ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಪಟ್ಟಣದ ಶಾಂತಿಪುರ ಗ್ರಾಮದಲ್ಲಿನ ನಿರಾಶ್ರಿತ ಮಾನಸಿಕ ಅಸ್ವಸ್ಥರ ಪುನರ್ವಸತಿ ತಾಣ (ಚಿತ್ತಧಾಮ) ದಲ್ಲಿ ಬೆಂಗಳೂರಿನ ಚಿತ್ತಪ್ರಕಾಶ್ ಚಾರಿಟಬಲ್ ಟ್ರಸ್ಟ್ ಸೇರಿದಂತೆ ಇನ್ನಿತರ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಚಿತ್ತಧಾಮಕ್ಕೆ ಸೇರುವಾಗ ಆ ವ್ಯಕ್ತಿ ವಿದೇಶಿ ವ್ಯಕ್ತಿ ಎಂದು ತಿಳಿದಿರಲಿಲ್ಲ. ಆತ ಗುಣಮುಖನಾದ ಬಳಿಕ ಆತನನ್ನು ಅವರ ಸಂಬಂಧಿಕರ ಮನೆಗೆ ಬಿಡಲು ಕೊಲ್ಕತ್ತಾಗೆ ತೆರಳಿದಾಗ ಆತ ಬಾಂಗ್ಲಾದೇಶದ ಡಾಕಾ ವ್ಯಕ್ತಿ ಎಂದು ತಿಳಿಯಿತು ಎಂದು ಹೇಳಿದರು.ನಮ್ಮ ಪುನರ್ವಸತಿ ತಾಣಕ್ಕೆ ರಾಜ್ಯವಲ್ಲದೇ, ಹರಿಯಾಣ, ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಿಂದ ಇಲ್ಲಿ ಬಂದು ತಪಾಸಣೆಗೆ ಒಳಗಾಗಿದ್ದಾರೆ. ಅಲ್ಲದೇ ಗುಣಮುಖರಾಗಿ ತೆರಳಿದ್ದಾರೆ, ಬೇರೆ ರಾಜ್ಯದಿಂದ ಬರಲು ಹೋಗಲು ಬಡತನ ಎದುರಾದ ಸಂದರ್ಭದಲ್ಲಿ ಅವರಿಗೆ ನಮ್ಮ ಟ್ರಸ್ಟ್ ಮೂಲಕವೇ ಹಣದ ವ್ಯವಸ್ಥೆ ಮಾಡಿ ಅವರ ಆರೋಗ್ಯದ ಕಾಳಜಿ ವಹಿಸಿದೆ ಎಂದು ಅವರು ತಿಳಿಸಿದರು.
ಈ ಬಾರಿಯ ಧ್ಯೇಯ ವಾಕ್ಯದಂತೆ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ ಇದಾಗಿದೆ ಎಂದರು.
ಪಡುವಲು ವಿರಕ್ತ ಮಠದ ಮಹದೇವ ಸ್ವಾಮೀಜಿ ಮಾತನಾಡಿ ''''''''ಒಬ್ಬ ಮನುಷ್ಯ ಮಾನಸಿಕವಾಗಿ ಖಿನ್ನತೆ ಒಳಗಾದ ವ್ಯಕ್ತಿಯನ್ನು ನಮ್ಮ ಸಮಾಜ ಬೇರೆ ಮನೋಭಾವದಲ್ಲಿ ನೋಡಲು ಆರಂಭಿಸುತ್ತಾರೆ, ಅದಾಗಬಾರದು, ಅವರು ಸಹ ಮನುಷ್ಯರು, ಅವರಿಗೆ ಚಿಕಿತ್ಸೆ ನೀಡಿಸುವಂತಹ ಕೆಲಸಕ್ಕೆ ಭಾಗಿಯಾಗಬೇಕು'''''''' ಎಂದರು.
ವಿವಿಧ ಆಟೋಟಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಗಿರಿಜನ ಮುಖಂಡ ಪದ್ಮಶ್ರೀ ಪುರಸ್ಕೃತ ಸೋಮಣ್ಣ, ಮನೋರೋಗ ತಜ್ಞರಾದ ಡಾ. ಸಂಜೀವ್ ಜೈನ್, ಡಾ. ಮುರುಳಿ, ಆರಕ್ಷಕ ಉಪ ನಿರೀಕ್ಷಕ ಬಿ. ಪ್ರಕಾಶ್, ಪುರಸಭಾ ಸದಸ್ಯ ಲೋಕೇಶ್, ವಕೀಲರಾದ ಕೃಷ್ಣೇಗೌಡ, ಸರಸ್ವತಿ, ಮಹೇಶ್, ಮುಖಂಡ ದೊಡ್ಡನಾಯಕ, ಪಳನಿಸ್ವಾಮಿ, ಶಿವಮ್ಮ ದೇವರಾಜು, ಸಣ್ಣಮ್ಮ, ಕವಿತಾ, ಸುನೀತಾ, ರಮೇಶ್, ಚಿತ್ತಧಾಮದ ಸಿಬ್ಬಂದಿ ಮಹದೇವಸ್ವಾಮಿ, ಮಂಜುಳಾ ಇದ್ದರು.