ಕ್ಷಕಿರಣ ಕ್ಷೇತ್ರದಲ್ಲಿ ಹೊಸಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಹೊಸದಾಗಿ ಈ ಕ್ಷೇತ್ರಕ್ಕೆ ಬರುವವರು ಇದರ ಅರಿವು ಹೊಂದಿರಬೇಕು ಎಂದು ಹೊನ್ನಾವರ ರಾಂಜ್ಟನ್ ಪ್ಯಾರಾ ಮೆಡಿಕಲ್ ಸೈನ್ಸ್ ಸಂಸ್ಥೆಯ ಮುಖ್ಯಸ್ಥ ಸುರೇಶ್.ಟಿ ಹೇಳಿದರು.
ಸಾಗರ: ಕ್ಷಕಿರಣ ಕ್ಷೇತ್ರದಲ್ಲಿ ಹೊಸಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಹೊಸದಾಗಿ ಈ ಕ್ಷೇತ್ರಕ್ಕೆ ಬರುವವರು ಇದರ ಅರಿವು ಹೊಂದಿರಬೇಕು ಎಂದು ಹೊನ್ನಾವರ ರಾಂಜ್ಟನ್ ಪ್ಯಾರಾ ಮೆಡಿಕಲ್ ಸೈನ್ಸ್ ಸಂಸ್ಥೆಯ ಮುಖ್ಯಸ್ಥ ಸುರೇಶ್.ಟಿ ಹೇಳಿದರು.
ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ರೇಡಿಯಾಲಜಿ ಇಮೆಜಿಂಗ್ ಅಸೋಶಿಯೇಷನ್, ರಾಂಟ್ಜನ್ ಇನ್ಸಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಮತ್ತು ಶಿವಮೊಗ್ಗ ಜಿಲ್ಲಾ ರೆಡಿಯಾಲಜಿ ಅಸೋಶಿಯೇಷನಿಂದ ಏರ್ಪಡಿಸಿದ್ದ ರೇಡಿಯೇಷನ್ ಪ್ರೊಟೆಕ್ಷನ್ ಇನ್ ಡೈಯಾಗ್ನಸ್ಟಿಕ್ ರೇಡಿಯಾಲಜಿ ಕುರಿತ ವೈಜ್ಞಾನಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ರೇಡಿಯಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವೈಜ್ಞಾನಿಕ ತರಬೇತಿ ಅತ್ಯಗತ್ಯ. ತಂತ್ರಜ್ಞಾನ ವಿಜ್ಞಾನ ಕ್ಷೇತ್ರದ ಬೆಳವಣಿಗೆ ಅತಿವೇಗವಾಗಿ ಆಗುತ್ತಿದೆ. ಆದರೂ ಗುಣಮಟ್ಟದ ಸುಧಾರಣೆಗೆ ಇನ್ನೂ ಒತ್ತು ನೀಡಬೇಕು. ಎಂ.ಎಸ್ಸಿ. ಪದವಿ ಪಡೆದವರಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಇರುತ್ತದೆ. ಉದ್ಯೋಗ ಸಿಗುತ್ತದೆ ಎಂದು ಓದುವ ಜೊತೆಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ರೇಡಿಯಾಲಜಿ ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.ಅಭಿನಂದಿತರ ಕುರಿತು ಮಾತನಾಡಿದ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಹಿರಿಯ ಸಲಹೆಗಾರ ಮ.ಸ.ನಂಜುಂಡಸ್ವಾಮಿ, ನಾವು ಕೆಲಸ ಮಾಡುವ ಕ್ಷೇತ್ರದ ಬಗ್ಗೆ ನಮಗೆ ಆಸಕ್ತಿ ಇರಬೇಕು. ರೇಡಿಯಾಲಜಿ ಕ್ಷೇತ್ರಕ್ಕೆ ವೈದ್ಯರ ಕೊಡುಗೆ ಅಪಾರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೀಲುಮೂಳೆ ತಜ್ಞ ಡಾ.ಕಿಶನ್ ಭಾಗವತ್ ಮತ್ತು ಡಾ.ನವೀನ್‌ರಾಜ್ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಸಾಗರದಲ್ಲಿಯೇ ಎಂಆರ್ ಸ್ಕ್ಯಾನಿಂಗ್, ರೇಡಿಯಾಲಜಿ ಘಟಕ ತೆರೆದು ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇಂಥವರನ್ನು ಅಭಿನಂದಿಸುವ ಮೂಲಕ ಅವರ ಸೇವೆಯನ್ನು ಗುರುತಿಸಲಾಗುತ್ತಿದೆ ಎಂದು ಹೇಳಿದರು.ಶಿವಮೊಗ್ಗ ಜಿಲ್ಲಾ ಸಂಘದ ಶಂಕರಯ್ಯ ಸಿ.ಗುರುವಿನ್ ಅಧ್ಯಕ್ಷತೆ ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.