ಇಂದಿನಿಂದ ಸ್ವಯಂ ಜನಗಣತಿ ಆರಂಭ: ಯು.ಪಿ.ಪಂಪಾಶ್ರೀ

KannadaprabhaNewsNetwork |  
Published : Apr 01, 2026, 01:30 AM IST
(ಯು.ಪಿ.ಪಂಪಾಶ್ರೀ- ಅವರ ಹೆಸರಿನಲ್ಲೇ ಫೋಟೋ ಇದೆ) | Kannada Prabha

ಸಾರಾಂಶ

ಗ್ರಾಮಾಂತರ ವ್ಯಾಪ್ತಿಗೆ ತಹಸೀಲ್ದಾರ್ ಹಾಗೂ ನಗರ ಭಾಗಕ್ಕೆ ಪೌರಾಯುಕ್ತರು ಮೇಲ್ವಿಚಾರಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಷ್ಟ್ರೀಯ ಜನಗಣತಿಯನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಆದೇಶದಂತೆ ಮಂಡ್ಯ ನಗರ ಮತ್ತು ತಾಲೂಕು ವ್ಯಾಪ್ತಿಯ ಜನಗಣತಿ ಕಾರ್ಯಕ್ರಮ ಬುಧವಾರ (ಏ.೧)ದಿಂದ ಆರಂಭಿಸಲಾಗುವುದು ಎಂದು ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ತಿಳಿಸಿದ್ದಾರೆ.

ಗ್ರಾಮಾಂತರ ವ್ಯಾಪ್ತಿಗೆ ತಹಸೀಲ್ದಾರ್ ಹಾಗೂ ನಗರ ಭಾಗಕ್ಕೆ ಪೌರಾಯುಕ್ತರು ಮೇಲ್ವಿಚಾರಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಷ್ಟ್ರೀಯ ಜನಗಣತಿಯನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

೨೦೦ ಮನೆಗೆ ಒಂದು ಬ್ಲಾಕ್ ಮಾಡಿದ್ದು, ಅದರಂತೆ ಒಟ್ಟಾರೆ ನಗರ ಭಾಗದಲ್ಲಿ ೨೬೧ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ೨೬೧ ಗಣತಿದಾರರು ಆಯ್ಕೆ ಮಾಡಿಕೊಂಡಿದ್ದು, ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿರುವುದರಿಂದ ಏ.೧ರಿಂದ ೧೫ನೇ ತಾರೀಖಿನರೆಗೆ ಒಂದು ನಿರ್ದಿಷ್ಟ ಲಾಗಿನ್ ಮೂಲಕ ಸ್ವಯಂಘೋಷಿತವಾಗಿ ಮಾಹಿತಿಯನ್ನು ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದಿದ್ದಾರೆ.

ಸಾರ್ವಜನಿಕರು ಹಂಚಿಕೊಳ್ಳುವ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಭಾರತ ಸರ್ಕಾರ ರಾಷ್ಟ್ರೀಯ ಜನ ಕಲ್ಯಾಣ ಮತ್ತು ಜನಹಿತಕ್ಕಾಗಿ ರೂಪಿಸಲಾಗಿರುವ ರಾಷ್ಟ್ರೀಯ ಕಾರ್ಯಕ್ರಮವೆಂದು ತಿಳಿದು ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

ಏ.೧೫ ರಿಂದ ಮೇ ೧೫ರವರೆಗೆ ಮೀಸಲು ಗಣತಿದಾರರು ಹಾಗೂ ಸೂಪರ್‌ವೈಸರ್ ಸೇರಿ ೩೪೨ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ವಿವರಗಳನ್ನು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.ಒಂದು ತಿಂಗಳು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ

ಕನ್ನಡಪ್ರಭ ವಾರ್ತೆ ಮಂಡ್ಯ

ವೈದಿ ಪಾಲಿ ಕ್ಲಿನಿಕ್ ವತಿಯಿಂದ ಏಪ್ರಿಲ್ ೧ ರಿಂದ ೩೦ರವರೆಗೆ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹೆ, ಶೇ.೫೦ರಷ್ಟು ರಿಯಾಯ್ತಿ ದರದಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಡಲಾಗುವುದು ಎಂದು ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಯಾಶಿಕ ಅನಿಲ್ ತಿಳಿಸಿದ್ದಾರೆ. ಉಚಿತವಾಗಿ ಕ್ಯಾನ್ಸರ್ ಪತ್ತೆಗೆ ನಡೆಸುವ ಪ್ಯಾಪ್‌ಸ್ಮಿಯರ್, ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಾಗುವುದು. ಆರೋಗ್ಯ ಸಲಹೆ, ಗರ್ಭಕೋಶ ಶಸ್ತ್ರಚಿಕಿತ್ಸೆ ಅಗತ್ಯವಿರುವವರು ವೈದಿ ಪಾಲಿ ಕ್ಲಿನಿಕ್, ನಿರಾಳ ಆಸ್ಪತ್ರೆ ಮುಂಭಾಗ, ಆಸ್ಪತ್ರೆ ರಸ್ತೆ, ಮಂಡ್ಯ. ಮೊ: ೮೬೬೦೪೮೨೬೪೮ ಮತ್ತು ೯೯೬೪೫೩೩೧೩೩ ಸಂಪರ್ಕಿಸಲು ಕೋರಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕಾಲಿಕ ಮಳೆಗೆ ತರಕಾರಿ ವ್ಯಾಪಾರಸ್ಥರ ಬದುಕು ಮೂರಾಬಟ್ಟೆ: ಸೂಕ್ತ ತರಕಾರಿ ಮಾರುಕಟ್ಟೆ ಕಲ್ಪಿಸದ ಪಟ್ಟಣ ಪಂಚಾಯ್ತಿ
ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸಮಯ ಪ್ರಜ್ಞೆಯ ಅಗತ್ಯವಿದೆ: ಡೀಸಿ ಲತಾಕುಮಾರಿ