- ಹೊನ್ನಾಳಿಯಲ್ಲಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೆಚ್ಚು ಹೆಚ್ಚು ಸದಸ್ಯರನ್ನು ನೋಂದಾಯಿಸುವ ಮೂಲಕ ಹಿರಿಯ ನಾಗರಿಕರ ಸಹಕಾರ ಸಂಘವನ್ನು ಆರ್ಥಿಕವಾಗಿ ಸಬಲಗೊಳಿಸಬೇಕಾಗಿದೆ. ಇದಕ್ಕಾಗಿ ಎಲ್ಲ ನಿರ್ದೇಶಕರು ಕೈ ಜೋಡಿಸಬೇಕು ಎಂದು ಸಂಘದ ಅಧ್ಯಕ್ಷ ಎ.ಜಿ. ಹನುಮಂತಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಹಳೇ ಆಸ್ಪತ್ರೆ ಕಟ್ಟಡದಲ್ಲಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸಹಕಾರ ಸಂಘ ನಿಯಮಿತದ 10ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊನ್ನಾಳಿ ತಾಲೂಕಿನ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆಹಾರ, ವಾಯು, ಶಬ್ದಮಾಲಿನ್ಯಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಜನಜಾಗೃತಿ ಆಗತ್ಯವಾಗಿದೆ. ಸರ್ಕಾರಗಳು ಹಿರಿಯ ನಾಗರಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಬಗ್ಗೆ ಕೂಡ ಚಿಂತನೆ ನಡೆಸಬೇಕು ಎಂದು ಹೇಳಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಮೀನಾಕ್ಷಮ್ಮ, ನಿರ್ದೇಶಕರಾದ ವೀರಪ್ಪ, ಎಚ್.ಪಿ. ಗುರುಮೂರ್ತಿ, ಎಂ. ಬಾಬು, ಕೆ.ದೊಡ್ಡಹಾಲೇಶಪ್ಪ, ಡಿ.ಶೇಖರಪ್ಪ, ಜಿ.ಎಸ್.ಬಸವರಾಜು, ಟಿ.ಎಚ್. ಮಂಜಪ್ಪ, ಬಸವ ಭೋವಿ, ಗೌರಮ್ಮ ಸೇರಿದಂತೆ ಸಂಘದ ಕಾರ್ಯದರ್ಶಿ ಕೆ.ಎಸ್. ಸಿದ್ದಬಸಪ್ಪ, ಎಂ.ಚಂದ್ರಪ್ಪ ಇತರರು ಇದ್ದರು.
-23ಎಚ್.ಎಲ್.ಐ1.ಜೆಪಿಜಿ: