ತುಂಗಭದ್ರಾ ಹಾಗೂ ಕೃಷ್ಣ ಬಿಸ್ಕೀಮ್ ಅಡಿಯಲ್ಲಿ ತಾಲೂಕಿನ ಏಳು ಕೆರೆಗಳು ಭರ್ತಿಯಾಗಿರುವುದರಿಂದ ನ. 25ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಬಾಗಿನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರೂ ಭಾಗಿಯಾಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮನವಿ ಮಾಡಿದ್ದಾರೆ.
ಕನಕಗಿರಿ: ತುಂಗಭದ್ರಾ ಹಾಗೂ ಕೃಷ್ಣ ಬಿಸ್ಕೀಮ್ ಅಡಿಯಲ್ಲಿ ತಾಲೂಕಿನ ಏಳು ಕೆರೆಗಳು ಭರ್ತಿಯಾಗಿರುವುದರಿಂದ ನ. 25ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಬಾಗಿನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರೂ ಭಾಗಿಯಾಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮನವಿ ಮಾಡಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಲಕ್ಷ್ಮೀದೇವಿ, ಬಸರಿಹಾಳ, ದೇವಲಾಪುರ, ನಾಗಲಾಪುರ, ರಾಂಪುರ, ಲಾಯದುಣಸಿ ಸೇರಿದಂತೆ ಏಳು ಕೆರೆಗಳು ಭರ್ತಿಯಾಗಿ ಕೊಡಿ ಹರಿಯುತ್ತಿವೆ. ಈ ಹಿನ್ನಲೆಯಲ್ಲಿ ನ. 25ರಂದು ಸಚಿವ ಶಿವರಾಜ ತಂಗಡಗಿ ಅವರು ಬಾಗಿನ ಅರ್ಪಿಸಲಿದ್ದಾರೆ. ಏಳು ಕೆರೆಗಳು ತುಂಬಿದ್ದರಿಂದ ಅಂತರ್ಜಲ ವೃದ್ಧಿಯಾಗಿ ನೀರಾವರಿಗೆ ಹಾಗೂ ಜನ, ಜಾನುವಾರುಗಳಿಗೆ ಅನುಕೂಲವಾಗಿದೆ. 2014ರಲ್ಲಿ ತುಂಗಭದ್ರಾ ನದಿ ನೀರು ಲಕ್ಷ್ಮೀದೇವಿ ಕೆರೆಗೆ ಹರಿದು ಬಂದಿತ್ತು. ಪ್ರಸಕ್ತ ಸಾಲಿನಲ್ಲಿ ಕೃಷ್ಣ ಬಿ-ಸ್ಕೀಮ್ ನೀರು ಕ್ಷೇತ್ರಕ್ಕೆ ಬಂದಿದ್ದು, ಬಹುತೇಕ ಕೆರೆಗಳು ಭರ್ತಿಯಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಸದ್ಯ ತಾಲೂಕಿನಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿ ನೀರು ಬಂದಿದ್ದು, ಈ ಭಾಗದ ಜನರಿಗೆ ಸಂತಸಗೊಂಡಿದ್ದಾರೆ. ಅದಕ್ಕಾಗಿ ಸಚಿವ ಶಿವರಾಜ ತಂಗಡಗಿ ಅವರಿಗೆ ಗೌರವ ಸಲ್ಲಿಸುವ ಇಚ್ಛೆಯಿಂದ ಕಾಂಗ್ರೆಸ್‌ನಿಂದ ಬಾಗಿನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ ಮಾತನಾಡಿ, ಬಾಗಿನ ಕಾರ್ಯಕ್ರಮದ ಭಾಗವಾಗಿ ಮಂಗಳವಾರ ಕನಕಾಚಲಪತಿ ದೇವಸ್ಥಾನದಿಂದ ಕೃಷ್ಣ ವೃತ್ತದ ವರೆಗೆ ಕಲಶ, ಕುಂಭ ಮೆರವಣಿಗೆ ನಡೆಯಲಿದೆ ಎಂದರು.
ಪಪಂ ಉಪಾಧ್ಯಕ್ಷ ಕಮಠಿರಂಗಪ್ಪ ನಾಯಕ, ಸದಸ್ಯರಾದ ಅನಿಲ ಬಿಜ್ಜಳ, ರಾಜಸಾಬ ನಂದಾಪುರ, ಶರಣೇಗೌಡ, ಪ್ರಮುಖರಾದ ಸಿದಪ್ಪ ನಿರ್ಲೂಟಿ, ರವಿ ಪಾಟೀಲ್, ಬಸವಂತಗೌಡ, ಶಾಂತಪ್ಪ ಬಸರಿಗಿಡ, ಹೊನ್ನೂರು ಚಳ್ಳಮರದ ಹಾಗೂ ಸಚಿವ ತಂಗಡಗಿ ಆಪ್ತ ಸಹಾಯಕ ವೆಂಕಟೇಶ ಇತರರಿದ್ದರು.
ಶಾಸಕ ರಾಯರೆಡ್ಡಿ ಕೊಡುಗೆ: ಕೃಷ್ಣ ಬಿ-ಸ್ಕೀಮ್ ಅನುಷ್ಠಾನಕ್ಕೆ ಶಾಸಕ ರಾಯರೆಡ್ಡಿ ಅವಿತರವಾಗಿ ಶ್ರಮಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿ ಬೃಹತ್ ಯೋಜನೆಗಳಿಗೆ ರಾಯರೆಡ್ಡಿ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂಥವರು ಸಚಿವ ಸ್ಥಾನಕ್ಕಿಂತ ಉನ್ನತ ಹುದ್ದೆಯಲ್ಲಿರಬೇಕು ಎಂದು ಕಾಂಗ್ರೆಸ್ ಮುಖಂಡರು ಸ್ಮರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.