ಕನ್ನಡಪ್ರಭವಾರ್ತೆ ಜಗಳೂರು
ಪಟ್ಟಣದ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿ ನಡೆಯಲಿದೆ. ಅದರ ಪ್ರಯುಕ್ತ ಜಗಳೂರು ತಾಲೂಕಿನ ೧೮ ತಾಂಡಗಳಿಂದ ಒಗ್ಗೂಡಿ ಆಚರಣೆ ಮಾಡಲಾಗುತ್ತಿದೆ. ಕೇವಲ ಒಂದೇ ಸಮುದಾಯವಲ್ಲದೆ ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಸಂಘದ ಕಾರ್ಯದರ್ಶಿ ಕುಮಾರ್ನಾಯ್ಕ ಮಾತನಾಡಿ, ಪಟ್ಟಣದಲ್ಲಿ ಲಂಬಾಣಿ ಸಮುದಾಯಕ್ಕೆ ಜಯಂತಿ ಮಾಡಲು ಸ್ವಂತ ಜಾಗವಿಲ್ಲ. ಹಾಗಾಗಿ ತಾಲೂಕು ಕಚೇರಿ ಮುಂಭಾಗದಲ್ಲಿ ಹೋಮ, ಪೂಜೆಗಳನ್ನು ಮಾಡಲಾಗುವುದು. ಕಾರ್ಯಕ್ರಮದಲ್ಲಿ ಕುಮಾರ್ ಮಹಾರಾಜ್, ಶಿವಪ್ರಕಾಶ್ ಮಹಾರಾಜ್, ದೇನ್ಯಾಭಗತ್ ಸ್ವಾಮಿ, ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ ರಾಮಚಂದ್ರ, ಎಚ್.ಪಿ ರಾಜೇಶ್, ಕೆ.ಪಿ ಪಾಲಯ್ಯ ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.ತಾಲೂಕಿನಿಂದ ೧೮ ತಾಂಡಗಳಿವೆ. ಸುಮಾರು ನೂರಕ್ಕಿಂತ ಹೆಚ್ಚು ಮಾಲಾಧಾರಿಗಳು ಆಗಮಿಸಲಿದ್ದಾರೆ. ೮೦ಕ್ಕೂ ಹೆಚ್ಚು ತೀಜ್ ಪುಟ್ಟಿಗಳು ಆಗಮಿಸಲಿದ್ದಾರೆ. ಈ ಬಾರಿ ಸೇವಾಲಾಲ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಎಲ್ಲಾ ಸಮಾಜದ ಮುಖಂಡರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಂಜಾರ ಸಮಾಜದ ಧರ್ಮನಾಯ್ಕ ಮಾತನಾಡಿ, ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಮಾಜಕ್ಕೆ ಶೇ ೪.೫ ರಷ್ಟು ಮೀಸಲಾತಿಯನ್ನು ಕೊಟ್ಟಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಸಮುದಾಯದ ಜತೆಗೆ ಇತರೆ ೫೯ ಸಮುದಾಯಗಳನ್ನು ಸೇರಿಸಿ ಶೇ ೫ ರಷ್ಟು ಮಾತ್ರ ಮೀಸಲಾತಿಯನ್ನು ಕೊಟ್ಟು ಅನ್ಯಾಯ ಮಾಡಿದೆ. ಆದ್ದರಿಂದ ಸೂರಗೊಂಡನಕೊಪ್ಪದಲ್ಲಿ ನಡೆಯುವ ಜಯಂತಿ ವೇದಿಕೆ ಸರ್ಕಾರದ ಯಾವ ಮಂತ್ರಿ, ಶಾಸಕರಿಗೆ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.