ನಾರಾಯಣ ಮಾಯಾಚಾರಿಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಹೌದು, ಈ ಬಡಾವಣೆಯಲ್ಲಿ ಯಾರಾದರೂ ಸಂಚಾರ ಮಾಡಿದರೇ ಸಾಕು ಯಾಕಪ್ಪ ಇಲ್ಲಿಗೆ ಬಂದು ಬಿಟ್ಟೇವು ಎನ್ನುವಷ್ಟರ ಮಟ್ಟಿಗೆ ರಸ್ತೆಗಳು ಹಾಳಗಿ ಹೋಗಿವೆ. ಚರಂಡಿಗಳು ಇಲ್ಲದೇ ನಿತ್ಯ ಸ್ನಾನ ಮಾಡಿದ ಮತ್ತು ಇನ್ನಿತರ ಮಲೀನ ನೀರು ರಸ್ತೆಯ ಮಧ್ಯೆಭಾಗದಲ್ಲಿಯೇ ಹರಿದು ಗಬ್ಬು ವಾಸನೆ ಬೀರುತ್ತಿದೆ. ಹೀಗಾಗಿ ಈ ಮಾರ್ಗವಾಗಿ ಸಂಚರಿಸುವವರು ಮೂಗು ಮುಚ್ಚಿಕೊಂಡೇ ಸಂಚಾರ ಮಾಡುವ ಸ್ಥಿತಿ ಬಂದಿದೆ. ಈ ಬಡಾವಣೆಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವ ಬಡ ಕುಟುಂಬಗಳೇ ವಾಸ ಮಾಡುತ್ತಿವೆ. ಸರ್ಕಾಗಳು ಇಂತಹ ಕೊಳಚೆ ಪ್ರದೇಶ ಮತ್ತು ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುವ ಬಡಾವಣೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದರೂ ಆ ಅನುದಾನ ಸಮರ್ಪಕವಾಗಿ ಬಳಕೆಯಾಗದೇ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಹೀಗಾಗಿ ಇಲ್ಲಿ ವಾಸಿಸುವ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಗಳು ಸಂಪೂರ್ಣ ಕೊಳಚೆಯಾಗಿ ಮಾರ್ಪಟ್ಟಿವೆ. ಇದರಿಂದ ಸೊಳ್ಳೆಗಳ ಕಾಟ ಕೂಡಾ ಹೆಚ್ಚಾಗಿದೆ. ಅದಲ್ಲದೇ ಸಾಂಕ್ರಾಮಿಕ ರೋಗಳ ಭೀತಿ ಜನರಲ್ಲಿ ಮನೆ ಮಾಡಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
-------------ಕೋಟ್
-------------
ನೇಬಗೇರಿ ಗ್ರಾಮದ ಬಹುತೇಕ ಜನರು ರಸ್ತೆಯಲ್ಲಿಯೇ ದನ ಕರುಗಳನ್ನು ಕಟ್ಟುತ್ತಾರೆ. ಇದರಿಂದಾಗಿ ಅಲ್ಲಿರುವ ಚರಂಡಿಗಳಲ್ಲಿ ಕಸಕಡ್ಡಿಗಳನ್ನು ಎಸೆಯುತ್ತಿರುವುದರಿಂದ ಚರಂಡಿಯೂ ತುಂಬಿ ಬ್ಲಾಕ್ ಆಗಿ ರಸ್ತೆ ಮೇಲೆ ನೀರು ಹರಿಯುತ್ತದೆ. ಅದರಂತೆ ಪ್ರತಿ ಸಲವೂ ಈ ಚರಂಡಿ ತುಂಬಿದ್ದ ಬಗ್ಗೆ ಮಾಹಿತಿ ತಿಳಿದು ಸ್ವಚ್ಛ ಮಾಡಲು ತಿಳಿಸಲಾಗಿದೆ. ನಮ್ಮ ಇಲಾಖೆಯ ಜವಾಬ್ದಾರಿ ಹೇಗೆ ಇರುತ್ತದೆಯೋ ಹಾಗೆ ಆಯಾ ಬಡಾವಣೆಯ ಗ್ರಾಮಗಳ ನಿವಾಸಿಗಳ ಜವಾಬ್ದಾರಿಯೂ ಮುಖ್ಯವಾಗುತ್ತದೆ.-ಆನಂದ ಹಿರೇಮಠ, ಪಿಡಿಒ ಗ್ರಾಪಂ ಕೋಳೂರ