ಜಾಗತಿಕ ತಾಪಮಾನದಿಂದ ಜೀವವೈವಿಧ್ಯತೆ ಮೇಲೆ ಗಂಭೀರ ಪರಿಣಾಮ : ಡಾ. ಎಲ್. ಎಂ. ಪೂಜಾರ

KannadaprabhaNewsNetwork | Updated : Mar 01 2025, 01:20 PM IST

ಸಾರಾಂಶ

ಉಷ್ಣಮಾನದ ಪರಿಣಾಮ ಸಸ್ಯ ಪ್ರಾಣಿಗಳ ಪರಸ್ಪರ ಸಂಬಂಧಗಳು ಬದಲಾಗುತ್ತಿವೆ. ಆಹಾರ ಸರಪಳಿಯಲ್ಲಿಯೂ ವ್ಯತ್ಯಾಸ ಉಂಟಾಗುತ್ತದೆ.

ರಾಣಿಬೆನ್ನೂರು: ಜಾಗತಿಕ ತಾಪಮಾನವು ಜೈವಿಕ ವೈವಿಧ್ಯತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರಿಂದ ಪ್ರಕೃತಿ ವಾಸಸ್ಥಳಗಳು ನಾಶವಾಗುತ್ತವೆ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಎಲ್.ಎಂ. ಪೂಜಾರ ತಿಳಿಸಿದರು.ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜಾಗತಿಕ ತಾಪಮಾನದಿಂದ ಜೈವಿಕ ವೈವಿಧ್ಯತೆಯ ಮೇಲೆ ಬೀರುವ ಪರಿಣಾಮ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಲವಾರು ಪ್ರಾಣಿಗಳು ಅಂದರೆ ಧ್ರುವ ಪ್ರದೇಶದ ಪೋಲಾರ್ ಬಿಯರ್ಸ್ ಮತ್ತು ಪೆಂಗ್ವಿನ್ಸ್ ಅಪಾಯಕ್ಕೆ ಒಳಗಾಗುತ್ತವೆ. ಸಮುದ್ರದ ಕರಲ್ ರೀಪ್ಸ್‌ ಉಷ್ಣತೆ ಮತ್ತು ಆಮ್ಲೀಕರಣದಿಂದ ಮೃತಪಡುತ್ತಿವೆ. ಜತೆಗೆ ಉಷ್ಣಮಾನದ ಪರಿಣಾಮ ಸಸ್ಯ ಪ್ರಾಣಿಗಳ ಪರಸ್ಪರ ಸಂಬಂಧಗಳು ಬದಲಾಗುತ್ತಿವೆ. ಆಹಾರ ಸರಪಳಿಯಲ್ಲಯೂ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಪರಿಸರ ಸಮತೋಲನ ಕುಂಠಿತವಾಗಿದ್ದು, ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಲು ಅವಶ್ಯಕತೆ ಇದೆ. ಇದರ ಬಗ್ಗೆ ವಿದ್ಯಾರ್ಥಿನಿಯರು ಇತರರಿಗೆ ಜಾಗೃತಿ ಮೂಡಿಸಬೇಕು ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾದ್ಯಕ್ಷ ಪ್ರೊ. ರೇಖಾ ಶಿಡೇನೂರ, ಪ್ರೊ. ಸಾಯಿಲತಾ ಮಡಿವಾಳರ, ಕು, ಗೌರಿ ಇಂಗಳಗುಂದಿ, ಪ್ರೊ. ಎಂ.ಎನ್. ಸೂರಣಗಿ, ಪ್ರೊ. ಚನ್ನಬಸಪ್ಪ ಮಾಳಿ, ಕು. ಮಾಲಾ ಉಮ್ಮಣ್ಣನವರ, ಅಕ್ಷತಾ ಅಲಗಿಲವಾಡ ಹಾಗೂ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಶಾಂತಿಯುತ ಸಹಬಾಳ್ವೆಗೆ ಸಾಮಾಜಿಕ ನ್ಯಾಯ ಅಗತ್ಯ

ಹಾವೇರಿ: ಜನತೆಯ ಶಾಂತಿಯುತ, ಸಮೃದ್ಧ ಹಾಗೂ ಸಹಬಾಳ್ವೆಗೆ ಸಾಮಾಜಿಕ ನ್ಯಾಯ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್. ಮುತಾಲಿಕದೇಸಾಯಿ ತಿಳಿಸಿದರು.ಡಾ. ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಬೇಕು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಕಾನೂನು ಅರಿವು ಹಾಗೂ ನೆರವಿನ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಟೋಲ್ ಫ್ರೀ ಸಹಾಯವಾಣಿ 15100 ಸಂಪರ್ಕಿಸಬಹುದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಕ ಎನ್.ಎನ್. ಡಿಳ್ಳೆಪ್ಪನರ ಅವರು ವಿಶ್ವ ಸಾಮಾಜಿಕ ನ್ಯಾಯ ಸಿದ್ಧಾಂತದ ಕುರಿತು ಉಪನ್ಯಾಸ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ, ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ ಹಾಗೂ ನಿಲಯ ಪಾಲಕಿ ನಂದಾ ಹೂಗಾರ ಅವರು ಉಪಸ್ಥಿತರಿದ್ದರು.

Share this article