ಯಲಬುರ್ಗಾ: ದೇಶದ ಅಭಿವೃದ್ಧಿಯಲ್ಲಿ ಪ್ರಧಾನಿ ಮೋದಿ ನಿಸ್ವಾರ್ಥ ಸೇವೆಯು ಪಕ್ಷದ ಕಾರ್ಯಕರ್ತರಿಗೆ ಮಾದರಿಯಾಗಿದೆ.ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷದ ಸಂಘಟನೆಗೆ ವಿಶೇಷ ಒತ್ತು ನೀಡಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜಿಪಂ, ತಾಪಂ,ಗ್ರಾಪಂ ಹಾಗೂ ಪಪಂ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲುವು ಸಾಧಿಸುವಂತೆ ಕಾರ್ಯಕರ್ತರು ಸಜ್ಜಾಗಬೇಕು. ನನ್ನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ನೀಡಲಾಗಿದ್ದು, ವಿಶೇಷವಾಗಿ ಕೆರೆ ತುಂಬಿಸುವುದು ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಒತ್ತು ನೀಡಿ ಹಲವು ಕಾರ್ಯ ಕೈಗೊಂಡಿದ್ದೇನೆ.ಆ ಅಭಿವೃದ್ಧಿ ಕಾರ್ಯ ಜನರಿಗೆ ತಿಳಿಸಿ, ಪಕ್ಷದ ಪರ ಮತದಾರರನ್ನು ಒಗ್ಗೂಡಿಸುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಬಿಜೆಪಿ ಪಕ್ಷದ ಸಿದ್ಧಾಂತ ಮನೆಮನೆಗೆ ತಲುಪಿಸಿ, ಮತದಾರರೊಂದಿಗೆ ನಿಕಟ ಸಂಪರ್ಕ ಬೆಳೆಸುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ ಗುಳಗಣ್ಣನವರ ಮಾತನಾಡಿ, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು. ತರಬೇತಿ ಶಿಬಿರಗಳು ಕಾರ್ಯಕರ್ತರ ಸಾಮರ್ಥ್ಯ ಹೆಚ್ಚಿಸುತ್ತವೆ. ದೇಶದ ಬಿಜೆಪಿ ಸಂಘಟನೆ ವಿಶ್ವಕ್ಕೆ ಪ್ರೇರಣೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಿ ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ನೀಲಕಂಠಪ್ಪ ಹಾಗೂ ಸೋಮನಾಥ ಕಾರ್ಯಕ್ರಮದ ಪ್ರಶಿಕ್ಷಣದ ಉದ್ದೇಶ,ಕಾರ್ಯಪದ್ಧತಿ ಮತ್ತು ಸಂಘಟನಾ ಚಟುವಟಿಕೆಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಲೀಲಾ ದಳವಾಯಿ, ವೀರಣ್ಣ ಹುಬ್ಬಳ್ಳಿ, ಬಸಲಿಂಗಪ್ಪ ಭೂತೆ, ವಿಶ್ವನಾಥ ಮರಿಬಸಪ್ಪನವರ, ರತನ ದೇಸಾಯಿ, ಶರಣಪ್ಪ ಈಳಿಗೇರ್, ಸಂತೋಷಿಮಾ ಜೋಶಿ, ಗುಂಗಾಡಿ, ಶರಣಪ್ಪ, ಪ್ರಭುರಾಜ ಕಲಬುರ್ಗಿ, ಶಿವಪ್ಪ ವಾದಿ, ಅಮರೇಶ ಹುಬ್ಬಳ್ಳಿ, ದೊಡ್ಡಯ್ಯ ಗುರುವಿನ, ಕಳಕಪ್ಪ ತಳವಾರ್, ಕಲ್ಲಪ್ಪ ಕರಮುಡಿ, ಬಾಪುಗೌಡ ಪಾಟೀಲ್, ಸಿದ್ದು ಮಣ್ಣಿನನವರ ಸೇರಿದಂತೆ ಮತ್ತಿತರರು ಇದ್ದರು.