ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ೩ನೇ ಬೃಹತ್ ರೈತ ಜಾಗೃತಿ ಸಮಾವೇಶ, ಕೃಷಿ ಮೇಳ ಹಾಗೂ ಸಾಧಕ ಪ್ರಗತಿಪರ ೨೫ ರೈತರಿಗೆ ನೇಗಿಲಯೋಗಿ ಪ್ರಶಸ್ತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಅತ್ಯಂತ ವಿಶೇಷವಾದ ಅರಣ್ಯ ಸಂಪತ್ತು ನಮ್ಮ ದೇಶದಲ್ಲಿದೆ, ಅದನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದರಲ್ಲಿ ಅನೇಕ ಔಷಧಿ ಸಸ್ಯಗಳಿವೆ ಅವುಗಳನ್ನು ಉಳಿಸಿಕೊಂಡು ಹೋಗಲು ಈ ನಾಡಿನ ಎಲ್ಲಾ ಮಠಾಧಿಶರು ಹಾಗೂ ರೈತ ಬಾಂಧವರು ಪ್ರಮಾಣ ಮಾಡಬೇಕಾಗಿದೆ. ಅರಣ್ಯ ಉಳಿದರೆ ಮಾತ್ರ ನಾವೂ ನಮ್ಮ ಮುಂದಿನ ಪೀಳಿಗೆ ಉಳಿಯಲು ಸಾಧ್ಯವಾಗಲಿದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು.ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಡೆದಾಡುವ ದೇವರು ಸಿದ್ದೇಶ್ವರ ಅಪ್ಪಾಜಿಯವರು ಯಾವಾಗಲು ರೈತರನ್ನ ದೊಡ್ಡವರು ಎಂದು ಹೇಳಲು ಕಾರಣವೆನೆಂದರೆ ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಎಲ್ಲರನ್ನು ಸಾಕುವ ಶಕ್ತಿ ರೈತರಿಗಿದೆ ಎಂದು ಹೇಳಿದರು.ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ರೂಪಾ.ಎಲ್ ಮಾತನಾಡಿ, ರೈತರಿಗೆ ಸರ್ಕಾರದಿಂದ ಹಲವಾರು ಯೋಜನೆಗಳು ಬಂದಿವೆ. ಅವುಗಳನ್ನು ಸರಿಯಾಗಿ ಸದ್ವಿನೀಯೋಗ ಮಾಡಿಕೊಳ್ಳಬೇಕಾದರೆ ಇಂತಹ ಜಾಗೃತಿ ಸಮಾವೇಶಗಳು ಅತೀ ಅವಶ್ಯವಾಗುತ್ತದೆ. ಇಲ್ಲಿ ತಜ್ಞರಿಂದ ವಿಚಾರ ಘೋಷ್ಠಿಯ ಮೂಲಕ ಯಾವ ರೀತಿ ಕೃಷಿ ಮಾಡಬೇಕು, ಕಡಿಮೆ ಖರ್ಚಿನಲ್ಲಿ ಹೆಚ್ಚು ಹೆಚ್ಚು ಲಾಭ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಬಹುದು ಜೊತೆಗೆ ಹೊಸ ಹೊಸ ಅವಿಷ್ಕಾರಗಳ ಮಾಹಿತಿಯನ್ನು ಪಡೆಯಲು ಇಂತಹ ಸಮಾವೇಶಗಳಿಂದ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಮಖಣಾಪುರದ ಸೋಮೇಶ್ವರ ಮಹಾಸ್ವಾಮಿಗಳು, ಕಕಮರಿಯ ಅಭಿನವ ಗುರುಲಿಂಗ ಜಂಗಮ ಮಹಾರಾಜರು ಮಾತನಾಡಿದರು. ಕೃಷಿ ಮಹಾ ವಿದ್ಯಾಲಯದ ವಿದ್ಯಾಧಿಕಾರಿ ಅಶೋಕ ಸಜ್ಜನ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ, ಎಂ.ಎನ್.ನಾಯಿಕ, ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಮ್ಯಾನೇಜರ್ ಸಂಪತ್ ಕುಮಾರ ಹಾಗೂ ಡಾ.ವಿಜಯಕುಮಾರ ನಾರಾಯಣಪುರ, ಗುರುಮರುಳಾರಾಧ್ಯ ಶಿವಾಚಾರ್ಯರು, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಇರಫಾನ ಬಾಂಗಿ, ಬಾಗಲಕೋಟ ತೋಟಗಾರಿಕಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ರಮೇಶ, ಡಾ.ಸಂಗನಬಸವ ಗೊಳ್ಳಗಿ, ಡಾ.ಜಿ.ಎಸ್.ಯಡಹಳ್ಳಿ, ಪ್ರಗತಿಪರ ಚಿಂತಕರಾದ ಮಹಾಂತೇಶ ಬಿರಾದಾರ, ಶ್ರೀನಾಥ ಪೂಜಾರಿ, ರಾಜ್ಯಾಧ್ಯಕ್ಷ ಚುನ್ನಪ್ಪಾ ಪೂಜೇರಿ, ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರುಜೀ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ದೇವಿಂದ್ರಪ್ಪಗೌಡ ಪೋಲಿಸಪಾಟೀಲ, ಅಭಿಷೇಕ ಹೂಗಾರ, ಸುರೇಶ ಬಿರಾದಾರ ಉಪಸ್ಥಿತರಿದ್ದರು.----
ಕೋಟ್‌ನಮ್ಮ ದೇಶದಲ್ಲಿ ಅತ್ಯಂತ ವಿಶೇಷವಾದ ಅರಣ್ಯ ಸಂಪತ್ತು ಇದೆ, ಅದನ್ನು ಉಳಿಸಿಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದರಲ್ಲಿ ಅನೇಕ ಔಷಧಿ ಸಸ್ಯಗಳಿದ್ದು, ಅವುಗಳನ್ನು ಉಳಿಸಿಕೊಂಡು ಹೋಗಲು ಈ ನಾಡಿನ ಎಲ್ಲಾ ಮಠಾಧಿಶರು ಹಾಗೂ ರೈತ ಬಾಂಧವರು ಪ್ರಮಾಣ ಮಾಡುವ ಅಗತ್ಯವಿದೆ. ಅರಣ್ಯ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ, ನಮ್ಮ ಮುಂದಿನ ಪೀಳಿಗೆಗೆ ಅರಣ್ಯ ಸಂಪತ್ತಿನ ಅಗತ್ಯವಿದೆ.ಶಿವಕುಮಾರ ಸ್ವಾಮೀಜಿ, ಗದುಗಿನ ಕಪ್ಪತ್ತಗುಡ್ಡ