ಇಂಗ್ಲಿಷ್‌ ಸಾಹಿತ್ಯಕ್ಕೆ ಶೇಕ್ಷಪೀಯರ್‌ ಕೊಡುಗೆ ಅಪಾರ

KannadaprabhaNewsNetwork |  
Published : Apr 24, 2025, 11:52 PM IST
ಪೋಟೋಶೇಕ್ಷಿ ಪೀಯರ್ ಅವರ 462ನೇ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಂಗ್ಲೀಷ ಸಹಾಯಕ ಪ್ರಾಧ್ಯಾಪಕ ಅರುಣಕುಮಾರ ಮಾತನಾಡಿದರು.   | Kannada Prabha

ಸಾರಾಂಶ

ಶೇಕ್ಷಪೀಯರ್‌ ಬದುಕಿದ್ದು 52 ವರ್ಷಗಳೇ ಆದರೂ ಅಷ್ಟರಲ್ಲೇ 39 ನಾಟಕ ರಚಿಸಿದರು. ಆ ನಾಟಕಗಳ ಪೈಕಿ ಒಂದು ಸಾಲನ್ನೂ ತೆಗೆದು ಹಾಕಲು ಸಾಧ್ಯವಾಗದಷ್ಟು ಜೀವ ತುಂಬಿದ್ದಾರೆ.

ಕನಕಗಿರಿ:

ಇಂಗ್ಲಿಷ್‌ ಸಾಹಿತ್ಯಕ್ಕೆ ಶೇಕ್ಷಪೀಯರ್‌ ಕೊಡುಗೆ ಅಪಾರ ಎಂದು ಸಹಾಯಕ ಪ್ರಾಧ್ಯಾಪಕ ಅರುಣಕುಮಾರ ಎ.ಜಿ. ಹೇಳಿದರು.

ಅವರು ಬುಧವಾರ ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇಕ್ಷ ಪೀಯರ್ ಅವರ 462ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಶೇಕ್ಷಪೀಯರ್‌ ಬದುಕಿದ್ದು 52 ವರ್ಷಗಳೇ ಆದರೂ ಅಷ್ಟರಲ್ಲೇ 39 ನಾಟಕ ರಚಿಸಿದರು. ಆ ನಾಟಕಗಳ ಪೈಕಿ ಒಂದು ಸಾಲನ್ನೂ ತೆಗೆದು ಹಾಕಲು ಸಾಧ್ಯವಾಗದಷ್ಟು ಜೀವ ತುಂಬಿದ್ದಾರೆ. 19 ಹಾಗೂ 20ನೇ ಶತಮಾನದ ಕಾಲಘಟ್ಟದಲ್ಲಿ ನಾಟಕ, ಕಥೆ, ಕಾದಂಬರಿಗಳ ಅನುವಾದ ಆರಂಭವಾದಾಗ ಕನ್ನಡ ರಂಗಭೂಮಿಯಲ್ಲಿದ್ದ ಬಹಳಷ್ಟು ಅನುವಾದಕರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಶೇಕ್ಷಪೀಯರ್‌ ಅವರನ್ನು ತಂದರು. ಅವರು ಪಟ್ಟ ಪ್ರಯತ್ನವೇ ಇಂದಿನ ಸ್ಮರಣೆಗೆ ಸಾಕ್ಷಿ ಎಂದರು.

ಪ್ರಾಂಶುಪಾಲ ಬಜರಂಗಬಲಿ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ಭಾಷಾ ವಿಭಾಗದ ವಿದ್ಯಾರ್ಥಿಗಳು ಶೇಕ್ಷಪೀಯರ್‌ ರಚಿಸಿದ ಕಿರು ನಾಟಕ ಪ್ರದರ್ಶಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ. ಆಶಿಕಾ, ರಕ್ಷಿತ್ ಎ, ಮರ್ವಿನ್ ಡಿಸೋಜ, ಲಲಿತಾ ಕಿನ್ನಾಳ, ವೀರೇಶ ಕೆಂಗಲ್, ಉಪನ್ಯಾಸಕರಾದ ಶಾಂತಮ್ಮ, ದೇವೆಂದ್ರಪ್ಪ, ರಾಮ ಗೋಪಾಲ, ಸೋಮಶೇಖರಪ್ಪ, ರವಿಕುಮಾರ, ಬಸವರಾಜ, ಮಾಲತಿ, ನಿಂಗಪ್ಪ, ಎಸ್.ಕೆ. ಖಾದ್ರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ