ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆ ಸುಸೂತ್ರ

KannadaprabhaNewsNetwork | Published : Mar 2, 2025 1:19 AM

ಸಾರಾಂಶ

ದ್ವಿತೀಯ ಪರೀಕ್ಷೆ ಶನಿವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ವಿದ್ಯಾರ್ಥಿಗಳು ಬೆಳಿಗ್ಗೆ 8.30ರಿಂದಲೇ ಪರೀಕ್ಷೆ ನಡೆಯುವ ಆವರಣಕ್ಕೆ ಬಂದು ಕೊನೆಯ ಕಸರತ್ತು ಎಂಬಂತೆ ಕೆಲವರು ಪುಸ್ತಕ ಹಿಡಿದು ಓದುತ್ತಿರುವುದು ಕಂಡುಬಂದಿತು. ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ ೧ರಿಂದ ೨೦ರವರೆಗೆ ನಡೆಯಲಿದೆ. ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ೧೫,೪೪೦ ಹೊಸ ವಿದ್ಯಾರ್ಥಿಗಳು, ೪೦೦ ಖಾಸಗಿ, ೫೮೩ ಪುನರಾರ್ವತಿತರು ಸೇರಿ ೧೬,೪೨೩ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ೩೩ ಪರೀಕ್ಷಾ ಕೇಂದ್ರ ತೆರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ದ್ವಿತೀಯ ಪರೀಕ್ಷೆ ಶನಿವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ವಿದ್ಯಾರ್ಥಿಗಳು ಬೆಳಿಗ್ಗೆ 8.30ರಿಂದಲೇ ಪರೀಕ್ಷೆ ನಡೆಯುವ ಆವರಣಕ್ಕೆ ಬಂದು ಕೊನೆಯ ಕಸರತ್ತು ಎಂಬಂತೆ ಕೆಲವರು ಪುಸ್ತಕ ಹಿಡಿದು ಓದುತ್ತಿರುವುದು ಕಂಡುಬಂದಿತು.

ನಗರದ ಗಂಧದಕೋಠಿ ಆವರಣದಲ್ಲಿರುವ ಪ್ರಧಾನ ಕಾಲೇಜು, ಬಿಜಿಎಸ್, ಸುಜಲಾ ಕಾಲೇಜು ಸೇರಿದಂತೆ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ನೆರೆದಿದ್ದರು. ತಮ್ಮ ಮಕ್ಕಳನ್ನು ಪೋಷಕರು ಕರೆದುಕೊಂಡು ಬಂದು ವಾಪಸ್ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಮೊದಲ ದಿನದಂದು ಕನ್ನಡ ಪರೀಕ್ಷೆ ಬರೆದರು. ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ ೧ರಿಂದ ೨೦ರವರೆಗೆ ನಡೆಯಲಿದೆ. ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ೧೫,೪೪೦ ಹೊಸ ವಿದ್ಯಾರ್ಥಿಗಳು, ೪೦೦ ಖಾಸಗಿ, ೫೮೩ ಪುನರಾರ್ವತಿತರು ಸೇರಿ ೧೬,೪೨೩ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ೩೩ ಪರೀಕ್ಷಾ ಕೇಂದ್ರ ತೆರೆಯಲಾಗಿದೆ.

ನಗರದಲ್ಲಿ ೧೨, ಆಲೂರು ೧, ಅರಸೀಕೆರೆ ೬, ಅರಕಲಗೂಡು ೩, ಬೇಲೂರು ೨, ಚನ್ನರಾಯಪಟ್ಟಣ ೪, ಜಾವಗಲ್ ೧, ಹೊಳೆನರಸೀಪುರ ೩ ಹಾಗೂ ಸಕಲೇಶಪುರದಲ್ಲಿ ೧ ಕೇಂದ್ರ ಸ್ಥಾಪಿಸಲಾಗಿದೆ. ೭೧೯೯ ಬಾಲಕರು ಹಾಗೂ ೯೨೨೪ ಬಾಲಕಿಯರು ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ. ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳು ಮೊಬೈಲ್, ರಿಸ್ಟ್ ವಾಚ್, ಬ್ಲೂಟೂತ್ ಸೇರಿ ವಿದ್ಯುನ್ಮಾನ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಮೂಲಕ ಪ್ರತಿ ಪರೀಕ್ಷಾ ಕೇಂದ್ರಗಳ ಚಲನವಲನ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ನಿರಂತರವಾಗಿ ಇರುವಂತೆ ನೋಡಿಕೊಳ್ಳಲು ಸೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದರು.

Share this article