ಒಳಚರಂಡಿ ಪೈಪು ಒಡೆದು ಕಲ್ಮಶ ನೀರು ರಸ್ತೆಗೆ

KannadaprabhaNewsNetwork |  
Published : Nov 20, 2024, 12:34 AM IST
19ಕೆಆರ್ ಎಂಎನ್ 4.ಜೆಪಿಜಿಒಳಚರಂಡಿ ಪೈಪು ಒಡೆದು ಕಲ್ಮಶ ನೀರು ರಸ್ತೆಯಲ್ಲಿ ಹರಿಯುತ್ತಿರುವುದು. | Kannada Prabha

ಸಾರಾಂಶ

ರಾಮನಗರ: ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ (ಮೆಡಿಪ್ಲಸ್ ಪಕ್ಕ) ಬಳಿ ಒಳಚರಂಡಿ ಪೈಪು ಒಡೆದು ಕಲ್ಮಶ ನೀರು ಉಕ್ಕಿ ರಸ್ತೆಯಲ್ಲಿ ಕಳೆದೊಂದು ತಿಂಗಳಿನಿಂದ ಹರಿಯುತ್ತಿದೆ. ಈ ವಿಚಾರವನ್ನು ಒಳಚರಂಡಿ ಮಂಡಳಿ ಮತ್ತು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು ಯಾವ ಉಪಯೋಗವು ಆಗಿಲ್ಲ ಎಂದು ಎಂ.ಜಿ.ರಸ್ತೆಯ ವ್ಯಾಪಾರಿಗಳು ಮತ್ತು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂ.ಜಿ.ರಸ್ತೆಯ ಅಡಿಯಲ್ಲಿ ಹುದಗಿರುವ ಒಳಚರಂಡಿ ಪೈಪು ಒಡೆದು ಹೋಗಿ ಕಲ್ಮಶ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಈ ಭಾಗದಲ್ಲಿ ಗಬ್ಬು ವಾಸನೆ ಹರಡಿದೆ. ವಾಹನಗಳು ಕಲ್ಮಶ ನೀರಿನ ಮೇಲೆ ಸಂಚಿರಿಸುವಾಗ ನೀರು ಅಕ್ಕಪಕ್ಕದ ಅಂಗಡಿಗಳು ಮತ್ತು ಪಾದಚಾರಿಗಳಿಗೆ ಚಿಮ್ಮಿ ಅಸಹ್ಯ ಉಂಟು ಮಾಡುತ್ತಿದೆ ಎಂದು ಸ್ಥಳೀಯ ವ್ಯಾಪಾರಿಗಳು ದೂರಿದ್ದಾರೆ.

ರಸ್ತೆಗೆ ಮಹಾತ್ಮ ಗಾಂಧಿಯವರ ಹೆಸರು ದಶಕಗಳ ಹಿಂದೆ ನಾಮಕರಣವಾಗಿದೆ. ಆದರೆ ರಾಷ್ಟ್ರಪಿತನ ಗೌರವಕ್ಕೆ ತಕ್ಕದಾಗಿ ಈ ರಸ್ತೆ ಅಭಿವೃದ್ದಿಯಾಗಲೇ ಇಲ್ಲ. ಈಗ ಒಳಚರಂಡಿ ಪೈಪು ಒಡೆದು ಹೋಗಿ ಕಲ್ಮಶ ನೀರು ಹರಿಯುತ್ತಿದ್ದರು ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ ಎಂದು ನಾಗರೀಕರು ದೂರಿದ್ದಾರೆ.

ಪೈಪು ಒಡೆದ ಹೋಗಿ ಕಲ್ಮಶ ನೀರು ಹರಿಯುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ಮತ್ತು ವ್ಯಾಪಾರಸ್ಥರು ನಗರಸಭೆ, ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ. ಒಳಚರಂಡಿ ಮಂಡಳಿ ಅಧಿಕಾರಿಗಳು ದೂರು ಸ್ವೀಕರಿಸಿ ಹಿಂಬರಹ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಎರಡನೇ ಅವಧಿಗೆ ಇನ್ನು ಚುನಾವಣೆ ನಡೆಯದಿರುವುದರಿಂದ ಅಧಿಕಾರಿಗಳದ್ದೇ ರಾಜ್ಯಬಾರ. ನಾಗರೀಕರ ಅಹವಾಲಿಗೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ನಾಗರೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

19ಕೆಆರ್ ಎಂಎನ್ 4.ಜೆಪಿಜಿ

ಒಳಚರಂಡಿ ಪೈಪು ಒಡೆದು ಕಲ್ಮಶ ನೀರು ರಸ್ತೆಯಲ್ಲಿ ಹರಿಯುತ್ತಿರುವುದು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...