ಭಟ್ಕಳದ ಹೆಬಳೆ ಶಮ್ಸ್‌ ಪಿಯ ಕಾಲೇಜಿನಲ್ಲಿ ಇಂದು ವಿಜ್ಞಾನ ಮೇಳ

KannadaprabhaNewsNetwork |  
Published : Nov 20, 2025, 01:15 AM IST
ಪೊಟೋ ಪೈಲ್ : 18ಬಿಕೆಲ್3 | Kannada Prabha

ಸಾರಾಂಶ

ಇಲ್ಲಿಯ ಹೆಬಳೆಯ ಶಮ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನ.20ರಂದು ಎರಡನೇ ವಿಜ್ಞಾನ ಮೇಳವನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿಯ ಹೆಬಳೆಯ ಶಮ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನ.20ರಂದು ಎರಡನೇ ವಿಜ್ಞಾನ ಮೇಳವನ್ನು ಆಯೋಜಿಸಲಾಗಿದೆ ಎಂದು ಶಮ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಿಯಾಖತ್ ಅಲಿ ಹೇಳಿದರು.

ಮಂಗಳವಾರ ಡಾ. ಎಂ.ಟಿ. ಹಸನ್ ಬಾಪಾ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಶಮ್ಸ್ ಕಾಲೇಜು ಆಯೋಜಿಸಿರುವ ಈ ವಿಜ್ಞಾನ ಮೇಳದ ಮುಖ್ಯ ಉದ್ದೇಶವು ಕೇವಲ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸುವುದಲ್ಲ. ಬದಲಿಗೆ, ವಿದ್ಯಾರ್ಥಿಗಳು ಸಮಾಜವು ಎದುರಿಸುತ್ತಿರುವ ಸಮಸ್ಯೆ ಗುರುತಿಸಬೇಕು. ಅವುಗಳ ಕುರಿತು ಸಂಶೋಧನಾ ಮನಸ್ಥಿತಿಯೊಂದಿಗೆ ಕಾರ್ಯನಿರ್ವಹಿಸಿ ಪರಿಹಾರ ಹೊರತರುವಂತೆ ಮಾಡುವುದು ಇದರ ಗುರಿಯಾಗಿದೆ. ಶಿಕ್ಷಣವು ಕೇವಲ ಪಠ್ಯಪುಸ್ತಕಗಳು ಮತ್ತು ತರಗತಿ ಕೋಣೆಗಳಿಗೆ ಸೀಮಿತವಾಗಬಾರದು ಎಂಬ ದೃಷ್ಟಿಕೋನದಿಂದ ಇದನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಮ್ಸ್ ಪಿಯು ಕಾಲೇಜಿನ ಆಡಳಿತ ಪ್ರಾಂಶುಪಾಲ ಮುಹಮ್ಮದ್ ರಝಾ ಮಾನ್ವಿ ಮಾತನಾಡಿ, ಶಮ್ಸ್ ಪದವಿ ಪೂರ್ವ ಕಾಲೇಜು ರಾಯಚೂರಿನ ಎಜೆ ಅಕಾಡೆಮಿ ಆಫ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್‌ನ ಸಹಯೋಗದೊಂದಿಗೆ ಈ ವಿಜ್ಞಾನ ಮೇಳವನ್ನು ಆಯೋಜಿಸಿದೆ.

ಈ ಮೇಳಕ್ಕಾಗಿ ಭಟ್ಕಳ ತಾಲೂಕಿನ ಶಾಲೆ-ಕಾಲೇಜುಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು 155 ತಂಡಗಳು ನೋಂದಾಯಿಸಿದ್ದು, ಅದರಲ್ಲಿ 46 ತಂಡ ಆಯ್ಕೆ ಮಾಡಿ, ಅವರಿಗೆ ಸಂಶೋಧನೆ ಹೇಗೆ ಮುಂದುವರಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಸಂಶೋಧನಾ ವರದಿಗಳನ್ನು ಮತ್ತು ಸಂಶೋಧನೆಗಳ ಫಲಿತಾಂಶಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಾಮಾನ್ಯವಾಗಿ ವಿಜ್ಞಾನ ಪ್ರದರ್ಶನಗಳಲ್ಲಿ ಹಳೆಯ ಮಾದರಿಗಳನ್ನು ತಂದು ಇರಿಸಲಾಗುತ್ತದೆ. ಆದರೆ ಇಲ್ಲಿ ವಿದ್ಯಾರ್ಥಿಗಳು ಮೂರರಿಂದ ನಾಲ್ಕು ತಿಂಗಳುಗಳ ಕಾಲ ಸಂಶೋಧನೆ ನಡೆಸಿರುವ ಫಲಿತಾಂಶಗಳು ನ. 20 ರಂದು ಹೊರಬರಲಿವೆ ಎಂದರು.

ವಿಜ್ಞಾನ ಮೇಳದ ಉದ್ಘಾಟನಾ ಸಮಾರಂಭವು ಬೆಳಗ್ಗೆ 9.30ಕ್ಕೆ ನಡೆಯಲಿದ್ದು, ಅಂಜುಮನ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ. ಮುಹಮ್ಮದ್ ಝುಬೇರ್ ಕೋಲಾ, ಮುಖ್ಯ ಅತಿಥಿಯಾಗಿ ಮತ್ತು ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ್ ಪ್ರಾಂಶುಪಾಲ ಡಾ. ವೀರೇಂದ್ರ ಶಾನಭಾಗ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಮಹಿಳೆಯರಿಗಾಗಿ ಮಧ್ಯಾಹ್ನ 2 ರಿಂದ 3.30ರವರೆಗೆ ಪುರುಷರಿಗಾಗಿ ಸಂಜೆ 3.30ರಿಂದ 5ರವರಗೆ ಸಮಯ ನಿಗದಿಪಡಿಸಲಾಗಿದೆ. ಈ ಸಂಶೋಧನಾ ಆಧಾರಿತ ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಉತ್ತೇಜಿಸಲು ವಿಜ್ಞಾನಿ ಪ್ರಶಸ್ತಿ ಬಡ್ಡಿಂಗ್ ಸೈಂಟಿಸ್ಟ್ ಮತ್ತು ಎಮರ್ಜಿಂಗ್ ಸೈಂಟಿಸ್ಟ್ ನಂತಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದರು.

PREV

Recommended Stories

ಪರಿಶುದ್ಧ ಬದುಕಿನಿಂದ ಜೀವನ ಉಜ್ವಲ: ಡಾ. ವೀರಸೋಮೇಶ್ವರ ಸ್ವಾಮೀಜಿ
ಜಿಲ್ಲೆಯಲ್ಲಿ ಶೇ.100ರಷ್ಟು ಕನ್ನಡ ಅನುಷ್ಠಾನವಾಗಲಿ: ಸಾಜೀದ್ ಮುಲ್ಲಾ.