ಕನ್ನಡಪ್ರಭ ವಾರ್ತೆ ರಾಮದುರ್ಗ
ಬಾಲಕರ ವಿಭಾಗದ 8×100 ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ, ಪೋಲ್ ವಾಲ್ಟ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಪ್ರಥಮ, 8×100ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ, ಪೋಲ್ ವಾಲ್ಟ್‌ನಲ್ಲಿ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕು ಮಟ್ಟಕ್ಕೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಮುಖ್ಯಗುರು ಎಸ್.ಟಿ.ಹುಣಶಿಕಟ್ಟಿ, ಶಿಕ್ಷಕರಾದ ಬಿ.ಆರ್.ದ್ಯಾಮನಗೌಡರ, ಜಿ.ಜೆ.ನಾಯಕ, ಎಸ್.ಎಂ.ಪಾಟೀಲ, ಬಿ.ಎಲ್.ಕೆಳಗೇರಿ, ಸಿ.ಬಿ.ಡಂಬಲ, ಯು.ಪಿ.ದಂಡನ್ನವರ, ಆರ್.ಡಿ.ಕೊರವರ, ಶ್ರೀನಿವಾಸ ಗುಂಜೀರಿ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.