ಕುಷ್ಟಗಿ ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಇನ್ನರ್ ವೀಲ್ ಕ್ಲಬ್ ಮೂಲಕ ನಿರ್ಗತಿಕರ, ಅಸಹಾಯಕರ ಸೇವೆಯನ್ನು ಮಾಡಬೇಕು ಎಂದು ಡಿಸ್ಟ್ರಿಕ್ ಎಡಿಟರ್ ಸುಷ್ಮಾ ಪತಂಗೆ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕುಷ್ಟಗಿ ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಸಂಘಟನೆ ಎಂದರೆ ಅದು ಇನ್ನರ್ ವಿಲ್ ಕ್ಲಬ್ ಮಾತ್ರ. ಕುಷ್ಟಗಿ ವ್ಯಾಪ್ತಿಯಲ್ಲಿ ಬರುವಂತಹ ಅಸಹಾಯಕರು, ನಿರ್ಗತಿಕರನ್ನು ಹಾಗೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಸೇವೆಯನ್ನು ಮಾಡುವಂತಹ ಕಾರ್ಯ ಮಾಡಬೇಕು. ಇದರ ಜೊತೆಗೆ ಆರೋಗ್ಯ, ಶಿಕ್ಷಣ ಸೇರಿದಂತೆ ಸಾಮಾಜಿಕ ಕಾರ್ಯ ಮಾಡುವಂತಾಗಬೇಕು. ಎಲ್ಲ ಸದಸ್ಯರು ನೂತನವಾಗಿ ಆಯ್ಕೆಯಾದಂತಹ ಪದಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ನಿಕಟ ಪೂರ್ವ ಅಧ್ಯಕ್ಷೆ ಶಾರದಾ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಎರಡು ಬಾರಿ ಕ್ಲಬ್ ಅಧ್ಯಕ್ಷಳಾಗಿ ಸೇವೆ ಸಲ್ಲಿಸಿದ್ದು, ಮುಂಬರುವ ಅಧ್ಯಕ್ಷರಿಗೂ ಹಾಗೂ ಪದಾಧಿಕಾರಿಗಳಿಗೆ ಎಲ್ಲ ಸದಸ್ಯರು ಸಹಾಯ ಮತ್ತು ಸಹಕಾರ ಮಾಡಬೇಕು ಎಂದರು.
ಕ್ಲಬ್ ನೂತನ ಅಧ್ಯಕ್ಷರಾಗಿ ವಂದನಾ ಗೋಗಿ, ಕಾರ್ಯದರ್ಶಿಗಳಾಗಿ ಮೇಘಾ ದೇಸಾಯಿ, ಖಜಾಂಚಿಯಾಗಿ ಪ್ರಭಾವತಿ ಬಂಗಾರ ಶೆಟ್ಟರ್, ಐಎಸ್ಓಗಳಾಗಿ ಗೌರಮ್ಮ ಕುಡತೀನಿ, ಎಡಿಟರ್ ಆಗಿ ಕಾವೇರಿ ಕುಂದರಗಿ ಪದಗ್ರಹಣ ಮಾಡಿದರು. ಈ ಸಂದರ್ಭ ಇನ್ನರ್ ವೀಲ್ ಕ್ಲಬ್ ಸರ್ವ ಸದಸ್ಯರು ಇದ್ದರು.