ಮಾನವೀಯ ಮೌಲ್ಯ ಮೂಡಿಸುವ ಸ್ಕೌಟ್ಸ್‌, ಗೈಡ್ಸ್: ಸಭಾಪತಿ ಬಸವರಾಜ ಹೊರಟ್ಟಿ

KannadaprabhaNewsNetwork | Published : Jan 8, 2025 12:16 AM

ಸಾರಾಂಶ

ರಾಜ್ಯದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ದೇಶದಲ್ಲಿ ಅತ್ಯುತ್ತಮ ಸಂಸ್ಥೆ ಎನಿಸಿಕೊಂಡಿದೆ. ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಸ್ಕೌಟ್ಸ್, ಗೈಡ್ಸ್ ,ರೋವರ್ಸ ಮತ್ತು ರೇಂಜರ್ಸ್ ಇದ್ದಾರೆ.

ಧಾರವಾಡ:

ಮಕ್ಕಳಲ್ಲಿ ಶಿಸ್ತು, ರಾಷ್ಟ್ರಭಕ್ತಿ, ಮಾನವೀಯ ಮೌಲ್ಯ ರೂಢಿಸಿ ದೇಶದ ಶಕ್ತಿಯನ್ನಾಗಿಸಲು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖ ಪಾತ್ರ ವಹಿಸಲಿ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ತಾಲೂಕಿನ ದಡ್ಡಿಕಮಲಾಪುರದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಪ್ರಥಮ ಕಿತ್ತೂರು ಕರ್ನಾಟಕ ಜಂಬೋರೇಟ್ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮಕ್ಕಳಲ್ಲಿ ನಾಯಕತ್ವ ಗುಣಕ್ಕೆ ಎನ್ನೆಸ್ಸೆಸ್‌, ಸ್ಕೌಟ್ಸ್‌, ಗೈಡ್ಸ್‌ ಅಗತ್ಯವಾಗಿಬೇಕು ಎಂದರು.

ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ನಮ್ಮ ಮಕ್ಕಳನ್ನು ದೇಶದ ನಿಜವಾದ ಪ್ರಜೆಯನ್ನಾಗಿಸಲು ಇಂತಹ ಚಟುವಟಿಕೆಗಳು ಸದಾ ನಡೆಯುತ್ತಿರಬೇಕು ಎಂದರು.

ಜಾಂಬೋರೇಟ್ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಸಿಸ್ಲೇಪ್ ನಿರ್ದೇಶಕ ಡಾ. ಬಿ.ಕೆ.ಎಸ್ ವರ್ಧನ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುತ್ತದೆ. ಹೊಂದಾಣಿಕೆಯ ಸ್ವಭಾವ ಬೆಳೆಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ರಾಜ್ಯದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ದೇಶದಲ್ಲಿ ಅತ್ಯುತ್ತಮ ಸಂಸ್ಥೆ ಎನಿಸಿಕೊಂಡಿದೆ. ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಸ್ಕೌಟ್ಸ್, ಗೈಡ್ಸ್ ,ರೋವರ್ಸ ಮತ್ತು ರೇಂಜರ್ಸ್ ಇದ್ದಾರೆ. ರಾಷ್ಟ್ರಮಟ್ಟದಲ್ಲಿ ರಾಷ್ಟ್ರಪತಿ ಪದಕ, ರಾಜ್ಯಮಟ್ಟದಲ್ಲಿ ರಾಜ್ಯಪಾಲ ಪದಕ ಪಡೆದುಕೊಂಡ ಹಲವಾರು ಮಕ್ಕಳಿದ್ದಾರೆ. ದೇಶ ಕಟ್ಟುವ ಕೆಲಸದಲ್ಲಿ ಎಲ್ಲರ ಸಹಕಾರಬೇಕಿದೆ ಎಂದು ಹೇಳಿದರು.

ಉಪಾಧ್ಯಕ್ಷ ಗಜಾನನ ಮನ್ನಿಕೆರಿ, ಮಂಡಿಹಾಳ ಗ್ರಾಪಂ ಅಧ್ಯಕ್ಷೆ ನಿಂಗವ್ವ ಕೊಟ್ಟಿಗಿ, ಸದಸ್ಯರಾದ ಚೆಟ್ಟು ಕಾನೆವಾಲೆ, ಲಕ್ಷ್ಮಿ ಧನರಾಜ್ ಮಟವಾಲೆ, ವಿ.ಎಚ್. ಭಟ್ಕಳ್, ಸಿದ್ದಣ್ಣ ಎಂ. ಸಕ್ರಿ, ಡಿಡಿಪಿಐ ಎಸ್‌.ಎಸ್. ಕೆಳದಿಮಠ, ಬಸವರಾಜ ಕಡಕೋಳ, ವಿ.ವಿ. ಕಟ್ಟಿ, ಜಿಲ್ಲಾ ಮುಖ್ಯ ಆಯುಕ್ತ ಶ್ರೀಶೈಲ ಕರಿಕಟ್ಟಿ, ಡಾ. ರೇಣುಕಾ ಅಮಲಝರಿ ಇದ್ದರು.

Share this article