ರಿಯಲ್ ಎಸ್ಟೇಟ್ ಬುದ್ಧಿ ಬದಿಗಿಟ್ಟು ಬಿಡದಿ ಸಮಸ್ಯೆ ಬಗೆಹರಿಸಿ

KannadaprabhaNewsNetwork |  
Published : Jul 17, 2026, 02:00 AM IST
ವಿಜಯೇಂದ್ರ | Kannada Prabha

ಸಾರಾಂಶ

ರಾಜ್ಯದ ಜನರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು `ಡೈಲಾಗ್ ಕಿಂಗ್'''' ಎಂದು ಕರೆಯುತ್ತಿದ್ದು, `ಡೈಲಾಗ್ ಹೊಡೆಯೋದು ಬಿಟ್ಟು ರೈತರಿಗೆ ಸ್ಪಂದಿಸಿ. ರಿಯಲ್ ಎಸ್ಟೇಟ್ ಬುದ್ಧಿ ಬದಿಗಿಟ್ಟು ಬಿಡದಿ ಸಮಸ್ಯೆ ಬಗೆಹರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಕಿದರು.

ಹಾವೇರಿ:ರಾಜ್ಯದ ಜನರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು `ಡೈಲಾಗ್ ಕಿಂಗ್'''''''''''''''' ಎಂದು ಕರೆಯುತ್ತಿದ್ದು, `ಡೈಲಾಗ್ ಹೊಡೆಯೋದು ಬಿಟ್ಟು ರೈತರಿಗೆ ಸ್ಪಂದಿಸಿ. ರಿಯಲ್ ಎಸ್ಟೇಟ್ ಬುದ್ಧಿ ಬದಿಗಿಟ್ಟು ಬಿಡದಿ ಸಮಸ್ಯೆ ಬಗೆಹರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಕಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಡೈಲಾಗ್ ಬಿಟ್ಟು ಬಿಡದಿ ರೈತರಿಗೆ ಸ್ಪಂದಿಸಿ. ಬಿಡದಿಯ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದ್ದೀರಿ. ಆ ದೇವರು ನಿಮಗೆ ಎಂದಿಗೂ ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಡದಿ ಯೋಜನೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ಕನಸಿನ ಕೂಸು ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನಾವು ಯಾವತ್ತೂ ಯಾವ ರೈತರಿಂದಲೂ ಒತ್ತಾಯದಿಂದ ಜಮೀನು ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದೆವು. ಆದರೆ ಈಗ ಬಿಡದಿ ರೈತರು `ಸಂಜೆ ನಮ್ಮ ಮನೆಗೆ ಗೂಂಡಾಗಳು ಬರ್ತಾರೆ, ನಾವು ಏನ್ ಮಾಡೋದು'''' ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ರೈತರ ರಕ್ಷಣೆಗೆ ರಾಜ್ಯದ ಮುಖ್ಯಮಂತ್ರಿಗಳೇ ನೇರವಾಗಿ ಬರಬೇಕು. ಇಲ್ಲದಿದ್ದರೆ ಅಧಿಕಾರಿಗಳಿಗೆ ರೈತರು ಹೇಗೆ ಪೊರಕೆ ಹಿಡಿದು ಓಡಿಸಿದರೋ, ಅದೇ ರೀತಿ ಸಿಎಂ ಮನೆಗೆ ರೈತರು ಪೊರಕೆ ಹಿಡಿದು ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಬಿಡದಿ ವಿಚಾರದಲ್ಲಿ ಮೂರು ಜನರ ಸಮಿತಿ ರಚಿಸಿ ಸರ್ಕಾರ ನಾಟಕ ಆಡುತ್ತಿದೆ ಎಂದು ಆರೋಪಿಸಿದ ಅವರು, ಬಿಡದಿ ವಿಚಾರವನ್ನು ಕೈಬಿಟ್ಟರೆ ನಿಮಗೂ ಒಳ್ಳೆಯ ಶ್ರೇಯಸ್ಸು ಸಿಗುತ್ತದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ಯೋಜನೆ ಮಾಡಿದ್ದರೆ, ಇಂದು ನೀವು ಬಿಡದಿ ರೈತರ ವಿರುದ್ಧ ಹೋಗುತ್ತೀರಾ? ನಿಮ್ಮ ರಿಯಲ್ ಎಸ್ಟೇಟ್ ಬುದ್ಧಿಯನ್ನು ಬದಿಗಿಟ್ಟು ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋನಂ ವಾಂಗ್ಚೂಕ್ ಹೋರಾಟಕ್ಕೆ ಗದುಗಿನಲ್ಲಿ ಬೆಂಬಲ
ಬೆಳೆವಿಮೆ ಯೋಜನೆ: ರೈತರಿಗೆ ಸಹಕಾರ ನೀಡದ ಬ್ಯಾಂಕ್ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ