದುವ ವಿಷಯವಲ್ಲ. ಅದನ್ನು ಪ್ರಾಯೋಗಿಕವಾಗಿ ಮಾಡುವ ಮೂಲಕ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಕೆ. ಗಾಯಿತ್ರಿ, ಅಧ್ಯಾಪಕರಾದ ಭಾರತಿ, ಜಿ.ಎನ್. ದಿವ್ಯಶ್ರೀ, ಆರ್. ಚಂದನ, ಜಿ.ಬಿ. ವಿದ್ಯಾ, ಕೆ.ಎಸ್. ಭೂಮಿಕಾ, ಸಿ.ಎಲ್. ಮನೋಜ್ ಇದ್ದರು.