ಚೆಲುವನಾರಾಯಣಸ್ವಾಮಿಗೆ ಹರಿಜನರ ಸೇವೆ; ಬಂಗಾರದ ಪಲ್ಲಕ್ಕಿ ಉತ್ಸವ

KannadaprabhaNewsNetwork |  
Published : Apr 02, 2026, 01:45 AM IST
1ಕೆಎಂಎನ್ ಡಿ29 | Kannada Prabha

ಸಾರಾಂಶ

ಮಹಾರಥೋತ್ಸವದ ನಂತರ ಮಂಗಳವಾರ ರಾತ್ರಿ ಚೆಲುವನಾರಾಯಣಸ್ವಾಮಿಗೆ ಪುಷ್ಪಕೈಂಕರ್ಯ ನೈವೇಧ್ಯ ಮುಖ್ಯವಾಗಿ ಅವರೇ ಪಲ್ಲಕ್ಕಿ ಉತ್ಸವ ನಡೆಸುವ ಮೂಲಕ ಶ್ರದ್ಧಾಭಕ್ತಿಂದ ಸೇವೆ ಮಾಡಿದರು.

ಮೇಲುಕೋಟೆ:

ಮಹಾರಥೋತ್ಸವದ ನಂತರ ಮಂಗಳವಾರ ರಾತ್ರಿ ಚೆಲುವನಾರಾಯಣಸ್ವಾಮಿಗೆ ಹರಿಜನರ ಸೇವೆಯಾದ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವವನ್ನು ಹರಿಜನರು ಶ್ರದ್ಧಾಭಕ್ತಿಂದ ನೆರವೇರಿಸಿದರು.

ಚೆಲುವನಾರಾಯಣಸ್ವಾಮಿಗೆ ಪುಷ್ಪಕೈಂಕರ್ಯ ನೈವೇಧ್ಯ ಮುಖ್ಯವಾಗಿ ಅವರೇ ಪಲ್ಲಕ್ಕಿ ಉತ್ಸವ ನಡೆಸುವ ಮೂಲಕ ಶ್ರದ್ಧಾಭಕ್ತಿಂದ ಸೇವೆ ಮಾಡಿದರು. ಆಚಾರ್ಯರಾಮಾನುಜರು ಅಂದಿನ ಬಿಗಿಯಾದ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಬ್ರಹ್ಮೋತ್ಸವದ ಕಾಲದಲ್ಲಿ ತೇರು, ತೆಪ್ಪ, ತೀರ್ಥಗಳಂದು ಚೆಲುವನಾರಾಯಣಸ್ವಾಮಿ ದೇವಾಲಯ ಮುಕ್ತಪ್ರವೇಶ ಹಾಗೂ ಸೇವೆಗೆ ಅವಕಾಶ ಕಲ್ಪಿಸಿದ್ದರು.

ಪ್ರಮುಖವಾಗಿ ಮಹಾರಥೋತ್ಸವದ ರಾತ್ರಿ ಬಂಗಾರದಪಲ್ಲಕ್ಕಿ ನಡೆಸುವ ಅವಕಾಶ ನೀಡಿದ್ದು, ಮೈಸೂರಿನ ಅಶೋಕಪುರಂನ ಕಾಳಿಕಾಂಬ ಟ್ರಸ್ಟ್ ದಲಿತರ ಪರ ಪ್ರತಿವರ್ಷ ಉತ್ಸವ ನಡೆಸುತ್ತಾ ಬಂದಿದೆ. ಈ ವರ್ಷವೂ ಅದ್ದೂರಿಯಾಗಿ ನೆರವೇರಿಸಿತು. ರಾತ್ರಿ 9.15ರವೇಳೆಗೆ ದಲಿತರ ವಿಶೇಷ ಮಂಗಳವಾಧ್ಯಗಳೊಂದಿಗೆ ಆರಂಭವಾದ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವ 12ಗಂಟೆ ವೇಳೆಗೆ ಮುಕ್ತಾಯವಾಯಿತು.

ಉತ್ಸವದಲ್ಲಿ ದಲಿತ ಮುಖಂಡರಾದ ಕಾಳಿಕಾಂಬ ಟ್ರಸ್ಟ್ ಗೌರವಾಧ್ಯಕ್ಷ ವೆಂಕಟರಾಮು, ಮೈಸೂರಿನ ಮಾಜಿ ಮೇಯರ್ ಹಾಗೂ ಅಧ್ಯಕ್ಷ ಪುರುಷೋತ್ತಮ್ ಮತ್ತು ಕಾರ್ಯದರ್ಶಿ ಎಂ.ಚಂದ್ರಶೇಖರ್ ಮತ್ತು ಸಹಕಾರ್ಯದರ್ಶಿ ಸೋಮಣ್ಣ ಗುಂಡಪ್ಪ ಸಹಕಾರ್ಯದರ್ಶಿ ಆರ್.ಸಿ ಮಹೇಶ್ ಸೇರಿದಂತೆ ಸಾವಿರಾರು ದಲಿತ ಭಕ್ತರು ಭಾಗವಹಿಸಿದ್ದರು. ಬಂಗಾರದ ಪಲ್ಲಕ್ಕಿ ಉತ್ಸವ ವೈಭವದಿಂದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ನೆರವೇರಿತು.

ಉತ್ಸವದ ಸಂಬಂಧ ಆಹ್ವಾನ ಪತ್ರಿಕೆ ನೀಡದ ದೇಗುಲದ ಇಒ ನಿರ್ಲಕ್ಷ್ಯ ಧೋರಣೆ ಬಗ್ಗೆ ಟ್ರಸ್ಟ್ ಅಧ್ಯಕ್ಷರು ಅಸಮಧಾನ ವ್ಯಕ್ತಪಡಿಸಿ, ಇದೇ ರೀತಿ ಸಮುದಾಯಕ್ಕೆ ಅಪಮಾನ ಮಾಡಿದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.ಸಿದ್ಧಗಂಗಾ ಶ್ರೀಗಳ ಜನ್ಮದಿನಾಚರಣೆ; ಭಾರತರತ್ನ ನೀಡಲು ಆಗ್ರಹ

ಮದ್ದೂರು: ಕರ್ನಾಟಕ ರತ್ನ, ಪದ್ಮಭೂಷಣ, ನಡೆದಾಡಿದ ದೇವರು ಡಾ.ಶಿವಕುಮಾರ ಮಹಾಸ್ವಾಮೀಜಿಗಳ 119ನೇ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಪಟ್ಟಣದಲ್ಲಿ ಆಚರಿಸಲಾಯಿತು.ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಸಿದ್ದಗಂಗಾ ಶ್ರೀಗಳ ಭಕ್ತವೃಂದದಿಂದ ಲೀಲಾವತಿ ಬಡಾವಣೆಯ ಉದ್ಯಾನದ ಬಳಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಗಣ್ಯರು ನೂರಾರು ಮಂದಿ ಸಾರ್ವಜನಿಕರಿಗೆ ದಾಸೋಹ ವಿತರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, 111 ವರ್ಷಗಳ ಕಾಲ ತ್ರಿವಿಧ ದಾಸೋಹ ನಡೆಸಿದ ಪೂಜ್ಯ ಸಿದ್ದಗಂಗಾ ಶ್ರೀಗಳು ಕೋಟ್ಯಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ಮಹಾನ್ ಸಂತ. ಶತಾಯುಷಿ ಶ್ರೀಗಳ ಆದರ್ಶಮಯ ಬದುಕು ಇಂದಿನ ಸಮಾಜಕ್ಕೆ ಮಾರ್ಗದರ್ಶನವಾಗಬೇಕಿದೆ ಎಂದರು.ಮಹಾಸಭಾ ತಾಲೂಕು ಅಧ್ಯಕ್ಷ ಶಿವಾನಂದ ದಾಸೋಹಕ್ಕೆ ಚಾಲನೆ ನೀಡಿದರು. ಮುಂಖಂಡರಾದ ಮೆಣಸಗೆರೆ ಶಿವಲಿಂಗಯ್ಯ, ಮಹೇಶ್, ತೇಜಸ್, ಬಸವರಾಜ್, ಕೆಂಪಣ್ಣ, ಕೆಂಪರಾಜು, ಮರಲಿಂಗಪ್ಪ, ಮಹದೇವಸ್ವಾಮಿ, ಗುರುಮಲ್ಲೇಶ್, ಎಂ.ಸಿದ್ದರಾಮು, ಚಲುವರಾಜ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಗಂಗಾ ಮಠ ಪ್ರಜಾಪ್ರಭುತ್ವದ ಕೈಗನ್ನಡಿ: ಮುರ್ಮು
ಅಯತೊಲ್ಲಾ ಖಮೇನಿ ನಿಧನಕ್ಕೆ ಕಲಬುರಗಿ ಪಾಲಿಕೆ ಸಂತಾಪ