ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ನೂತನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾಗಿ ನಿವೃತ್ತ ಕೃಷಿ ವಿಜ್ಞಾನಿ ಡಾ. ಸತೀಶ ಗಜಾನನ ಹೆಗಡೆ ಹುಳಗೋಳ ಆಯ್ಕೆ ಆಗಿದ್ದಾರೆ. ಕಾರ್ಯದರ್ಶಿಯಾಗಿ ಗಣಪತಿ ವಿಶ್ವನಾಥ ಹೆಗಡೆ ಗೊಡ್ವೆಮನೆ ಪುನರಾಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರಾಗಿ ಸದಾನಂದ ಹೋಬಳಿದಾರ, ಸೀತಾರಾಮ ನಾಯ್ಕ ಹಳದೀಪುರ, ವಿ.ಎನ್. ಹೆಗಡೆ ಬೊಮ್ಮನಹಳ್ಳಿ, ರಮಾಕಾಂತ ಹೆಗಡೆ ಮಂಡೆಮನೆ, ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ, ಹರಿಪ್ರಕಾಶ ಕೋಣೆಮನೆ, ಸೀತಾರಾಮ ಹೆಗಡೆ ನೀರ್ನಳ್ಳಿ, ನಾರಾಯಣ ಹೆಗಡೆ ಬೀಗಾರ, ರಾಮಕೃಷ್ಣ ಹೆಗಡೆ ಭೈರುಂಬೆ, ಗಣಪತಿ ವಿಶ್ವೇಶ್ವರ ಹೆಗಡೆ ಹಿರೇಸರ, ರಾಘವೇಂದ್ರ ಹೆಗಡೆ ಕೂಗ್ತೆಮನೆ, ಶ್ರೀಪಾದ ಭಟ್ಟ ಹೆಬ್ಬಲಸು, ಮಹಾಬಲೇಶ್ವರ ಹೆಗಡೆ ಸಂಪೆಕಟ್ಟ, ಗಣಪತಿ ಹೆಗಡೆ ಹೀರೇಕೈ, ಪುರುಷೋತ್ತಮ ಹೆಗಡೆ ಕಳಲೆಮಕ್ಕಿ, ಶ್ರೀಪಾದ ರಾಯ್ಸದ ಒಡ್ಡಿನಕೊಪ್ಪ, ನಾರಾಯಣ ಹೆಗಡೆ ಕೆರೆಗದ್ದೆ, ನಾರಾಯಣ ಸೀತಾರಾಮ ಭಟ್ಟ ಬಟ್ಲಗುಂಡಿ, ಗೋಪಾಲ ಪದ್ಮನಾಭ ಭಟ್ ಶಿವಪುರ, ಶ್ರೀಕಾಂತ ಹೆಗಡೆ ಅತ್ತಿಕಾರಗದ್ದೆ, ಶ್ರೀಪತಿ ಯಜ್ಞೇಶ್ವರ ಭಟ್ ಬ್ಯಾಗದ್ದೆ, ನಾರಾಯಣ ಕಮೇಶ್ವರ ಭಟ್ ಅಗ್ಗಾಶಿಕುಂಬ್ರಿ ಹಾಗೂ ಕೃಷ್ಣ ಭಟ್ಟ ಹೆಗ್ಗಾರ ಆಯ್ಕೆಯಾಗಿದ್ದಾರೆ. ಕಾಯಂ ಆಹ್ವಾನಿತರಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್ ಹಾಗೂ ರಾಮಕೃಷ್ಣ ಶೇರೆಗಾರ ಬೈಂದೂರು ಇರಲಿದ್ದಾರೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.